ಉಸಿರು ಇರುವವರೆಗೂ ಒಳ್ಳೆಯ ಕಾರ್ಯ ಮಾಡಿ – ಗವಿಮಠಶ್ರೀಗಳು

Get real time updates directly on you device, subscribe now.

ಕೊಪ್ಪಳ

ಈ ಗಾಳಿಯನ್ನು ನೀಡುವ ನಿಸರ್ಗವೂ ಏನನ್ನು ಕೇಳುವುದಿಲ್ಲ, ಬೆಳಕು ನೀಡುವ ಸೂರ್ಯನೂ ಸಹ ತನ್ನ ಕಾಯಕವನ್ನು ನಿಲ್ಲಿಸುವುದಿಲ್ಲ. ಹಾಗೆಯೇ  ಈ ದೆಹದಲ್ಲಿ ಉಸಿರು ಇರುವವರೆಗೂ ಒಳ್ಳೆಯ ಕಾರ್ಯ ಮಾಡಬೇಕು. ಸಾವು ಸನಿಹದಲ್ಲಿಯೇ ಇದ್ದರೂ ಸಹ ಒಳ್ಳೆಯ ಕಾರ್ಯಕ್ಕಾಗಿ ಮನ ಮಿಡಿಯಬೇಕು ಎಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಹಾವೀರ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿರುವ ಕಲಬುರಗಿ ವಿಭಾಗ ಮಟ್ಟದ ಯುವ ರೆಡ್ ಕ್ರಾಸ್ ಕಾರ್ಯಾಗಾರದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದರು.

 ದೆಹಕ್ಕೆ ಉಸಿರು ಇರುವವರೆಗೂ ಮಾತ್ರ ಶಕ್ತಿ ಮತ್ತು ಬೆಲೆ. ಅದು ಚಲ್ಲಿದ ಮೇಲೆ ಅದಕ್ಕೆ ಬೆಲೆಯೂ ಇರುವದಿಲ್ಲ ಮತ್ತು ಶಕ್ತಿಯೂ ಇರಲ್ಲ. ಹೀಗಾಗಿ ದೆಹದ ಶಕ್ತಿ ಅದಕ್ಕೆ ಜೀವ ಇರುವವರೆಗೂ ಇರುತ್ತದೆ. ಆದರೆ, ಈ ಜೀವ ಅಥವಾ ಮನಸ್ಸು ಯಾವುದು ಸಹ ಕಣ್ಣಿಗೆ ಕಾಣುವುದಿಲ್ಲ. ಮನಸ್ಸಿಗೆ ಆಕಾರ ಇಲ್ಲ, ತೂಕ ಇಲ್ಲ. ಆದರೆ, ಆ ಶಕ್ತಿಯನ್ನೊಳಗೊಂಡ ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳಬೇಕು.

ಮನಸ್ಸು ನಿಗ್ರಹಿಸದ ಹೊರತು  ಬದುಕಿನಲ್ಲಿ ಜಯ ಸಾಧಿಸಲು ಸಾಧ್ಯವಿಲ್ಲ. ಮನಸ್ಸು ಗೆದ್ದ ಬುದ್ದ ಲೋಕ ಗೆದ್ದ, ಮನಸ್ಸು ಗೆಲ್ಲದಿದ್ದರೇ ಬಿದ್ದಂತೆ ಎಂದರು.

ಇದಕ್ಕಾಗಿ ಸಾಧನೆ ಬೇಕಾಗುತ್ತದೆ. ಆದ್ದರಿಂದ ನಾವು ನಮ್ಮ ಮನಸ್ಸನ್ನು ನಿಗ್ರಹಿಸಿಕೊಳ್ಳಬೇಕು. ಇದಕ್ಕಾಗಿ ನಾವು ಒಳ್ಳೆಯ ಕಾರ್ಯ ಮಾಡಬೇಕು.

ಚಹದ ಡಬರಿಯಲ್ಲಿ ಚಹ ಮಾಡುವ ಬದಲು ಸಾಂಬರ್ ಡಬರಿಯಲ್ಲಿ ಚಹ ಮಾಡಿದರೇ ಚಹ ಕಾರವಾಗುತ್ತದೆ. ಹಾಗೆಯೇ ಕೆಟ್ಟ ಯೋಚನೆ ಮಾಡುವ ಮನಸ್ಸು ಸಹ ಕಾರದ ಅನುಭವ ನೀಡುತ್ತದೆ. ಆದರೆ, ಅದೇ ಸಾಂಬರ್ ಡಬರಿಯಲ್ಲಿ ಪದೇ ಪದೆ ಚಹ ಮಾಡಿದರೇ  ಕಾರ ಇಲ್ಲವಾಗಿ, ಪರಿಪೂರ್ಣ ಸಿಹಿಯ ಅನುಭವ ನೀಡುತ್ತದೆ. ಅದರಂತೆ ಸತತವಾಗಿ ಒಳ್ಳೆಯ ಕಾರ್ಯ ಮಾಡುವ ಮೂಲಕ ಕಾರದ ಅನುಭವ ಮಾಯವಾಗುತ್ತದೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳದಲ್ಲಿ ಅತ್ಯುತ್ತಮ ಕಾರ್ಯ ಮಾಡತ್ತದೆ.  ಅದರ ಉತ್ತಮ ಕಾರ್ಯದಿಂದಾಗಿ  ಅದೆಷ್ಟೋ ಜನರ ತೊಂದರೆ ನಿಗಿಸಲು ಸಹಕಾರಿಯಾಗಿದೆ. ಅದರಲ್ಲೂ  ರಕ್ತಭಂಡಾರದಿಂದ  ಸಾಕಷ್ಟು ಅನುಕೂಲವಾಗಿದೆ ಎಂದರು.

ಇಂಥ ಕಾರ್ಯಗಾರಗಳನ್ನು  ಹಮ್ಮಿಕೊಳ್ಳುವ ಮೂಲಕ  ವಿದ್ಯಾರ್ಥಿಗಳ ಮನಸ್ಸಿನ ಪರಿವರ್ತನೆ ಮಾಡುವ ಕಾರ್ಯ ಮಾಡುತ್ತಿದೆ. ತರಬೇತಿಯನ್ನು ಪಡೆದ ನಾಯಿ ಯಾರೋ ಹಾಕಿದ ಬಿಸ್ಕಿಟ್ ಸಹ ತಿನ್ನುವುದಿಲ್ಲ, ಆದರೆ, ತರಬೇತಿ ಪಡೆಯದ ನಾಯಿ ಯಾರು ಏನೇ ಕೊಟ್ಟರು ಸ್ವೀಕಾರ ಮಾಡತ್ತದೆ. ಅದಕ್ಕಾಗಿ ತರಬೇತಿ ಪಡೆದ ನಾಯಿಯಂತೆಯಾಗಬೇಕು.  ಅಂಥ ತರಬೇತಿಯನ್ನು ಇಂಥ ಕಾರ್ಯಾಗಾರಗಳನ್ನು ನೀಡಿ, ಕೆಟ್ಟದ್ದರಿಂದ ದೂರ ಇರುವಂತೆ ಮಾಡಿ, ಸತ್ಕಾರ್ಯ ಮಾಡುವಂತೆ ಮಾಡಲಾಗುತ್ತದೆ.

ವಿಪತ್ತು ನಿರ್ವಹಣೆ – ವಿಪತ್ತು ನಿರ್ವಹಣೆಯ ಕುರಿತು ಕಾರ್ಯಾಗದಲ್ಲಿ ಅಗ್ನಿಶಾಮಕ ದಳದವರು ಪ್ರದರ್ಶನ ನೀಡಿದರು.

ಬೆಂಕಿ ನಂದಿಸುವುದು ಹೇಗೆ ಎನ್ನುವುದನ್ನು ಪ್ರಾತ್ಯೇಕ್ಷಿಕೆಯ ಮೂಲಕ ಪ್ರದರ್ಶನ ನೀಡಿದರು. ಅಗ್ನಿಶಾಮಕ ದಳದ ಜಿಲ್ಲಾಮಟ್ಟದ ಅಧಿಕಾರಿ ರಾಮಪ್ಪ ಅವರು ಮಕ್ಕಳಿಗೆ ಉಪನ್ಯಾಸ ನೀಡಿದರು.

ಸಮಾರೋಪ ಸಮಾರಂಭ

ಕಲಬುರಗಿ ವಿಭಾಗ ಮಟ್ಟದ ಯುವ ರೆಡ್ ಕ್ರಾಸ್ ಕಾರ್ಯಾಗಾರದ ಸಮಾರೋಪ ಸಮಾರಂಭ ಸೆ. 1 ರಂದು ಮಧ್ಯಾಹ್ನ 1.30 ಕ್ಕೆ ಕೊಪ್ಪಳ ನಗರದ ಮಹಾವೀರ ಕಲ್ಯಾಣಮಂಟಪದಲ್ಲಿ ನಡೆಯಲಿದೆ.

ಸಂಸದ ರಾಜಶೇಖರ ಹಿಟ್ನಾಳ ಅವರು ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸುವರು.

ಸಂಸದ ಸಂಗಣ್ಣ ಕರಡಿ ಅವರು ಸಮರೋಪ ಭಾಷಣ ಮಾಡಲಿದ್ದಾರೆ.

ರೆಡ್ ಕ್ರಾಸ್ ಕೊಪ್ಪಳ ಜಿಲ್ಲಾ ಸಭಾಪತಿ ಸೋಮರಡ್ಡಿ ಅಳವಂಡಿ ಅಧ್ಯಕ್ಷತೆ ವಹಿಸುವರು. ಭಾರೆಕ್ರಾ ರಾಜ್ಯ ಶಾಖೆ ಉಪಸಭಾಪತಿ ಆನಂದ್ ಎಸ್. ಜಿಗಜಿನ್ನಿ, ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಯತೀಶ್ ಬೈಕಂಪಾಡಿ, ಡಾ. ಬಸವರಾಜ ಕ್ಯಾವಟರ್, ಡಾ. ಕೃಷ್ಣ ವಿ. ಓಂಕಾರ, ಡಾ. ಪರ್ವತಗೌಡ ಹಿರೇಗೌಡ್ರ, ವೆಂಕಟೇಶ ಅವರು ಇರುವರು.

Get real time updates directly on you device, subscribe now.

Comments are closed.

error: Content is protected !!