ಕಿಮ್ಸ್ ಬೋಧಕ ಆಸ್ಪತ್ರೆಗೆ ಸಿಇಓ ರಾಹುಲ್ ಪಾಂಡೆಯ ಭೇಟಿ; ಪರಿಶೀಲನೆ
ಕೊಪ್ಪಳ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ಪಾಂಡೆಯ ಅವರು ಜುಲೈ 11ರಂದು ಸಂಜೆ ಕೊಪ್ಪಳ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಇದೆ ವೇಳೆ ಕೀಮ್ಸ್ ನ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರುಗಳೊಂದಿಗೆ ಮಾತನಾಡಿ ವಿಭಾಗವಾರು ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದರು.
ಬೋಧಕ ಆಸ್ಪತ್ರೆಗೆ ಮಂಜೂರಾದ ಹುದ್ದೆಗಳು, ಭರ್ತಿಯಾದ ಹುದ್ದೆಗಳು, ಖಾಲಿ ಹುದ್ದೆಗಳು ಸೇರಿದಂತೆ ಆಸ್ಪತ್ರೆಯಲ್ಲಿನ ಮಾನವ ಸಂಪನ್ಮೂಲದ ಅಂಕಿ ಅಂಶಗಳ ಮಾಹಿತಿಯನ್ನು ಸಿಇಓ ಅವರು ಪಡೆದುಕೊಂಡರು.
ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಯಂತ್ರ, ಡಯಾಲಿಸಿಸ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಲಭ್ಯತೆಯ ಬಗ್ಗೆ ವಿಚಾರಿಸಿದರು. ಔಷಧಿ ವಿಭಾಗದ ಮುಖ್ಯಸ್ಥರೊಂದಿಗೆ ಮಾತನಾಡಿ ಔಷಧಿ ಲಭ್ಯತೆಯ ಬಗ್ಗೆ ಮಾಹಿತಿ ಪಡೆದರು.
ಈ ಬೋಧಕ ಆಸ್ಪತ್ರೆಗೆ ಒಟ್ಟು 226 ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ 90 ಹುದ್ದೆಗಳು ಭರ್ತಿಯಾಗಿವೆ. ಗ್ರೂಫ್ ಡಿ 124 ಹಾಗೂ ನರ್ಸಿಂಗ್ 120 ಹುದ್ದೆಗಳು ಮಂಜೂರಾಗಿವೆ ಎಂದು ನಿರ್ದೇಶಕರು ಮಾಹಿತಿ ನೀಡಿದರು.
ವೈದ್ಯರ, ನರ್ಸಗಳ ಕೊರತೆ:
ಇಲ್ಲಿ ಇದುವರೆಗೆ ಇಲ್ಲಿ ರೆಗ್ಯುಲರ್ ಫಾರ್ಮಾಸಿಸ್ಟ್ ಇಲ್ಲದಿರುವಂತಹ ಜಟಿಲ ಸಮಸ್ಯೆಗಳಿವೆ. ಆಸ್ಪತ್ರೆಯಲ್ಲಿ ತಜ್ಞವೈದ್ಯರ ಹಾಗೂ ಸ್ಟಾಪ್ ನರ್ಸಗಳ ಕೊರತೆ ಇದೆ. ಇದರಿಂದಾಗಿ ವರ್ಕಲೋಡ್ ಆಗುತ್ತಿದೆ. ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ಪಡೆದು ಆಸ್ಪತ್ರೆ ನಡೆಸುತ್ತಿದ್ದೇವೆ.
ಗ್ರೂಫ್ ಡಿ, ಸ್ಟೋರ್ ಕೀಪರನಂತಹ ಹುದ್ದೆಗಳು ಸಹ ಸಮರ್ಪಕವಾಗಿ ಭರ್ತಿಯಾಗಿಲ್ಲ ಎಂದು ವಿವಿಧ ವಿಭಾಗಗಳ ಮುಖ್ಯಸ್ಥರು ಸಿಇಓ ಅವರಿಗೆ ತಿಳಿಸಿದರು.
ಈ ಆಸ್ಪತ್ರೆಯ ಓಪಿಡಿಯಲ್ಲಿ ಪ್ರತಿ ದಿನ ಅಂದಾಜು 900 ಜನರು ಹೆಸರು ನೋಂದಾಯಿಸಿಕೊಳ್ಳುತ್ತಾರೆ.
8000 ಜನರು ಮೇ ತಿಂಗಳಿನಲ್ಲಿ ಹೆಸರು ನೋಂದಾಯಿಸಿಕೊಂಡು
ಚಿಕಿತ್ಸೆ ಪಡೆದಿದ್ದಾರೆ ಎಂದು ಸಿಇಓ ಅವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಿಮ್ಸ್ ಬೋಧಕ ಆಸ್ಪತ್ರೆಯ ನಿರ್ದೇಶಕರಾದ ಡಾ.ವೈದ್ಯನಾಥ ಇಟಗಿ, ಕಿಮ್ಸನ ವೈದ್ಯಕೀಯ ಅಧೀಕ್ಷಕರಾದ ಡಾ.ಕೆ.ವೇಣುಗೋಪಾಲ ಹಾಗು ಇನ್ನೀತರರು ಇದ್ದರು.
ನಾನಾ ವಾರ್ಡಗಳಿಗೆ ಸಿಇಓ ಭೇಟಿ: ಬೋಧಕ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಸಿಇಓ ಅವರು, ಆಸ್ಪತ್ರೆಯ ಜನರಲ್ ವಾರ್ಡ, ನವಜಾತ ಶಿಶು ಆರೋಗ್ಯ ಕೇಂದ್ರ, ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರ, ಡಯಾಲಿಸಿಸ್ ಸೆಂಟರ್, ತುರ್ತು ಚಿಕಿತ್ಸಾ ಘಟಕ ಸೇರಿದಂತೆ ವಿವಿಧಡೆ ಭೇಟಿ ನೀಡಿ ಆಯಾ ವಾರ್ಡಗಳಲ್ಲಿನ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು.
Comments are closed.