ಕಂಪ್ಲಿ ಸೇತುವೆ ನಿರ್ಮಾಣಕ್ಕೆ ಕೆಆರ್‌ಎಸ್ ಒತ್ತಾಯ
ಗಂಗಾವತಿ: ಬಳ್ಳಾರಿಯನ್ನು ಸಂಪರ್ಕಿಸುವ ಗಂಗಾವತಿ ಅತಿ ಸಮೀಪದ ಮಾರ್ಗವಾಗಿರುವ ತುಂಗಭದ್ರ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪ್ಲಿ ಸೇತುವೆ ಶಿಥಿಲಾವಸ್ಥೆ ತಲುಪಿದ್ದು ಸಂಪೂರ್ಣ ನೆಲಸಮಗೊಳಿಸಿ ಅತ್ಯಾಧುನಿಕ ಗುಣಮಟ್ಟದ ಸೇತುವೆ ನಿರ್ಮಿಸಬೇಕೆಂದು ಕರ್ನಾಟಕ ರಾಷ್ಟ್ರೀಯ ಸಮಿತಿ ಗಂಗಾವತಿ ತಾಲೂಕ ಘಟಕ ಲೋಕಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದೆ.
ಗಂಗಾವತಿ ವ್ಯಾಪ್ತಿಗೆ ಈ ಸೇತುವೆ ಶೇಕಡ ೭೫ ಭಾಗ ಬರುತ್ತಿದ್ದು, ಪ್ರತಿವರ್ಷ ಕಳಪೆ ಕಾಮಗಾರಿ ಮಾಡುವ ಮೂಲಕ ಸರಕಾರಿ ದುಡ್ಡು ಎತ್ತುವಳಿ ಮಾಡಲಾಗುತ್ತಿದೆ. ನೀರು ಹೆಚ್ಚುವರಿಯಾಗಿ ನದಿಗೆ ಬಿಟ್ಟಲ್ಲಿ ಮತ್ತೆ ಸೇತುವೆ ಮುಳುಗಡೆಯಾಗಿ ಕಾಮಗಾರಿಯೆಲ್ಲಾ ನೀರಲ್ಲಿ ಹೋಮ ಮಾಡಿದಂತಾಗುತ್ತದೆ. ಹೊಸ ಸೇತುವೆ ನಿರ್ಮಾಣಕ್ಕೆ ಆದೇಶವಾಗಿ ಸುಮಾರು ಆರು ವರ್ಷ ಆಗಿದೆ ಎನ್ನಲಾಗುತ್ತಿದೆ ಆದರೆ ಅಧಿಕಾರಿಗಳ ಸೋಮಾರಿತನದಿಂದಾಗಿ ಕಾಮಗಾರಿ ಪೂರಕ ಪ್ರಕ್ರಿಯೆಗಳು ನಡೆಯುತ್ತಿಲ್ಲ ಇದು ದುರಾದೃಷ್ಟಕರ, ಮತ್ತೆ ಭಾರಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದೀರಿ, ರಾತ್ರಿ ವೇಳೆ ಭಾರಿ ವಾಹನಗಳು ಪೊಲೀಸರ ಕಣ್ ತಪ್ಪಿಸಿ ಸೇತುವೆ ಮೇಲೆ ಒಡಾಡುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡಲಾಗುತ್ತಿದೆ ಕೂಡಲೆ ಅಧಿಕಾರಿ ವರ್ಗ ಹಾಗು ಪೊಲೀಸ್ ಇಲಾಖೆ ಈ ಕುರಿತು ಗಂಭೀರವಾಗಿ ಕ್ರಮಕ್ಕೆ ಮುಂದಾಗಬೇಕು, ಹೊಸ ಸೇತುವೆ ನಿರ್ಮಿಸಿ ಆಗುವ ಅನಾಹುತ ತಪ್ಪಿಸಬೇಕೆಂದು ಕೆಆರ್‌ಎಸ್ ಮನವಿ ಪತ್ರದಲ್ಲಿ ಅಗ್ರಹಿಸಿದೆ.
ಈ ಸಂದರ್ಭದಲ್ಲಿ ಕೆಆರ್‌ಎಸ್ ಗಂಗಾವತಿ ತಾಲೂಕಾ ಅಧ್ಯಕ್ಷ ಮೈನುದ್ದೀನ್ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಗಣೇಶ್ ಅಮೃತಾ ತಾಲೂಕಾ ಘಟಕದ ಪದಾಧಿಕಾರಿಗಳಾ ಮೆಹೆಬೂಬ್, ಮಲ್ಲಪ್ಪ, ಶರಣಪ್ಪ ಇತರರಿದ್ದರು.
Comments are closed.