ದೇಶದಾದ್ಯಂತ ವೈದ್ಯರ ಸೇವೆಯ ಹಿಂದೆಗೆತ. – ಡಾ|| ವೀಣಾ ಸತೀಶ್

Get real time updates directly on you device, subscribe now.


ಗಂಗಾವತಿ: ಕೆ.ಆರ್ ಮೆಡಿಕಲ್ ಕಾಲೇಜ್ ಕೊಲ್ಕತ್ತಾದಲ್ಲಿ ಆಗಸ್ಟ್ ೯ ರಂದು ಮುಂಜಾನೆ ಕರ್ತವ್ಯ ನಿರತ ಸ್ನಾತಕೋತ್ತರ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದೆ. ಈ ಘಟನೆ ದೇಶದ ವೈದ್ಯಕೀಯ ಸಮೂಹವನ್ನೇ ಆಘಾತಕ್ಕೀಡು ಮಾಡಿದೆ. ಇದು ನಡೆದ ದಿನದಿಂದಲೇ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಮು?ರ ನಡೆಸುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ಕ್ಯಾಂಡಲ್ ಮಾರ್ಚ್ ಮೂಲಕ ಪ್ರತಿಭಟನೆಯನ್ನು ನಡೆಸಿತು. ಮೊದಲನೆಯ ದಿನವೇ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರು ಅಪರಾಧವನ್ನು ಅತ್ಯಂತ ಹೇಯವಾಗಿ ತನಿಖೆ ನಡೆಸಿ, ಆ ಬಳಿಕ ಸುಮ್ಮನಾಗಿದ್ದಾರೆ ಎಂದು ಐ.ಎಂ.ಎ ಅಧ್ಯಕ್ಷರಾದ ಡಾ|| ವೀಣಾ ಸತೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಲ್ಕತ್ತಾ ಹೈಕೋರ್ಟ್ ನಡೆಸಿದ ತನಿಖೆಯಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ, ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿದೆ ರಾಜ್ಯದ ಪೊಲೀಸ್ ಅಧಿಕಾರಿಗಳು ಸಾಕ್ಷಿಯನ್ನು ನಾಶಗೊಳಿಸುವ ಸಾಧ್ಯತೆಗಳನ್ನು ಊಹಿಸಿದ್ದಾರೆ. ಆಗಸ್ಟ್ ೧೫ರಂದು ದೊಡ್ಡ ಗುಂಪಿನಲ್ಲಿ ಜನರು ಆಸ್ಪತ್ರೆಯ ಆವರಣವನ್ನು ಪ್ರವೇಶಿಸಿ, ದಾಂದಲೆ ಎಬ್ಬಿಸಿದ್ದು ಮಾತ್ರವಲ್ಲ ಅಪರಾಧಿ ಓಡಾಡಿದ ಸ್ಥಳಗಳಲ್ಲಿ ಸಾಕ್ಷಿಗಳನ್ನು ನಾಶಪಡಿಸಿದ್ದಂತೆ ತೋರುತ್ತದೆ. ಪ್ರತಿಭಟನೆ ನಡೆಸಿದ ಕಿರಿಯ ವೈದ್ಯಾಧಿಕಾರಿಗಳ ಮೇಲೂ ದಾಳಿ ಮಾಡಿದ್ದಾರೆ. ವೈದ್ಯ ವೃತ್ತಿಯಲ್ಲಿ ಸಹಜವಾಗಿ ಆಗುವ ತೊಂದರೆಯ ಜೊತೆಗೆ, ಅದರಲ್ಲೂ ಪ್ರಕೃತಿ ಸಹಜವಾಗಿ ತೊಂದರೆಗೆ ಒಳಗಾಗುವ ಹೆಣ್ಣು ಮಕ್ಕಳು ಬಲಿಯಾಗುವುದನ್ನು ನೋಡುತ್ತಿದ್ದೇವೆ. ಆಸ್ಪತ್ರೆ ಆವರಣದಲ್ಲಿ ವೈದ್ಯರಿಗೆ ರಕ್ಷಣೆ ಒದಗಿಸಿಕೊಡಲು ಆಸ್ಪತ್ರೆಯ ಆಡಳಿತ ಮಂಡಳಿಯದೆ ಬಾಧ್ಯತೆ ಇರುತ್ತದೆ. ಆಸ್ಪತ್ರೆಯ ಆಡಳಿತ ಮಂಡಳಿಯ ಔದಾಸಿನ್ಯ ಮತ್ತು ಸಂವೇದನಾಶೀಲತೆಯ ಕೊರತೆಯ ಪರಿಣಾಮವೇ ವೈದ್ಯರಿಗೆ ಸಿಬ್ಬಂದಿಗಳ ಮೇಲೆ ಆಕ್ರಮಣ ನಡೆಯುವುದಕ್ಕೆ ಕಾರಣ. ಕೆ.ಆರ್. ಕಾಲೇಜಿನಲ್ಲಿ ನಡೆದ ಈ ಕ್ರೂರ ಘಟನೆಯ ಬಳಿಕ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರ ಮೇಲೆ ಸ್ವಾತಂತ್ರೋತ್ಸವದ ದಿನವೇ ನಡೆದ ಗುಂಡಾಗಿರಿಯನ್ನು ಪ್ರತಿಭಟಿಸಿ ಭಾರತೀಯ ವೈದ್ಯಕೀಯ ಸಂಘವು ಆಗಸ್ಟ್-೧೭ ರಂದು ಮುಂಜಾನೆ ಆರು ಗಂಟೆಯಿಂದ ಆಗಸ್ಟ್-೧೮ ರಂದು ಮುಂಜಾನೆ ಆರು ಗಂಟೆಯವರೆಗೆ ದೇಶದಾದ್ಯಂತ ಸೇವೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ತುರ್ತು ಚಿಕಿತ್ಸೆಗಳು ಲಭ್ಯವಿರುತ್ತವೆ ಹಾಗೂ ಕ್ಯಾಶುಯಲ್ಟಿಯಲ್ಲಿ ವೈದ್ಯರ ಸೇವೆ ಲಭ್ಯವಿರುತ್ತದೆ. ಸೇವೆಯ ಹಿಂದೆಗೆತವು ಆಧುನಿಕ ವೈದ್ಯ ಪದ್ಧತಿಯ ವೈದ್ಯರಿಗೆ ಅನ್ವಯಿಸುತ್ತದೆ. ಭಾರತೀಯ ವೈದ್ಯಕೀಯ ಸಂಘವು ವೈದ್ಯರಿಗಾಗಿ ದೇಶದ ಸಹಾನುಭೂತಿಯನ್ನು ಅಪೇಕ್ಷಿಸುತ್ತದೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: