ವಿದ್ಯಾಸರಸ್ವತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಕೊಪ್ಪಳ ನಗರದ ವಿದ್ಯಾಸರಸ್ವತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಯಾದ ಸಹನಾ ಕೌಟಿ, ಕಾರ್ಯಕ್ರಮದ ಪ್ರಾರ್ಥನೆ ಗೀತೆಯನ್ನು ವೈಷ್ಣವಿ ಸಂಗಡಿಗರು,ಸ್ವಾಗತ ಭಾಷಣವನ್ನು ಕುಮಾರಿ ವರ್ಷಿಣಿ ಚಲವಾದಿ, ಕಾರ್ಯಕ್ರಮದ ಬಹುಮಾನ ವಿತರಣೆ ಮತ್ತು ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ಹಸೀನಾ ಮೇಡಂ ರವರು ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಶ್ರೀಧರ್ ವೇಮಲಿ.. ವ್ಯಾಪಾರಸ್ಥರು ನಂದಿನಗರ ಕೊಪ್ಪಳ. ನಂದಿನಗರದ ಹಿರಿಯರಾದ ಹಂಪಣ್ಣ ಸಿಂಪಿಗೇರ್, ಬದಲಾವಣೆ ಪತ್ರಿಕೆಯ ಬರಹಗಾರರಾದ ಪ್ರಭು ಜಾಗಿರದಾರ್ ಮತ್ತು ನಾಗರಾಜ್ ದಾಸರ್ ರವರು ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವಹಿಸಿದ ಪ್ರಭು ಜಾಗಿರದಾರ್ ರವರು ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನ ಆದರ್ಶ ಕುರಿತು ಮಾತನಾಡಿದರು. ಅದೇ ರೀತಿ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಚೈತ್ರ ಎಂ,ಜಿ. ಶ್ರೀಮತಿ ಹಸೀನಾ ಹಾಗೂ ಶ್ರೀಮತಿ ಭಾಗ್ಯ, ಶರಣಕುಮಾರಿರವರು ಮಾತನಾಡಿದರು.
Comments are closed.