ಹಸಿರು ಹಾಸಿಗೆಯಿಂದ ಶೃಂಗಾರಗೊಂಡ    ಶ್ರೀ ಗವಿಮಠ

0

Get real time updates directly on you device, subscribe now.

Koppal Gavimath Jatre-2025

 

ಭಕ್ತರ ಏಳಿಗೆಗಾಗಿ ಸಾಮಾಜಮುಖಿ ಕಾರ್ಯಗಳಿಂದ ಹೆಸರುವಾಸಿಯಾದ ಶ್ರೀಗವಿಮಠ ಭಕ್ತರಲ್ಲಿ ಭಗವಂತನನ್ನುಕಾಣುತ್ತಿದೆಎನ್ನುವುದಕ್ಕೆ ಮಹಾಜಾತ್ರೋತ್ಸವ ಹಾಗೂ ಮಹಾದಾಸೋಹ ಶೈಕ್ಷಣಿಕ ಕೊಡುಗೆಗಳೇ ಸಾಕ್ಷಿ.

 

 


ಮತ್ತೆಇನ್ನೊಂದು ಹೆಜ್ಜೆಎಂಬಂತೆ ಶ್ರೀಮಠಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತರು ಮಠದ ಸಂಪತ್ತು, ಭಾವಿಸಿರುವ ಸಂಸ್ಥಾನ ಶ್ರೀ ಗವಿಮಠವುಆಗಮಿಸಿದ ಭಕ್ತರಿಗೆ ಭಕ್ತಿಯಜೊತೆಗೆಅಕರ್ಷಣೆಯಅನಂದತುಂಬಲು ಶ್ರೀಮಠದ ಆವರಣವನ್ನು ಸೌಂದರ್ಯಕರಣಗೂಳಿಸುತ್ತಿದೆ. ಕಳೆದ ವರ್ಷದಿಂದಲೇ ಸೌಂದರ್ಯಕರಣ ಕಾರ್ಯಗಳು ಆರಂಭವಾಗಿದ್ದು, ಪ್ರಸ್ತುತ ವರ್ಷದಶ್ರೀ ಮಠದಆವರಣವು ಹಸಿರು ಹಾಸಿಗೆಯಿಂದ ಸಂಪೂರ್ಣಶೃಂಗಾರಗೊಂಡಿರುವುದು ಬಹಳ ವಿಶೇಷತೆಯಾಗಿದೆ. ಮುಖ್ಯರಸ್ತೆಯಿಂದ ಶ್ರೀ ಮಠದಆವರಣ ಪ್ರವೇಶಿಸುತ್ತದ್ದಂತೆ ಬಿಳಿ ಮತ್ತು ಕೆಂಪು ಕಲ್ಲಿನ ಸುಂದರವಾದ ಹಾಸಿಗೆ ಎಡಕ್ಕೆ ಮತ್ತು ಬಲಕ್ಕೆ ಮಂಟಪಗಳು, ಹಾಗೆಯೇಎಡಬಾಗದ ಸಂಪೂರ್ಣಆವರಣದ ಸುಂದರವಾದಒರೆಕೊರೆಯಾಗಿ (ಜಿಗ್‌ಜ್ಯಾಗ್)ತಡೆಗೊಡೆಗೆ ಹೊಂದಿಕೊಂಡಿರುವ ಶ್ರೀ ಮಠದಕಾರ್ಯಾಲಯಅದರ ಶಿಲಾನ್ಯಾಸಕಲ್ಪನೆ ನೋಡುಗರಆಕರ್ಷಣೆಯಕೇಂದ್ರವಾಗಿದೆ. ಹಾಗೆಯೇ ಬಲಕ್ಕೆ ಬಹುಉಪಯೋಗಿ (ಯುಟಿಲಿಟಿ) ಕಟ್ಟಡ ಶ್ರೀ ಮಠದ ಸೌಂದರ್ಯವನ್ನು ದ್ವಿಗುಣಗೂಳಿಸಿದೆ. ಶ್ರೀ ಶ್ರೀಮಠದ ಮುಂಭಾಗದ ಮಹಾದ್ವಾರ ಪ್ರವೇಶಿಸುತ್ತಿದ್ದಂತೆ ಒಳ ಆವರಣವು ಸಂಪೂರ್ಣ ಸುಂದರವಾದ ಹಸಿರು ಹೊದಿಕೆಯಿಂದ ಮಧುವಣಗಿತ್ತಿಯಂತೆಅಲಂಕೃತಗೊಂಡಿರುವದು ಶ್ರೀ ಮಠದಅತ್ಯಾಕರ್ಷಣೆಯಾಗಿದೆ. ಈಗಾಗಲೇ ಸುಂದರಮಹಾಮಂಟಪದ್ವಾರಬಾಗಿಲಿನ ಮುಂಭಾಗದಆವರಣ ಮಧ್ಯದಲ್ಲಿ ನಿರ್ಮಾಣಗೊಂಡಿದ್ದು,ಅದರ ಸುತ್ತಲು ಹಸಿರು ಹುಲ್ಲಿನಅಕರ್ಷಣೆ ಮಂಟಪವನ್ನು ಮತ್ತಷ್ಟು ಸುಂದರಗೊಳಿಸಿದೆ. ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದಆವರಣ, ಶ್ರೀ ಗವಿಸಿದ್ಧೇಶ್ವರರ ಕರ್ತೃಗದ್ದುಗೆದರ್ಶನದ ಪ್ರವೇಶದ್ವಾರಮುಂಭಾಗ, ನೂತನವಾಗಿಆಕರ್ಷಕವಾಗಿ ನಿರ್ಮಾಣಗೊಂಡತೆಂಗಿನ ಕಾಯಿ ಒಡೆಯುವ ಮಂಟಪದಆವರಣ, ಕೆರೆಯ ಮುಂಭಾಗ, ದಾಸೋಹದಎದುರಿಗೆಇರುವಆವರಣಒಟ್ಟುಒಂದುವರೆ ಲಕ್ಷಚದರಅಡಿಯವಿಶಾಲವಾದಅವರಣ ಹಸಿರಿನ ಹುಲ್ಲು ಹಾಸಿಗೆ ಸೊಬಗಿನಿಂದ ಕಂಗೊಳಿಸುತ್ತಿದೆ. ಇವು ಎಲ್ಲವೂ ಶ್ರೀಮಠದ ಸೊಬಗು, ಸೌಂದರ್ಯದುಪ್ಪಟ್ಟು ಹೆಚ್ಚಿಸಿದೆ. ಎಲ್ಲ ಮಂಟಪಗಳು ಅಚ್ಚು ಮಲ್ಲಿಗೆಯ ಬಿಳುಪಿನ ಸುಂದರ ಕೆತ್ತನೆಗಳಾಗಿದ್ದು,ಒಟ್ಟುಎರಡುವರೆ ಲಕ್ಷಚದರ ಅಡಿ ವಿಶಾಲವಾದ ನೆಲಹಾಸಿಗೆ ಶ್ರೀ ಮಠಕ್ಕೆ ಆಗಮಿಸಿದ ಭಕ್ತರ ಮನಸ್ಸುಆಕರ್ಷಿಸುತ್ತಲಿದ್ದು ಶ್ರೀ ಮಠಕ್ಕೆ ಆಗಮಿಸುವ ಭಕ್ತರಿಗೆಆನಂದದಜೊತೆಗೆಶ್ರೀಮಠದಆಕರ್ಷಣೆ ಹೆಚ್ಚಿಸಿವೆ. ಇನ್ನೂ ಶ್ರೀ ಮಠದ ಸೌಂದರ್ಯಕರಣದ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಇನ್ನೂ ಸುಂದರ ಹೂ ಗಿಡಗಳಿಂದ ಆವರಣಅಲಂಕೃತಗೊಂಡಿರುವದು ಈ ವರ್ಷದಜಾತ್ರೆಯ ಮತ್ತಷ್ಟು ಕಹಳೆ ಹೆಚ್ಚಿಸಲಿವೆ.

Get real time updates directly on you device, subscribe now.

Leave A Reply

Your email address will not be published.

error: Content is protected !!