ಕೆ ಎಸ್ ಆಸ್ಪತ್ರೆ  ಮತ್ತು ಕೆ ಎಸ್ ಗ್ರೂಪ್ ಆಫ್ ಇನ್ಸ್ಟಿಟ್ಯುಶನ್  ವತಿಯಿಂದ 78ನೇಯ ಸ್ವಾತಂತ್ರ್ಯ ದಿನಾಚರಣೆ

Get real time updates directly on you device, subscribe now.

ಧ್ವಜಾರೋಹಣವನ್ನು  ಕೆ ಎಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಬಸವರಾಜ್ ಎಸ್ ಕ್ಯಾವಟರ  ನೆರವೇರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ. ಕೆ ಜಿ ಕುಲಕರ್ಣಿ, ಹಿರಿಯ ವೈದ್ಯರು ಕೊಪ್ಪಳ.
ವೈ ಎಂ ಕೋಲ್ಕರ್ಹಿ, ಹಿರಿಯ ಪತ್ರಕರ್ತರು ಕೊಪ್ಪಳ.   ಪ್ರಭಾಕರ್ ವಿಕಲಚೇತನ ತಜ್ಞರು ಸಾಮರ್ಥ್ಯ ಸಂಸ್ಥೆ.   ಶಿವಪ್ಪ ಶೆಟ್ಟರ್, ಸ್ವಾತಂತ್ರ ಹೋರಾಟಗಾರರು  ವಿ ಆರ್ ಹಿರೇಮಠ, ವಿಜ್ಞಾನ ಶಿಕ್ಷಕರು ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆ, ಕುಕುನೂರು.  ಸತೀಶ್ ಶಿಕ್ಷಕರು,  ಕಾಶಯ್ಯ ಸ್ವಾಮಿ, ಶಿಕ್ಷಣ ಪ್ರೇಮಿಗಳು ಹಿರಿಯ ನಾಗರಿಕರು ಹೊಸ ಬಂಡಿಹರ್ಲಾಪುರ.   ಪ್ರಕಾಶ್ ಎಲ್ ಹಾದಿಮನಿ ವಕೀಲರು. ಪ್ರಧಾನ ಕಾರ್ಯದರ್ಶಿಗಳು ಕೊಪ್ಪಳ ಜಿಲ್ಲಾ ವಕೀಲರ ಸಂಘ.ಕುಮಾರಿ ಪರಿಮಳ  ವಿಜ್ಞಾನ ವಿಭಾಗದಲ್ಲಿ  91% ನೀಟ್ 411. ರಾಂಕ್ಶ್ರೀ.. ಪ್ರಕಾಶ್ ಕಂದಕೂರ
ಅಂತರಾಷ್ಟ್ರೀಯ ಛಾಯಾಗ್ರಹ ಪ್ರಶಸ್ತಿ  ಪುರಸ್ಕೃತರು ಕೊಪ್ಪಳ. ಮುಂತಾದ ಸಾಧಕರಿಗೆ ಸನ್ಮಾನವನ್ನು ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಾಗಿ  ಡಾ. ಕೆ ಜಿ ಕುಲಕರ್ಣಿ ಅವರು ಮಾತನಾಡಿ ಸ್ವತಂತ್ರ ಹೋರಾಟಕ್ಕೆ ಹೋರಾಡಿದ ವೀರ ಯೋಧರನ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಸಾಧಕರ ಪರವಾಗಿ ಮಾತನಾಡಿದ ಶ್ರೀ ಪ್ರಭಾಕರ್  ಅವರು 78ನೇ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನ ಸುತ್ತಿರುವುದು. ಕೆ ಎಸ್ ಆಸ್ಪತ್ರೆ ಎಲ್ಲಾ ಸಿಬ್ಬಂದಿಗಳಿಗೆ ಮತ್ತು  ಮುಖ್ಯಸ್ಥರಿಗೆ ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ ಎಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಬಸವರಾಜ್ ಎಸ್ ಕ್ಯಾವಟರ ಅವರು  78ನೇ ಸ್ವತಂತ್ರ ದಿನಾಚರಣೆಯಲ್ಲಿ ನಾವೆಲ್ಲ  ಇಂದು  ಸಂಪೂರ್ಣ ಸ್ವಾತಂತ್ರವನ್ನು ಪಡೆದಿದ್ದರೆ ಅದಕ್ಕೆ ಸಾವಿರಾರು ವ್ಯಕ್ತಿಗಳ ತ್ಯಾಗ ಬಲಿದಾನ ಮತ್ತು ಪ್ರಾಣಾರ್ಪಣೆಯ ಕಾರಣದಿಂದ ಸಾಧ್ಯವಾಗಿದೆ ಎಂಬುದನ್ನ ಎಂದಿಗೂ ಮರೆಯಬಾರದು. ಅವರ ಸ್ಮರಣೆಯಲ್ಲಿ ನಾವೆಲ್ಲ ಬದುಕುವಂತಾಗಬೇಕು ಎಂದು ತಿಳಿಸಿದರು.

 ಕಾರ್ಯಕ್ರಮದ ನಿರೂಪಣೆಯನ್ನು  ಉಪನ್ಯಾಸಕರಾದ ಶಿವನಗೌಡ ಪೊಲೀಸ್ ಪಾಟೀಲ್  ನವಲಹಳ್ಳಿ ಮಾಡಿದರು. ಸ್ವಾಗತವನ್ನು  ಸಂಪತ್ ಕುಮಾರ್ ಅವರು ನಿರ್ವಹಿಸಿದರು.  ಕಾರ್ಯಕ್ರಮದಲ್ಲಿ   ಆಸ್ಪತ್ರೆಯ ಸಿಬ್ಬಂದಿಗಳಾದ ವಿಶ್ವನಾಥ್  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೂರ್ಣಿಮಾ  ಸಹಾಯಕ ವ್ಯವಸ್ಥಾಪಕ ಅಧಿಕಾರಿಗಳು, ಕೆಎಸ್  ಕಾಲೇಜಿನ ಪ್ರಾಚಾರ್ಯರಾದ  ಲಕ್ಷ್ಮೀನಾರಾಯಣ ಅಯ್ಯರ, ಗಿರೀಶ್ ಪಾಟೀಲ್, ಡಾ. ರೇಖಾ ವಿ ಎಸ್ ಡಾ. ಸುಮಾ ವಿ ಹಳ್ಳಿಗುಡಿ  ಡಾ. ರವಿಕುಮಾರ್ ಎಂ  ಡಾ. ಕೃಷ್ಣಮೂರ್ತಿ ಡಾ.ನಾಹಿಲ್, ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು, ಕೆ ಎಸ್ ಸ್ಕೂಲ್  ಮತ್ತು    ಕಾಲೇಜ್ ಆಫ್ ನರ್ಸಿಂಗ್, ಪ್ಯಾರಾ ಮೆಡಿಕಲ್ ಸೈನ್ಸ್, ಫಿಜಿಯೋಥೆರಪಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಸಿಬ್ಬಂದಿಗಳು ಹಾಗೂ  ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!