ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಕಲ್ಪಿಸಿಕೊಡಿ -ತಂಬ್ರಳ್ಳಿ
ಕೊಪ್ಪಳ ಸೆ 23, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಿಕೊಟ್ಟು ಅವರ ಮುಂದಿನ ಭವಿಷ್ಯ ಉಜ್ಜಲಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಪ್ರತಿಯೊಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಿ ಕೊಡಿ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಹೇಳಿದರು
ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾಶ್ರೀ ಎಂಬ ಬಡ ಮತ್ತು ಪ್ರತಿಭಾವಂತವಿದ್ಯಾರ್ಥಿನಿಗೆ ಸಾಕ್ಷರತಾ ದಿನಾಚರಣೆ ಪ್ರಯುಕ್ತ ಕ್ಲಬ್ಬಿನ ಐ ಎಸ್ ಓ ಮಧು ನಿಲೋಗಲ ಅವರ ವತಿಯಿಂದ ಅವರ ನಿವಾಸದಲ್ಲಿ ಕೊಡಮಾಡಿದ ವೈದ್ಯಕೀಯ ಅಧ್ಯಯನ ಮಾಡಲು ಸಹಾಯವಾಗುವ ನೀಟ್ ತರಬೇತಿ ಪಠ್ಯಪುಸ್ತಕಗಳನ್ನು ವಿತರಿಸಿ ಆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಮಾತನಾಡಿದರು
ಮುಂದುವರೆದು ಮಾತನಾಡಿ ಆಶಕ್ತ ವಿದ್ಯಾರ್ಥಿ ನಿಗೆ ವೈದ್ಯಕೀಯ ಅಧ್ಯಯನ ಮಾಡಲು ಸಹಾಯವಾಗುವ ನೀಟ್ ತರಬೇತಿ ಪಠ್ಯಪುಸ್ತಕಗಳನ್ನು ವಿತರಿಸಿದ ಮಧು ನಿಲೋಗಲ್ ರವರ ಸಮಾಜ ಸೇವಾ ಕಾರ್ಯಕ್ಕೆ ಅಭಿನಂದಿಸಿದ ಅವರು ಮಧು ನಿಲೋಗಲ ರವರು ತಮ್ಮ ನಿವಾಸದಲ್ಲಿ ವೈಯಕ್ತಿಕವಾಗಿ ಬಡ ಮತ್ತು ಪ್ರತಿಭಾ ವಂತ ವಿದ್ಯಾರ್ಥಿನಿ ವಿದ್ಯಾಶ್ರೀ ರವರಿಗೆ ಪ್ರೋತ್ಸಾಹದಾಯಕವಾಗಿ ಶೈಕ್ಷಣಿಕ ಸಾಮಗ್ರಿ ಮತ್ತು ಇತರ ಅಗತ್ಯ ಸಲಕರಣೆಗಳು ದೇಣಿಗೆಯಾಗಿ ನೀಡಿ ಆ ಬಡ ವಿದ್ಯಾರ್ಥಿ ನಿಗೆ ಪ್ರೋತ್ಸಾಹಿಸಿರುವದಕ್ಕೆ ಅವರಿಗೆ ಅಭಿನಂದಿಸಿದರು, ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷ ರಾದ ನಿತಾ ತಂಬ್ರಳ್ಳಿ ಸಂಪಾದಕೀ ನಾಗ ವೇಣಿ ಖಜಾಂಚಿ ಆಶಾ ಕವಲೂರು ಸೇರಿದಂತೆ ಕಾರ್ಯಕರ್ತರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು
Comments are closed.