ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘ ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕುಷ್ಟಗಿ ಅಂಗನವಾಡಿ ನೌಕರರ ಸಂಘ ಪ್ರತಿಭಟನೆ
ಕುಷ್ಟಗಿ. ಜು.10; ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕುಷ್ಟಗಿ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಬೆಳಿಗ್ಗೆ ಇಲ್ಲಿನ ಶಿಶು ಅಭಿವೃದ್ಧಿ ಇಲಾಖೆ ಆವರಣದಲ್ಲಿ ಪ್ರತಿಭಟನೆ ನಡೆಸಿ ಸಿಡಿಪಿಓ ಯಲ್ಲಮ್ಮ ಹಂಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕುಷ್ಟಗಿ ತಾಲೂಕು ಸಮಿತಿ ಕಾರ್ಯದರ್ಶಿ ಕಲಾವತಿ ಮೆಣೇದಾಳ ಮಾತನಾಡಿ ನವೆಂಬರ್ 2022 ರಿಂದ ಕಟ್ಟಡ ಬಾಡಿಗೆ ಹಾಗೂ ಮಾ.25 ಸಿಲೆಂಡರ್,
ತರಕಾರಿ ಬಿಲ್ ಬಾಕಿ ಇದೆ.
ಪೋಷಣ ಅಭಿಯಾನದ ಪ್ರೋತ್ಸಾಹ ಧನ ಅತ್ಯವಶ್ಯವಾಗಿ ಬೇಗ ಬಿಡುಗಡೆ ಮಾಡಬೇಕು.
ಕೇಂದ್ರದಲ್ಲಿ ದಾಖಲಾತಿ ನಿರ್ವಹಿಸಲು ರಜಿಸ್ಟರ್ ಕೊಡಿ, 2022-23 ನೇ ಸಾಲಿನ ಸಮವಸ್ತ್ರ ಕೊಡಲು
ಮೇಲಾಧಿಕಾರಿಗಳ ಗಮನಕ್ಕೆ ತರಬೇಕು.
ಎಲ್.ಐ.ಸಿ. ಹಣ ಕಡಿತ ಆದ ಬಗ್ಗೆ ಮಾಹಿತಿ ನೀಡಿ.
ಅಂ.ಕಾ.ಇರುವ ಹಕ್ಕಿನ ರಜೆ ವರ್ಷಕ್ಕೆ 24 ಮತ್ತು ಸ್ಥಳೀಯ ರಜೆ 5 ಅವುಗಳನ್ನು ಅವರಿಗೆ ಬೇಕಾದಾಗ ನೀಡಬೇಕು.
ಕಾರ್ಯಕರ್ತರೆಯರು ಅನಾರೋಗ್ಯ ಪೀಡಿತರಾದ ಸಂದರ್ಭದಲ್ಲಿ ಅನಿವಾರ್ಯವಾಗಿ 6 ತಿಂಗಳವರೆಗೆ ವೇತನ ಕಡಿತ ಮಾಡಿ ರಜೆ ಮಂಜೂರು ಮಾಡಬೇಕು.
ಮೂರು ವರ್ಷ ಸೇವೆ ಸಲ್ಲಿಸಿದ ಮೇಲ್ವಿಚಾರಕರು ಮತ್ತು ಇಲಾಖೆಯ ಸಿಬ್ಬಂದಿಯವರನ್ನು ತಿವೃ
ವರ್ಗಾವಣೆ ಮಾಡಲು ಮೇಲಾಧಿಕಾರಿಗಳ ಗಮನಕ್ಕೆ ತನ್ನಿ(ಅಂಗವಿಕಲೆ, ವಿಧವೆಯರನ್ನು
ಹೊರತು ಪಡಿಸಿ)ಹನುಮನಾಳ ಮೇಲ್ವಿಚಾರಕಿಯನ್ನು ವಲಯ ಬದಲಾವಣೆ ಮಾಡಿ,
ಗೌರವ ಧನದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತಯೆರಿಗೆ ವಲಯ ಮೇಲ್ವಿಚಾರಕರು ಸಲಹೆ
ಸೂಚನೆ, ಮಾರ್ಗದರ್ಶನ ನೀಡಿ ಕೆಲಸ ತೆಗೆದುಕೊಳ್ಳಬೇಕು
ರೇಷನ್ ಗಾಡಿಯೊಳಗೆ ಇಲಾಖೆಯಿಂದ ಒಬ್ಬರನ್ನು ಕಳುಹಿಸಿಕೊಡಿ ಗಾಡಿಗೆ
ಜಿ.ಪಿ.ಎಸ್.ಅಳವಡಿಸಿ,
ಶಾಡಲಗೇರಿ ಕಾರ್ಯಕರ್ತರಿಗೆ 2ನೇ ನೋಟಿಸ ಕೊಟ್ಟಿದ್ದೀರಿ ಸಾಕು ಪುನಃ ಕೆಲಸ ನಿರ್ವಹಿಸಲು
ಅನುಮತಿಕೊಡಿ.
ಸಂಬಂದಪಟ್ಟ ಪದಾಧಿಕಾರಿ ಅಂದರೆ ಅಧ್ಯಕ್ಷ, ಕಾರ್ಯದರ್ಶಿ ಖಜಾಂಚಿ ಯಾವುದೇ ಮಿಟಿಂಗ್ ನೋಟಿಸ್ ಬಂದಲ್ಲಿ ಸಾಮೂಹಿಕ
ಗ್ರೂಪಿಗೆ ಹಾಕದೆ ನೇರವಾಗಿ ಸಂಬಂದಪಟ್ಟವರಿಗೆ ಕೊಡಬೇಕು.
ಸಂಬಂದಪಟ್ಟ ಪದಾಧಿಕಾರಿಗಳು 600 ಜನರ ಪ್ರತಿನಿಧಿಯಾಗಿರುತ್ತಾರೆ. ಅವರ ಸಮಸ್ಯೆ ಬಗ್ಗೆ
ಮಾತನಾಡಲು ಪೋನ್ ರೀಸಿವ್ಮಾಡಿ ಇಲ್ಲವಾದಲ್ಲಿ ಒಂದು ಲ್ಯಾಂಡಪೋನ್ ಇಡಬೇಕು.
ಕಾರ್ಯಕರ್ತರ ಮಿಟ್ಟಿಂಗ್ ಎ, ಬೇರೆ ಬಿ, ಬೇರೆ ಮಾಡದೆ ಎ,ಬಿ, ಸೇರಿ ಸಭೆ ಮಾಡಿ ಆಸ್ಪತ್ರೆ ಮತ್ತು ಇಲಾಖೆ ಇವೆರಡು ಬಿಟ್ಟು ಅಂಗನವಾಡಿಯಲ್ಲಿ ಮಿಟ್ಟಿಂಗ್ ಮಾಡದಂತೆ
ನೊಡಿಕೊಳ್ಳಬೇಕು.
3 ಕಿ.ಮೀ.ಒಳಗಡೆ ಇರುವವರಿಗೆ ಮುಂಬಡ್ತಿ ಕೊಡದೆ ಇದ್ದರೆ ಅರ್ಜಿಗೆ ಹಿಂಬರಹ ಇಂದೆ
ಕೊಡಿ, ಅವರ ಹುದ್ದೆಗಳನ್ನು ಖಾಲಿ ಇಡಿ.
ಸಂಬಂದಪಟ್ಟ ಪದಾಧಿಕಾರಿಗಳನ್ನು 3 ತಿಂಗಳಿಗೆ ಒಂದು ಸಾರಿ ಕುಂದುಕೊರತೆ ಸಭೆ ಕರೆಯಿರಿ.
ಪ್ರತಿ ವರ್ಷ ಇಲಾಖೆಗೆ ಬಂದಿರುವ
ಅನುದಾನದಲ್ಲಿ ಎಪ್ರಿಲ್ ರಿಂದ ಮಾರ್ಚ್ ವರೆಗೆ ಕಾರ್ಯಕರ್ತರಿಗೆ ಖರ್ಚು ಮಾಡಿರುವ ಲೆಕ್ಕಪತ್ರ ಸಂಘಕ್ಕೆ ಕೊಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ೆ ಅಕ್ಕಮಹಾದೇವಿ ಪಟ್ಟಲಚಿಂತಿ, ಖಜಾಂಚಿ ಉಮಾ ಅಂಗಡಿ, ವಲಯದ ಲೀಡರ್ ಗಳಾದ ಜ್ಯೋತಿ ಕೋತಬಾಳ, ಶಾಂತಾ ನಿಲೋಗಲ್, ಗೀತಾ ಮನ್ನಾಪೂರ, ರೇಣುಕಾ ಮುರ್ಕತಿನಾಳ, ಸುಲೋಚನಾ, ಸರಸ್ವತಿ ಮುದೇನೂರ, ಲತಾ, ಶಾರದಾ ಚಳಗೇರಿ, ಪಾರ್ವತಿ ಹೂಲಗೇರಿ, ಜಯಶ್ರೀ ಆಶ್ರೀತ್, ರೇಣುಕಾ ಮನ್ನೇರಾಳ ಹಾಗೂ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Comments are closed.