ಸೆ.17 ರಂದು ಶಿಕ್ಷಕರ ದಿನಾಚರಣೆ : ಶಾಹೀದ್ ಹುಸೇನ್ ತಹಸೀಲ್ದಾರ್
ಕೊಪ್ಪಳ : ಕೊಪ್ಪಳ ತಾಲೂಕಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ವತಿಯಿಂದ ಇದೇ ಸೆ.17 ರಂದು ಮಂಗಳವಾರ ಬೆಳಗ್ಗೆ 10-30 ಗಂಟೆಗೆ ಭಾಗ್ಯನಗರ ರಸ್ತೆಯ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಕೊಪ್ಪಳ ತಾಲೂಕ ಕುಸ್ಮಾ ಅಧ್ಯಕ್ಷ ಶಾಹೀದ್ ಹುಸೇನ್ ತಹಸೀಲ್ದಾರ್ ಹೇಳಿದರು.
ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ದಿವ್ಯ ಸಾನಿಧ್ಯವನ್ನು ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ವಹಿಸುವರು.
ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ನೆರವೇರಿಸುವರು,ಅಧ್ಯಕ್ಷತೆಯನ್ನು ಕುಸ್ಮಾ ಜಿಲ್ಲಾ ಗೌರವಾಧ್ಯಕ್ಷ ರಾಘವೇಂದ್ರ ಪಾನಗಂಟಿ ವಹಿಸುವರು. ಕೊಪ್ಪಳ ತಾಲೂಕ ಕುಸುಮ ಅಧ್ಯಕ್ಷ ಶಾಹೀದ್ ಹುಸೇನ್ ತಹಸೀಲ್ದಾರ್ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಸಾಧಕರಿಗೆ ಸನ್ಮಾನಿಸುವರು.
ದಾವಣಗೆರೆಯ ಇನ್ ಸೈಟ್ಸ್ ಐಎಎಸ್ ಸಂಸ್ಥಾಪಕ ವಿನಯಕುಮಾರ್ ಜಿ.ಬಿ ಉಪನ್ಯಾಸ ನೀಡುವರು, ವಿಶೇಷ ಆಹ್ವಾನಿತರಾಗಿ ಸಂಸದ ಕೆ.ರಾಜಶೇಖರ್ ಹಿಟ್ನಾಳ್, ಮಾಜಿ ಸಂಸದ ಸಂಗಣ್ಣ ಕರಡಿ, ಎಂಎಲ್ಸಿ ಹೇಮಲತಾ ನಾಯಕ್ ಪಾಲ್ಗೊಳ್ಳುವರು,ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ,ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ,ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಿ ಸದಸ್ಯ ಡಾ.ಬಸವರಾಜ ಕ್ಯಾವ ಟರ್,ಉದ್ಯಮಿ ಶ್ರೀನಿವಾಸ ಗುಪ್ತ ಸೇರಿದಂತೆ ಮತ್ತಿತರರು ಭಾಗವಹಿಸುವರು.
ನಾನೇ ಅಧ್ಯಕ್ಷ : ಕೊಪ್ಪಳ ತಾಲೂಕು ಅನುದಾನ ರಹಿತ ಆಡಳಿತ ಮಂಡಳಿ ಒಕ್ಕೂಟದ ಅಧಿಕೃತ ಅಧ್ಯಕ್ಷ ನಾನೇ ಇದ್ದು,ಬೇರೆಯವರ ಆರೋಪಗಳು ಏನೇ ಇರಲಿ ನಮ್ಮ ಸಂಘ ಅಧಿಕೃತವಾಗಿ ನೋಂದಣಿಯಾಗಿದ್ದು ಇದೆ ಅಧಿಕೃತ ಸಂಘ ಎಂದು ಅವರು ಸ್ಪಷ್ಟಪಡಿಸಿದ ಅವರು ಕೊಪ್ಪಳ ತಾಲೂಕು ಖಾಸಗಿ ಶಾಲೆಗಳಿಂದ ಚಂದ,ವಂದತಿ ಪಡೆದಿದ್ದು ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕುಸ್ಮಾ ಸಂಘಟನೆಯ ಮಹಮ್ಮದ್ ಅಲಿ ಮುದ್ದೀನ್ ,ಸುಮನ್ ಎಸ್ ,ಸುರೇಶ್ ಕುಂಬಾರ್ ,ಚಿದಾನಂದ್ ಬನ್ನಿಮಠ ಉಪಸ್ಥಿತರಿದ್ದರು.
Comments are closed.