ಕೊಪ್ಪಳ ಜಿಲ್ಲಾ ಮಾದಿಗ ರಕ್ಷಣಾ ವೇದಿಕೆ ಪದಾಧಿಕಾರಿಗಳ ಆಯ್ಕೆ
ಕೊಪ್ಪಳ : ನಗರದ ತಾಲೂಕಾ ಪಂಚಾಯತಿ ಸಭಾಂಗಣದಲ್ಲಿ ಸಮುದಾಯದ ಸುಮಾರು 40ಕ್ಕೂ ಹೆಚ್ಚು ಜನರು ಸಭೆ ಸೇರಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಕಮಿಟಿ ರಚನೆ ಮಾಡಲಾಯಿತು ಎಂದು ದಲಿತ ಯುವ ವೇದಿಕೆಯ ಜಿಲ್ಲಾ ಸಂಚಾಲಕ ಹಾಗೂ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಸುಂಕಪ್ಪ ಮೀಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಅಧ್ಯಕ್ಷತೆಯನ್ನು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ದಲಿತ ಮುಖಂಡರಾದ ಶಿವಣ್ಣ ಹಟ್ಟಿ, ಬಸವರಾಜ ಪೂಜಾರ,ಈರಪ್ಪ ದದೇಗಲ್, ಕಾಶಪ್ಪ ಅಳ್ಳಳ್ಳಿ, ಮಾರ್ತಂಡಪ್ಪ ಕುಣಿಕೇರಿ” ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಸಮುದಾಯದ ಹೆಸರಿನಲ್ಲಿದ್ದರೂ ಕೂಡ ಹಲವು ಸಮುದಾಯದ ಸಮಾಜದವರಿಗೆ ನ್ಯಾಯಕ್ಕಾಗಿ ಹಲವಾರು ಜನರ ಬೆನ್ನಿಗೆ ನಿಂತಿದೆ. ಈ ಸಂಘಟನೆ ಹುಟ್ಟಿ ಸುಮಾರು 15ವರ್ಷಗಳು ಆಗಿದೆ. ಸಮುದಾಯದ ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ಸಂಘಟನೆ, ಹೋರಾಟ ರೂಪಿಸಿ ಯಶಸ್ವಿಯಾಗಿ ನ್ಯಾಯ ಕೊಡಿಸಿದೆ. ಕತ್ತಲೆಯಿಂದ ಬೆಳಕಿನಡೆಗೆ ನಮ್ಮ ಹೋರಾಟ ಸಮಾನತೆಯ ಕಡೆಗೆ ನಮ್ಮ ನಡಿಗೆಯಿಂದ ಜನರನ್ನು ಸಂಘಟಿಸುತ್ತಾ ಬಂದಿದೆ. ಸ್ವಾಭಿಮಾನ! ಸ್ವಾತಂತ್ರ್ಯ!! ಸಮಾನತೆ!!! ಸಿದ್ಧಾಂತದಲ್ಲಿ ನಂಬಿಕೆಯಿಟ್ಟು ರಾಜ್ಯದ ಆಯಾ ಜಿಲ್ಲೆಗಳಲ್ಲಿ ಸಂಘಟಿಸುತ್ತಾ ಮುನ್ನಡೆದಿದೆ. ವಿವಿಧ ಜಿಲ್ಲೆಗಳಲ್ಲಿ, ವಿವಿಧ ಸಮುದಾಯಗಳಲ್ಲಿ ಮಾದಿಗ ಸಮುದಾಯ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಜಮೀನುಗಳನ್ನು ಕೊಡಿಸಿದ್ದು. ದೌರ್ಜನ್ಯಕ್ಕೊಳಗಾದ ನೂರಾರು ಕುಟುಂಬಗಳ ಬೆನ್ನಿಗೆ ನಿಂತಿದ್ದು, ರಾಜಿ ರಹಿತ, ರಾಜಕೀಯ ರಹಿತವಾಗಿ ಸಂಘಟನೆ ಮುಂದುವರೆಸುತ್ತಾ ಬಂದಿದೆ. ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಜಾತಿವಾದಿ ಕ್ಷೌರಿಕನಿಂದ ಹತ್ಯೆಯಾದ ಯಮನೂರಪ್ಪನ ಕೊಲೆಯನ್ನು ಖಂಡಿಸುತ್ತಾ ಜಿಲ್ಲೆಯಾದ್ಯಂತ ಅಸ್ಪೃಶ್ಯತಾ ವಿರುದ್ಧ ಐಕ್ಯ ಹೋರಾಟ ಸಮಿತಿಯಿಂದ ಅಭಿಯಾನ ಮಾಡಲಾಗುವುದು ಎಂದು ತಿಳಿಸಿದರು.”
ನಂತರ ಮಾತನಾಡಿದ “ಸಿರಾಜ್ ಸಿದ್ದಾಪುರ ಜಿಲ್ಲೆಯಲ್ಲಿ ಸಂಘಟಿಸುವ ನಿಮ್ಮಲ್ಲೆರಿಗೂ ಎದ್ದೇಳು ಕರ್ನಾಟಕ ಬೆಂಬಲವಾಗಿ ನಿಲ್ಲುತ್ತೆ, ಅಸ್ಪೃಶ್ಯತೆಯ ವಿರುದ್ಧ ನಿಮ್ಮ ಸಂಘಟನೆಯ ಹೋರಾಟಕ್ಕೆ ಬೆಂಬಲಕ್ಕೆ ನಿಲ್ಲಲಿದೆ.
ವೇದಿಕೆಯಲ್ಲಿದ್ದ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ದುರುಗೇಶ ಮಾತನಾಡಿ ಜಿಲ್ಲೆಯಲ್ಲಿ ರಚನೆಯಾಗಿರುವ ಈ ಮಾದಿಗ ಸಂಘಟನೆಗೆ ನಮ್ಮ ವಿದ್ಯಾರ್ಥಿ. ಯುವಜನತೆ ನಿಮ್ಮ ಜೊತೆ ಇರಲಿದ್ದಾರೆ ಎಂದು ತಿಳಿಸಿದರು.”
ವೇದಿಕೆಯಲ್ಲಿದ್ದವರು ಸೇರಿದಂತೆ ಸಮುದಾಯದ ಜನರು ಜಿಲ್ಲಾ ಸಮಿತಿ ರಚನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದರು.
ಗೌರವಾಧ್ಯಕ್ಷರಾಗಿ ಮರಿಯಪ್ಪ ಭಾಗ್ಯನಗರ, ಜಿಲ್ಲಾಧ್ಯಕ್ಷರಾಗಿ ಮುದುಕಪ್ಪ ಎಂ.ಹೊಸಮನಿ ಸಾ||ನರೇಗಲ್. ಜಿಲ್ಲಾ ಉಪಾಧ್ಯಕ್ಷರಾಗಿ ಹುಲಗಪ್ಪ ಹ್ಯಾಟಿ ಸಾ||ಹೊಸಲಿಂಗಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಿರುಪಾಕ್ಷಪ್ಪ ಯಡಿಯಾಪುರ, ಜಿಲ್ಲಾ ಕಾರ್ಯದರ್ಶಿ ಮುತ್ತು ದೊಡ್ಡಮನಿ ಮಂಗಳೂರು, ಜಿಲ್ಲಾ ಖಜಾಂಚಿಯಾಗಿ ಯಮನೂರಪ್ಪ ಮುದ್ದಾಬಳ್ಳಿ, ಮಹಿಳಾ ಸದಸ್ಯೆಯಾಗಿ ಶೋಭಾ ಪೂಜಾರ ರಾಂಪೂರ ಹಾಗೂ ಸುಮಾರು 10ಕ್ಕೂ ಹೆಚ್ಚು ಜನರು ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆಯಾದರು ಎಂದು ಕಾರ್ಯಕ್ರಮದ ನಿರೂಪಣೆ ಮಾಡಿದ ಜಿಲ್ಲಾ ದಲಿತ ಯುವ ವೇದಿಕೆಯ ಸಂಚಾಲಕ ಹಾಗೂ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಸುಂಕಪ್ಪ ಮೀಸಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.
Comments are closed.