ಜನಮನ ಸೆಳೆದ ಯಕ್ಷಗಾನ ಪ್ರದರ್ಶನ 

Get real time updates directly on you device, subscribe now.

ಕೊಪ್ಪಳ : ಕರಾವಳಿ ಬಳಗ ಕೊಪ್ಪಳ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಇವರ ಸಂಯಕ್ತಾಶ್ರಯದಲ್ಲಿ
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ , ನಡೂರು, ಮಂದಾರ್ತಿ ಇವರ ವತಿಯಿಂದ  ನಗರದ ಎಂ.ಪಿ ಪ್ಯಾಲೇಸ್ ನಲ್ಲಿ
“ಮಹಾಶಕ್ತಿ ವೀರಭದ್ರ” ಯಕ್ಷಗಾನ ಪ್ರದರ್ಶನ ಜನಮನ ಸೆಳೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಕೆ ರಾಜಶೇಖರ್ ಹಿಟ್ನಾಳ್ ಅವರು ಮಾತನಾಡಿ ಕರಾವಳಿ ಭಾಗದ ಕಲೆ ಯಕ್ಷಗಾನವನ್ನು ಎಲ್ಲೆಡೆ ಉಳಿಸಿ ಬೆಳೆಸುತ್ತಿರುವುದು ಸಂತಸ ತಂದಿದೆ, ವ್ಯಾಪಾರ  ಉದ್ಯಮ ಜೊತೆ ತಮ್ಮ ಭಾಗದ ಕಲೆಯನ್ನು ಎಲ್ಲೇ ಹೋದರು ಅದನ್ನು ಪ್ರೋತ್ಸಾಹಿಸುತ್ತಿರುವುದು ಸಂತಸ  ಮುಂದಿನ ಪೀಳಿಗೆಗೆ ಈಕೆಲೆ ಉಳಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ ಯಕ್ಷಗಾನ ಕಲೆ ಗಂಡು ಕಲೆ,ಕರಾವಳಿ ಭಾಗದ ಜನತೆ ಪ್ರತಿವರ್ಷ ಯಕ್ಷಗಾನ ಪ್ರದರ್ಶನ ಮಾಡಿ ಕಲೆಯನ್ನು ಪ್ರೋತ್ಸಾಹಿಸುತ್ತಾರೆ ಎಂದರು.
ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರು ಮಾತನಾಡಿ ಯಕ್ಷಗಾನ ಕಲೆ ನೋಡಲು ಅತ್ಯಂತ ಉತ್ಸಾಹ ಎನಿಸುತ್ತದೆ, ಇಂದು ಈ ಕಲೆ ಎಲ್ಲೆಡೆ ಪ್ರದರ್ಶನವಾಗುತ್ತಿದೆ ಈ ಕಲೆಯನ್ನು ಉಳಿಸಿ ಬೆಳೆಸಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಕರಾವಳಿ ಬಳಗದ ಗೌರವಾಧ್ಯಕ್ಷ ಜೀವನ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ಅಮೀನ್ ಭಾಗವತರು ಮಂದಾರ್ತಿ ಮೇಳ,ಕೊಪ್ಪಳ ಜಿಲ್ಲಾ ಹೋಟೇಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ ಶೆಟ್ಟಿ,ಕೊಪ್ಪಳ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸವನಗೌಡ ಪಾಟೀಲ್ ,ಉದ್ಯಮಿ ಮಹಾಂತೇಶ್  ಹಿರೇಮಠ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!