ವಿದ್ಯಾರ್ಥಿ ವೇತನ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡಿಸಿ: ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳಿಂದ ಹೋರಾಟ
ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಬಾಕಿ ಇರುವ 2021-22 ಹಾಗೂ 2022-23, 2023-24 ನೇ ಸಾಲಿನ ಕಲ್ಯಾಣ ಮಂಡಳಿಯಿಂದ ವಿದ್ಯಾರ್ಥಿ ವೇತನ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡಿಸಿ ಕಾರ್ಮಿಕರ ಖಾತೆಗೆ ಜಮಾ ಮಾಡಲು
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) ಕರೆಯ ಮೇರೆಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿ ವರ್ಷ ಶೈಕ್ಷಣಿಕ ಧನಸಹಾಯವನ್ನು ನೀಡುತ್ತಿದ್ದು, ಕಳೆದ ಎರಡು – ಮೂರು ವರ್ಷಗಳಿಂದ ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಲ್ಯಾಣ ಮಂಡಳಿಯಿಂದ ವಿದ್ಯಾರ್ಥಿ ವೇತನ ಧನಸಹಾಯವನ್ನು ಪಡೆಯಲು ಸೇವಾ ಸಿಂಧು ಹಾಗೂ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಮೂಲಕ ಅರ್ಜಿಗಳನ್ನು ಸಲ್ಲಿಸಿದ್ದಾರೆ.ಕಾರ್ಮಿಕ ಇಲಾಖೆ ಸದ್ದಿ ಅರ್ಜಿಗಳನ್ನು ಪರಿಶೀಲಿಸಿ ಮಂಜೂರು ಮಾಡಿದ್ದು, ಕಲ್ಯಾಣ ಮಂಡಳಿಯು ಬೋಗಸ್ ಕಾರ್ಮಿಕರ ಸಂಖ್ಯೆ ಹೆಚ್ಚಳ ಎನ್ನುವ ಕಾರಣದ ನೆಪವೊಡ್ಡಿ, ನೈಜ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಮೊತ್ತವನ್ನು ಬಿಡುಗಡೆ ಮಾಡದೇ ವಿಳಂಬ ನೀತಿ ಅನುಸರಿಸಿ ಬಡ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿದೆ.
ಮಂಜೂರಾದ ವಿವಿಧ ಸೌಲಭ್ಯಗಳಾದ ಮದುವೆ, ಹೆರಿಗೆ, ಪಿಂಚಣಿ, ಆರೋಗ್ಯ, ಅಪಘಾತ ಪರಿಹಾರ ನಿಧಿ ಕಳೆದ 11 ತಿಂಗಳಿಂದ ಮಂಜೂರಾದರು ಸಹಾಯಧನ ಬಿಡುಗಡೆ ಮಾಡಿರುವುದಿಲ್ಲಾ, ಮಂಡಳಿ ಅಧಿಕಾರಿಗಳನ್ನು ಕೇಳಿದರೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುತ್ತವೆಂದು ಹೇಳುತ್ತಾರೆ. ಆದರೆ ಇಲ್ಲಿಯವರೆಗೆ ಯಾವದೆ ಹಣ ಮಂಜೂರು ಮಾಡಿರುದಿಲ್ಲಾ ಈ ಕೂಡಲೆ ಡಿಬಿಟಿ ಮೂಲಕ ಧನ ಸಹಾಯ ಮಂಜೂರು ಮಾಡಿಸಲು ಸಂಭಂದಪಟ್ಟ ಅಧಿಕಾರಿಗಳಗೆ ಸೂಚಿಸಬೇಕು.
ಇದರ ಕುರಿತು ರಾಜ್ಯ ಫೆಡರೇಷನ್(ರಿ) ಸಮಿತಿಯ ನೇತೃತ್ವದಲ್ಲಿ ಹಲವು ಬಾರಿ ಹೋರಾಟ ಪ್ರತಿಭಟನೆಗಳು ಮಾಡಿದರೂ ಕಾರ್ಮಿಕ ಸಚಿವರೊಂದಿಗೆ ಸಭೆ, ಮಂಡಳಿಯ ಜಂಟಿ ಕಾರ್ಯದರ್ಶಿ ಯವರೊಂದಿಗೆ ಮಾತುಕತೆ ನಡೆಸಿದರೂ ಕೇವಲ ಆಶ್ವಾಸನೆ ನೀಡಿದೆ ಹೊರತು, ಇದುವರೆಗೂ ಕಲ್ಯಾಣ ಮಂಡಳಿಯಿಂದ ಶೈಕ್ಷಣಿಕ ಧನಸಹಾಯ ಮೊತ್ತವನ್ನು ಬಹಳ ಮಂದಿ ಕಾರ್ಮಿಕರ ಖಾತೆಗೆ ಜಮಾ ಮಾಡಲು ಬಾಕಿ ಇರುತ್ತದೆ. ಕಲ್ಯಾಣ ಮಂಡಳಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹವಿದ್ದರೂ ಬಡ ಕಾರ್ಮಿಕರ ಮಕ್ಕಳಿಗೆ ಕೊಡುತ್ತಿರುವ ಶೈಕ್ಷಣಿಕ ಧನಸಹಾಯ ಮೊತ್ತವನ್ನು ಕಡಿತಗೊಳಿಸಲಾಗಿದೆ ಮಾತ್ರವಲ್ಲ ಕಡಿತಗೊಳಿಸಿರುವ ಮೊತ್ತವನ್ನೂ ಕಾರ್ಮಿಕರ ಖಾತೆಗೆ ಜಮೆ ಮಾಡುತ್ತಿಲ್ಲ ಈ ಹಿಂದೆ 2020-21 ರ ಮಾರ್ಗಸೂಚಿಯಂತೆ ಶೈಕ್ಷಣಿಕ ಧನಸಹಾಯ ಮೊತ್ತವನ್ನು ನೀಡಬೇಕು ಹಾಗೂ 1 ನೇ ತರಗತಿಯಿಂದ 10 ನೇ ತರಗತಿ ವರೆಗಿನ ಈ ಹಿಂದೆ ನೀಡುತ್ತಿದ್ದಂತೆ ಶೈಕ್ಷಣಿಕ ಧನಸಹಾಯ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು,
ಹಾಗೂ ಕೊಪ್ಪಳ ಜಿಲ್ಲೆಯಾದ್ಯಂತ ಅತಿ ಹೆಚ್ಚು ಕಟ್ಟಡ ಕಾರ್ಮಿಕರು ನಿವೇಶನ ಮತ್ತು ವಸತಿರಹಿತರಾಗಿದ್ದು ಕಾರ್ಮಿಕರಿಗೆ ವಸತಿ ಸಹಿತ ನಿವೇಶನಗಳನ್ನು ನೀಡಬೇಕೆಂದು ಈ ಮೂಲಕ ಆಗ್ರಹಿಸಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರ ಮೂಲಕ ನಿಮ್ಮ ಗಮನ ಸೆಳೆಯಲು ಕಟ್ಟಡ ಕಾರ್ಮಿಕರ ಮಕ್ಕಳಾದ ನಾವು ನಮ್ಮ ಪೋಷಕರ ಸಂಘದ ಪರವಾಗಿ ಮನವಿ ನೀಡುತ್ತಿದ್ದು, ತಾವು ಕಾರ್ಮಿಕರ ಪರವಾಗಿ ಕಲ್ಯಾಣ ಮಂಡಳಿಗೆ ಶೀಘ್ರ ಪಾವತಿಗೆ ಕ್ರಮ ವಹಿಸಲು ಆದೇಶಿಸಬೇಕು ಎಂದು ವಿನಮ್ರವಾಗಿ ವಿನಂತಿಿಕೊಂಡಿದ್ದಾರೆ
ನೇತೃತ್ವ ವಹಿಸಿದವರು: ಜಿಲ್ಲಾ ಅಧ್ಯಕ್ಷರಾದ ಖಾಸಿಂ ಸರ್ದಾರ, ಸಿ.ಐ.ಟಿ.ಯು. ಅಧ್ಯಕ್ಷರಾದ ನಿರುಪಾದಿ ಬೆಣಕಲ್, ಜಿಲ್ಲಾ ಕಾರ್ಯದರ್ಶಿ ರಂಗಪ್ಪ ದೊರೆಗಳು, ಜಿ.ನಾಗರಾಜ, ಶಿವನಗೌಡ, ದೊಡ್ಡನಗೌಡ, ಮಂಜುನಾಥ ಡಗ್ಗಿ, ಇಸ್ಮಾಯಿಲ್ ಇಟಗಿ, ಹನುಮೇಶ, ಪರಿಜಾನ್, ಮಹೆಬೂಬ ದಫೆದಾರ, ವಸಂತ, ಸೈಯದ್ ಮೇಸ್ತ್ರಿ, ಶಶಿಕಲಾ, ಮಂಜಪ್ಪ, ಕಾಳಮ್ಮ, ದುರುಗಮ್ಮ, ಸಾವಿತ್ರಿ, ಶಿವಾನಂದಪ್ಪ, ಮಹೆಬೂಬ ತಂಬ್ರಳ್ಳಿ, ದಾದಪೀರ ಕುರಿ, ಶುಕ್ತು ಅತ್ತಾರ, ಆಂಜನಪ್ಪ, ಇಮಾಮಲಿ, ಮೈಲಾರಪ್ಪ, ನಾಗರಾಜ, ತಾಜುದ್ದೀನ್, ಖಾಜಾಸಾಬ, ಮಹಾದೇವಿ ಮುಧೋಳ ಇನ್ನು ಮುಂತಯಾದವರು ಉಪಸ್ಥಿತರಿದ್ದರು.
Comments are closed.