ವೈದ್ಯೆಯ ಮೇಲಿನ ಅತ್ಯಾಚಾರ ಕೊಲೆ ಹಾಗೂ ಪ್ರತಿಭಟನಾಕಾರರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

Get real time updates directly on you device, subscribe now.

ಕೊಲ್ಕತ್ತಾದ ಸರ್ಕಾರಿ ಆರ್. ಜಿ. ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯೆಯ ಮೇಲಿನ ಅತ್ಯಾಚಾರ ಕೊಲೆ ಹಾಗೂ ಪ್ರತಿಭಟನಾಕಾರರ ಮೇಲಿನ ದಾಳಿಯನ್ನು ಖಂಡಿಸಿ ಕೊಪ್ಪಳದ ಅಶೋಕ ವೃತ್ತದಲ್ಲಿ ಪ್ರತಿಭಟನೆ.
ಕೊಲ್ಕತ್ತಾದ ಸರ್ಕಾರಿ ಆರ್. ಜಿ. ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯೆಯ ಮೇಲಿನ ಅತ್ಯಾಚಾರ ಕೊಲೆ ಹಾಗೂ ಪ್ರತಿಭಟನಾಕಾರರ ಮೇಲಿನ ದಾಳಿಯನ್ನು ಖಂಡಿಸಿ ಕೊಪ್ಪಳದ ಅಶೋಕ ವೃತ್ತದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ, ಪ್ರಸ್ತಾವಿಕವಾಗಿ ಮಾತನಾಡಿದ ಎಐಎಂಎಸ್ಎಸ್ ನ ಜಿಲ್ಲಾ ಸಮಿತಿ ಸದಸ್ಯರಾದ ಶಾರದ ಗಡ್ಡಿ ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ವ್ಯಾಪಕವಾದ ಅತ್ಯಾಚಾರ ಹಾಗೂ ಕೊಲೆ ಘಟನೆಗಳು ಯಗ್ಗಿಲ್ಲದೆ ನಡೆಯುತ್ತಿವೆ ಇಂಥ ಘಟನೆಗಳು ನಡೆಯಲು ಕಾರಣ ವ್ಯವಸ್ಥೆ ಮತ್ತು ಈ ಸರ್ಕಾರಗಳೆ ಕಾರಣ ನಿರ್ಭಯ ಘಟನೆಯಿಂದ ಹಿಡಿದು ಹಲವಾರು ಹೆಣ್ಣು ಮಕ್ಕಳ ಮೇಲೆ ಇಂತಹ ಅತ್ಯಾಚಾರ ಕೊಲೆಗಳು ನಡೆಯುತ್ತಾ ಬಂದಿದೆ. ಇದರ ಬಗ್ಗೆ ಸರ್ಕಾರಗಳು ಸೂಕ್ತವಾದ ಕ್ರಮಗಳು ಕೈಗೊಳ್ಳುತ್ತಿಲ್ಲವೆಂದು ಸರ್ಕಾರದ ಮೇಲೆ ಹರಿಹೈದರು.
ಅದೇ ರೀತಿಯಾಗಿ ಎಐಎಂಎಸ್ಎಸ್ ಸಂಘಟನೆಯ ಜಿಲ್ಲಾ ಸಂಚಾಲಕರಾದ ಮಂಜುಳಾ ಎಂ, ಹೆಣ್ಣು ಮಕ್ಕಳಿಗೆ ಭದ್ರತೆ ಕೊಡುವಲ್ಲಿ ಸರ್ಕಾರ ಮತ್ತು ವ್ಯವಸ್ಥೆ ವಿಫಲವಾಗಿದೆ. ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಕೇವಲ ಭೋಗದ ವಸ್ತುವಿನಂತೆ ಕಾಣುತ್ತಿವೆ. ಅಷ್ಟೇ ಅಲ್ಲದೆ ಮೊಬೈಲ್ ವೆಬ್ ಸೈಟ್ಸ್ ಗಳಲ್ಲಿ ವ್ಯಾಪಾಕವಾಗಿ ಅಶ್ಲೀಲ ಸಿನಿಮಾ ಸಾಹಿತ್ಯವನ್ನು ಹರಿಬಿಡುತ್ತಿರುವುದರಿಂದ ಮಕ್ಕಳು ಹಾಗೂ ಯುವಜನರು ದಾರಿ ತಪ್ಪುತ್ತಿದ್ದಾರೆ ಇದು ಕೂಡ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರಗಳಿಗೆ ಮುಖ್ಯ ಕಾರಣ, ಇದು ತಿಳಿದಿದ್ದರೂ ಸರ್ಕಾರಗಳು ಅವುಗಳನ್ನು  ಬ್ಯಾನ್ ಮಾಡದಿರುವುದು ವಿಪರ್ಯಾಸ ಎಂದು   ಸರಕಾರಗಳನ್ನು ತರಾಟೆಗೆ ತೆಗೆದುಕೊಂಡರು.
 ನಂತರ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ನಮ್ಮ ದೇಶಕ್ಕೆ ಸ್ವತಂತ್ರ ಬಂದು 78 ವರ್ಷ ಕಳೆದರೂ ಮಹಿಳೆ ಮತ್ತು ಮಕ್ಕಳ ಮೇಲೆ ವ್ಯಾಪಕವಾದ ದೌರ್ಜನ್ಯ ಕೊಲೆಗಳು ನಿರಂತರವಾಗಿ ನಡೆಯುತ್ತಿರುವುದು ಶೋಚನಿಯ ಸಂಗತಿ. ಕಾರಣ ಸಮಾಜದಲ್ಲಿ ಸಾಂಸ್ಕೃತಿಕ ಮೌಲ್ಯಗಳು ಅಧಪತನವಾಗುತ್ತಿರುವುದೇ ಮುಖ್ಯ ಕಾರಣ. ಹಾಗಾಗಿ ಮಹಾನ್ ವ್ಯಕ್ತಿಗಳ ವಿಚಾರಗಳು ವಿದ್ಯಾರ್ಥಿ ಯುವಕರಿಗೆ ಆದರ್ಶವಾಗಬೇಕು ಒಳ್ಳೆ ವಿಚಾರಗಳು ಸಮಾಜದಲ್ಲಿ ಹರಡಿದರೆ ಮಾತ್ರ, ಆದರ್ಶ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಹಾಳಾಗಿರುವ ಸಮಾಜಕ್ಕೆ ಚಿಕಿತ್ಸೆ ನೀಡಲು ನೆರವಾಗುತ್ತದೆ. ಇಂಥ ಘಟನೆಗಳು ನಡೆದಾಗಾಲೆಲ್ಲ ಪ್ರಶ್ನೆ ಮಾಡುವವರು ವಿದ್ಯಾರ್ಥಿ ಯುವಜನ ಮಹಿಳೆಯರೇ, ಹಾಗಾಗಿ ಈ ಹೋರಾಟವನ್ನು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯ ಒದಗಿಸುವವರೆಗೂ ಕೂಡ ನಾವೆಲ್ಲ ಮುಂದುವರಿಸಬೇಕೆಂದು ಕರೆ ನೀಡಿದರು.
ಈ ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ಎಐಡಿವೈಓ ಜಿಲ್ಲಾ ಕಾರ್ಯದರ್ಶಿಗಳಾದ ಶರಣು ಪಾಟೀಲ್ ಕೊಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವ ಘಟನೆ ತುಂಬಾ ಅಮಾನವೀಯ ಘಟನೆ. ಇಂಥ ಘಟನೆಗಳು ನಮ್ಮ ದೇಶದಲ್ಲಿ ಪದೇ ಪದೇ ನಡೆಯುತ್ತಿವೆ ಈ ಘಟನೆಯನ್ನು ಸೂಕ್ಷ್ಮವಾಗಿ ನೋಡಿದಾಗ ಆಡಳಿತ ಯಂತ್ರದ ವಿಫಲತೆ ಎದ್ದು ಕಾಣುತ್ತಿದೆ ಮತ್ತು ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಸೂಕ್ತ ಭದ್ರತೆ ಇಲ್ಲದಿರುವುದು ನೋವಿನ ಸಂಗತಿ. ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ ಆದರೆ ಸರ್ಕಾರಗಳು ಮರೆತು ಕುಂತಿವೆ ಎಂದು ಸರ್ಕಾರವನ್ನು ಲೇವಡಿ ಮಾಡಿದರು. ಅದೇ ರೀತಿ ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಸೂಕ್ತ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಕಾರ್ಯಕರ್ತರಾದ   ಪ್ರದೀಪ್, ದೇವರಾಜ್ ಹೊಸಮನಿ, ಮೌನೇಶ್, ಸುಮ್ಮಯ, ಗಿರೀಶ್, ಮಾರುತಿ, ಕೃಷ್ಣ,ಮಹೇಶ ಹಾಗೂ ಹುಸೇನ್ ಬಿ, ಜ್ಯೋತಿ,ರೇಣುಕಾ, ಗೌತಮ್,ಮಂಜುನಾಥ್, ಹುಲಿಗೆಮ್ಮ,ಶ್ರೀದೇವಿ ಸೇರಿದಂತೆ ವಿವಿಧ ಕಾಲೇಜಿನ 400 ಕ್ಕೂ ಹೆಚ್ಚು..ವಿದ್ಯಾರ್ಥಿಗಳು ಉಪನ್ಯಾಸಕರು, ವೈದ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!