ಕೊಪ್ಪಳದ ಭರತ್‌ ಕಂದಕೂರ ಸೆರೆಹಿಡಿದ ʻಅಂಜನಾದ್ರಿʼಯ ಚಿತ್ರಕ್ಕೆ ಚಿನ್ನದ ಪದಕ

Get real time updates directly on you device, subscribe now.

ʻಅವಿಶ್ವಾಸನೀಯ ಭಾರತʼ ವಿಷಯಾಧಾರಿತ ರಾಷ್ಟ್ರಮಟ್ಟದ ಛಾಯಾಗ್ರಹಣ ಸ್ಪರ್ಧೆ
ಭರತ್‌ ಕಂದಕೂರ ಸೆರೆಹಿಡಿದ ʻಅಂಜನಾದ್ರಿʼಯ ಚಿತ್ರಕ್ಕೆ ಚಿನ್ನದ ಪದಕ

ಕೊಪ್ಪಳ: ಫೆಡರೇಷನ್‌ ಆಫ್‌ ಇಂಡಿಯನ್‌ ಫೊಟೋಗ್ರಫಿ(FIP)ಯ ಸಹಯೋಗದಲ್ಲಿ ಪಶ್ಚಿಮ ಬಂಗಾಳದ ಕಲ್ಕತ್ತಾ ಶಾಡೋ ಲೈನ್ಸ್‌ ಸಂಸ್ಥೆ ಏರ್ಪಡಿಸಿದ್ದ ಶಾಡೋಸ್ಕೋಪ್‌-2024 ರಾಷ್ಟ್ರ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕೊಪ್ಪಳದ ಪತ್ರಿಕಾ ಛಾಯಾಗ್ರಾಹಕ ಭರತ್‌ ಕಂದಕೂರ ಸೆರೆಹಿಡಿದ ʻಅಂಜನಾದ್ರಿಯಲ್ಲಿ ಭಕ್ತರುʼ ಶೀರ್ಷಿಕೆಯ ಛಾಯಾಚಿತ್ರ ಕಲ್ಕತ್ತಾ ಶಾಡೋ ಲೈನ್ಸ್‌ನ ಚಿನ್ನದ ಪದಕ (KSL Gold Medal) ಪಡೆದುಕೊಂಡಿದೆ.

ʻಅವಿಶ್ವಾಸನೀಯ ಭಾರತʼ (Incredible India) ವಿಷಯಾಧಾರಿತವಾಗಿದ್ದ ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿರುವ ಈ ಚಿತ್ರವನ್ನು ಹನುಮಮಾಲೆ ವಿಸರ್ಜನೆ ಸಂದರ್ಭದಲ್ಲಿ ಸೆರೆಹಿಡಿಯಲಾಗಿತ್ತು. ಮಾಲೆ ವಿಸರ್ಜನೆಗಾಗಿ ಸೂರ್ಯೋದಯ ಸಮಯದಲ್ಲಿ ಅಂಜನಾದ್ರಿ ಏರುತ್ತಿರುವ ಹನುಮಮಾಲಾಧಾರಿಗಳನ್ನು ಒಳಗೊಂಡ ಈ ಚಿತ್ರದಲ್ಲಿ ಅಂಜನಾದ್ರಿಯ ಮನಮೋಹಕ ವಾತಾವರಣವನ್ನು ವಿಹಂಗಮವಾಗಿ ಸೆರೆಹಿಡಿಯಲಾಗಿದೆ.

ದೇಶದ ವಿವಿಧ ರಾಜ್ಯಗಳ 310  ಜನ ಛಾಯಾಗ್ರಾಹಕರ ಸಾವಿರಕ್ಕೂ ಅಧಿಕ ಸಂಖ್ಯೆಯ ಛಾಯಾಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಖ್ಯಾತ ಛಾಯಾಗ್ರಾಹಕರಾದ ಜಿನೇಶ್‌ ಪ್ರಸಾದ್‌, ಸೌಮೆನ್‌ ಮಂಡಲ್‌, ಅರೂಪ್‌ ಭಟ್ಟಾಚಾರ್ಯಜಿ ತೀರ್ಪುಗಾರರಾಗಿ ಭಾಗವಹಿಸಿದ್ದರು.

* ಪತ್ರಿಕಾ ಛಾಯಾಗ್ರಾಹಕ ಭರತ್‌ ಕಂದಕೂರ

* ಕಲ್ಕತ್ತಾ ಶಾಡೋ ಲೈನ್ಸ್‌ನ ಚಿನ್ನದ ಪದಕ (KSL Gold Medal) ಪಡೆದ ಭರತ್‌ ಕಂದಕೂರ ಸೆರೆಹಿಡಿದ ʻಅಂಜನಾದ್ರಿಯಲ್ಲಿ ಭಕ್ತರುʼ ಶೀರ್ಷಿಕೆಯ ಛಾಯಾಚಿತ್ರ

Get real time updates directly on you device, subscribe now.

Comments are closed.

error: Content is protected !!