ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Get real time updates directly on you device, subscribe now.

 2024 -25 ನೇ ಸಾಲಿನ ಡಾ.ಬಿ.ಅರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಿವಿಧ ವಿವಿಧ ಯೋಜನೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ : ಬ್ಯಾಂಕ್ ಸಾಲ 20 ರಷ್ಟು ಸಹಾಯಧನ ಅಥವಾ ಗರಿಷ್ಟ 1 ಲಕ್ಷ ರೂ ಘಟಕ ವೆಚ್ಚ 70 ರಷ್ಟು ಸಹಾಯಧನ ಅಥವಾ ಗರಿಷ್ಟ 2 ಲಕ್ಷ ರೂ ಇರುತ್ತದೆ.
ಸ್ವಾವಲಂಬಿ ಸಾರಥಿ: ಸರಕು ವಾಹನ ಟ್ಯಾಕ್ಸಿ, ಹಳದಿ ಬೋರ್ಡ ಖರೀದಿಸುವ ಉದ್ದೇಶಕ್ಕೆ ಸಾಲದ ಮೊತ್ತದ 75 ರಷ್ಟು ಸಹಾಯಧನ ಅಥವಾ ಗರಿಷ್ಟ 4 ಲಕ್ಷ ರೂ ಇರುತ್ತದೆ.
ಸ್ವಯಂ ಉದ್ಯೋಗ (ನೇರಸಾಲ ಯೋಜನೆ) : ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುತ್ತದೆ. ಘಟಕ ವೆಚ್ಚ 1 ಲಕ್ಷ ರೂ ಸಹಾಯಧನ 50,000 ಸಾಲ, 50,000 4 ರಷ್ಟು ಬಡ್ಡಿ ದರ ಇರುತ್ತದೆ.
ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ: ಮಹಿಳಾ ಸ್ವ ಸಹಾಯ ಸಂಘಗಳಿಗೆ ಕನಿಷ್ಟ 10 ಜನ ಸದಸ್ಯರು ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುವುದು. ಘಟಕ ವೆಚ್ಚ 2.50 ಲಕ್ಷ ರೂ ಸಹಾಯಧನ 1.50 ಲಕ್ಷ ರೂ ಸಾಲ 1 ಲಕ್ಷ ರೂ 4 ರಷ್ಟು ಬಡ್ಡಿ ದರ ಇರುತ್ತದೆ.
ಭೂ ಒಡೆತನ ಯೋಜನೆ : ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಘಟಕ ವೆಚ್ಚದಲ್ಲಿ ಕೃಷಿ ಜಮೀನು ಖರೀದಿಸಿ ನೀಡಲಾಗುವುದು. ಘಟಕ ವೆಚ್ಚ 25 ಲಕ್ಷ ರೂ, 20 ಲಕ್ಷ ರೂ ಸಹಾಯಧನ 50 ರಷ್ಟು ಸಾಲ 50 ರಷ್ಟು, 6 ರಷ್ಟು ಬಡ್ಡಿದರ ಇರುತ್ತದೆ.
ಗಂಗಾ ಕಲ್ಯಾಣ ಯೋಜನೆ : 1.20 ಗುಂಟೆಯಿAದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆದು ಪಂಪಸೆಟ್ ಅಳವಡಿಸಿ ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುವುದು. ಘಟಕ ವೆಚ್ಚ 4.75 ಲಕ್ಷ ರೂ, 3.75 ಲಕ್ಷ ರೂ ಇದರಲ್ಲಿ 50.000 ಸಾಲವು ಸೇರಿರುತ್ತದೆ.
ವಿಶೇಷ ಸೂಚನೆ: ಅರ್ಜಿಯನ್ನು ಸೇವಾ ಸಿಂಧು ಪೋರ್ಟಿನಲ್ಲಿ ಮಾತ್ರ ಸಲ್ಲಿಸುವುದು, ನಂತರ ಅದರ ಸ್ವೀಕೃತಿಯನ್ನು ಫಲಾನುಭವಿಗಳು ತಮ್ಮ ಬಳಿ ಇಟ್ಟುಕೊಳ್ಳುವುದು. ಆ ಸ್ವೀಕೃತಿಯ ಯಾವುದೇ ಪ್ರತಿ ಹಾಗೂ ಯಾವುದೇ ದಾಖಲಾತಿಗಳು ಜಿಲ್ಲಾ ಕಚೇರಿಗೆ ಸಲ್ಲಿಸುವ ಅಗತ್ಯ ಇರುವುದಿಲ್ಲ., ಮಂಡಳಿ ವಿವೇಚನಾ ಕೋಟಾ ಅಥವಾ ಸರಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸುವಿಧಾ ಪೋರ್ಟಲ್ ಮೂಲಕವೇ ಮಾತ್ರ ಸಲ್ಲಿಸುವುದು. ಯಾವುದೇ ಸ್ವೀಕೃತಿ ಕಚೇರಿಗೆ ತೆಗೆದುಕೊಳ್ಳಲಾಗುವುದಿಲ್ಲ., ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು, ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ., ವಿವಿಧ ನಿಗಮಗಳಿಗೆ ಸಂಬAಧಪಡುವ ಜಾತಿಗಳು ಆಯಾ ನಿಗಮದ ಅಡಿಯಲ್ಲಿ ಮಾತ್ರವೇ ಅರ್ಜಿ ಸಲ್ಲಿಸುವುದು. ಬೇರೆ ನಿಗಮದಡಿ ಸಲ್ಲಿಸಿರುವ ಅರ್ಜಿ ಆ ನಿಗಮದಡಿ ಬರದೇ ಇದಲ್ಲಿ ಅದಕ್ಕೆ ನಿಗಮವು ಜವಾಬ್ದಾರಿಯಾಗಿರುವುದಿಲ್ಲ.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವೆಬ್ ಸೈಟ್  http://adcl.karnataka.gov.in, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ವೆಬ್ ಸೈಟ್ http:adijambava.karnataka.gov.in, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವೆಬ್ ಸೈಟ್ http://kbdc.karnataka.gov.in , ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವೆಬ್ ಸೈಟ್  http://ksskdc.kar.nic.in ಗೆ ಸಂಪರ್ಕಿಸಬಹುದಾಗಿದೆ.
ಯಾವುದೇ ಸ್ವೀಕೃತಿ ಕಚೇರಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಫಲಾಪೇಕ್ಷಿಗಳು ಆನ್ ಲೈನ್ ಮೂಲಕ ಅರ್ಜಿ ಮತ್ತು ದಾಖಲಾತಿಗಳನ್ನು ಸುವಿಧ ತಂತ್ರಾAಶದ ವೆಬ್‌ಸೈಟ್  https://sevasindhukarnataka.gov.in  ಗೆ ಅಕ್ಟೋಬರ್ 10 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ 2 ನೇ ಮಹಡಿ ಜಿಲ್ಲಾ ಆಡಳಿತ ಭವನ ರೂಂ ನಂಬರ 109 ಕೊಪ್ಪಳ ಹಾಗೂ ದೂರವಾಣಿ ಸಂಖ್ಯೆ 8050854118, 8050854120, 8050854119 ಗೆ ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!