ಹೃದಯದ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ಪೋಸ್ಟರ್ ಮೇಕಿಂಗ್ ಸ್ಪರ್ಧೆ
ಸೆಪ್ಟೆಂಬರ್ 29 ರಂದು ಆಚರಿಸಲ್ಪಡುವ “ವಿಶ್ವ ಹೃದಯ ದಿನ” ದ ಅಂಗವಾಗಿ ಕೆ ಎಸ್ ಆಸ್ಪತ್ರೆಯಲ್ಲಿ ಜನರಿಗೆ ಹೃದಯದ ಬಗ್ಗೆ ಜಾಗ್ರತಿ ಮೂಡಿಸುವ ಸಲುವಾಗಿ ಭಾನುವಾರದಂದು ವಿದ್ಯಾರ್ಥಿಗಳಿಗೆ ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ಆಯೋಜಿಸಲಾಯಿತು. ಈ ಸ್ಪರ್ಧೆಯಲ್ಲಿ ಸುಮಾರು 130 ಕ್ಕೂ ಅಧಿಕ ಮಕ್ಕಳು ಸ್ಪರ್ಧಿಸಿ ಆರೋಗ್ಯಕರ ಹೃದಯದ ಬಗ್ಗೆ ತಮ್ಮಲಿರುವ ಅನುಭವಗಳನ್ನೂ ಪೋಸ್ಟರ್ ಗಳ ಮೂಲಕ ಪ್ರದರ್ಶಿಸಿದರು. ಕೆ ಎಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಬಸವರಾಜ್ ಎಸ್ ಕ್ಯಾವಟರ್ ಇದೇ ತರಹ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಯಿಸಿ, ಸೋಲು ಗೆಲುವು ಜೀವನದಲ್ಲಿ ಇದ್ದದ್ದೇ ಪ್ರಯತ್ನಿಸುವುದು ಮುಖ್ಯ ಎಂದು ಮಕ್ಕಳ್ಳನ್ನು ಪ್ರೋತ್ಸಾಯಿಸಿದರು. ಈ ಸ್ಪರ್ಧೆಗೆ ತೀರ್ಪುಗಾರರಾಗಿ ಕೆ ಎಸ್ ಆಸ್ಪತ್ರೆಯ ವೈದ್ಯರುಗಳಾದ ಡಾ. ಶಶಿಕುಮಾರ್ ನಾಯ್ಕ್, ಡಾ. ಸುಮಾ ವಿ ಹಳ್ಳಿಗುಡಿ , ಡಾ. ಗವಿಸಿದ್ದೇಶ್ ವಿ ರೋಣದ ಡಾ. ಶಿವಪ್ರಸಾದ ಟಿ ಅವರು ಆಗಮಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಸಂಪತ್ ಕುಮಾರ್ ನೆರವೇರಿಸಿದರು. ಅದೇ ರೀತಿ ಕೆ ಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ವಿಶ್ವನಾಥ್ ವಿ , ಉಪ ವ್ಯವಸ್ಥಾಪಕ ನಿರ್ದೇಶಕರಾದ ಪೂರ್ಣಿಮಾ ಶೆಟ್ಟಿ , ಕೆ ಎಸ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಕೆ ಎಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದೇ ರೀತಿ ಅಕ್ಟೋಬರ್ 6 ರಂದು ಕೆ ಎಸ್ ಆಸ್ಪತ್ರೆಯ ವತಿಯಿಂದ ಹೃದಯದ ಕಾಳಜಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹೊಸಪೇಟೆ ಯಲ್ಲಿ “ವಾಕಥಾನ್ ( ವಾಕ್-ಎ-ಥಾನ್ )” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅದೇ ರೀತಿ ಸೆಪ್ಟೆಂಬರ್ 29, 30 ಹಾಗೂ ಅಕ್ಟೋಬರ್ 6 ರಿಂದ 10 ರವರೆಗೆ ಉಚಿತ ಹೃದಯ ತಪಾಸಣೆಯನ್ನು ನೀಡಲಾಗುತ್ತಿದೆ. ಈ ತಪಾಸಣೆಯ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬಹುದು.
Comments are closed.