ರವಿಕುಮಾರ ಹಿರೇಮಠಗೆ ರಾಷ್ಟ್ರೀಯ ನಾಗರಿಕ ಧರ್ಮ ರತ್ನಾಕರ ಪ್ರಶಸ್ತಿ ಪ್ರದಾನ
ಕುಷ್ಟಗಿ. ; ಪಟ್ಟಣದ ಜಂಗಮ ಸಮಾಜದ ಹಿರಿಯ ಮುಖಂಡ ರವಿಕುಮಾರ ಮದ್ದಾನಯ್ಯ ಹಿರೇಮಠ ಅವರಿಗೆ ವೈದಿಕ ಚಾರಿಟೇಬಲ್ (ಮಹಾಲಕ್ಷ್ಮಿ ಗುರುಕುಲ) ಟ್ರಸ್ಟ್ ಅಧ್ಯಕ್ಷ ಡಾ.ಕೆ.ಎಸ್ ರಾಜಕುಮಾರ ಶಾಸ್ತ್ರಿ ಅವರು ರಾಷ್ಟ್ರೀಯ ನಾಗರಿಕ ಧರ್ಮ ರತ್ನಾಕರ ಪ್ರಶಸ್ತಿ ಪ್ರದಾನ ಮಾಡಿದರು.
ಸೋಮವಾರ ಬೆಂಗಳೂರಿನ ಸುಜ್ಞಾನ ಬಸವೇಶ್ವರ ಮಂಗಲ ಭವನದಲ್ಲಿ ವೈದಿಕ ಚಾರಿಟೇಬಲ್ (ಮಹಾಲಕ್ಷ್ಮಿ ಗುರುಕುಲ) ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಅರ್ಚಕ ಪುರೋಹಿತರು 6 ನೇ ವರ್ಷದ ಕಾರ್ಯಗಾರ ಮತ್ತು
ಆಗಮಿಕರ ರಾಷ್ಟ್ರೀಯ ಸಾಧಕರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪಟ್ಟಣದ ಜಂಗಮ ಸಮಾಜದ ಹಿರಿಯ ಮುಖಂಡ ರವಿಕುಮಾರ ಮದ್ದಾನಯ್ಯ ಹಿರೇಮಠ ಅವರು ಕುಷ್ಟಗಿ ಪಟ್ಟಣ ಹಾಗೂ ತಾಲೂಕಿನಲ್ಲಿ ರಕ್ತ ದಾನ ಶಿಬಿರ, ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಧಾರ್ಮಿಕ ಹಾಗೂ ಸಮಾಜಿಕ ಕೆಲಸ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮಣಿಕಂಠ ಶಿವಾಚಾರ್ಯ ಮಹಾಸ್ವಾಮಿಗಳು, ಹೇಮಲತಾ ಹಿರೇಮಠ, ವೇದಮೂರ್ತಿ ವಿರೇಶ ಶಾಸ್ತ್ರಿ ಕಾಳಾಪೂರಮಠ, ಕಂಪ್ಲಿ ಗನಮಠದಯ್ಯ ಶಾಸ್ತ್ರಿ, ಶಿವಪುತ್ರಯ್ಯ ಶಾಸ್ತ್ರಿ, ಶಶಿಧರ ಶಾಸ್ತ್ರಿ ಉಪಸ್ಥಿತರಿದ್ದರು.
Comments are closed.