ಶರಣರ ಜೀವನ ಮಾದರಿಗಳು ನಮಗೆ ಆದರ್ಶ- ಸಾವಿತ್ರಿ ಮುಜುಮದಾರ

Get real time updates directly on you device, subscribe now.

ಶರಣ ಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರಿಗೆ ಆಪ್ತರಾಗಿ ಶರಣ  ಸಿದ್ದಾಂತಗಳಿಗೆ ಬದ್ದರಾಗಿ ಕೊನೆಯವರೆಗೂ ಶರಣ ಚಳುವಳಿಯ ಹರಿಕಾರರಾಗಿ ಬಾಳಿದವರು ನಿಜಸುಖಿ ಶರಣ ಹಡಪದ ಅಪ್ಪಣ್ಣನವರು.ವಚನ ಸಂಗ್ರಹಕ್ಕೆ ತಮ್ಮನ್ನು ಮುಡಿಪಾಗಿಟ್ಟುಕೊಂಡು,ಬದುಕಿನ ಕಷ್ಟ ಕೋಟಲೇಯಲ್ಲಿಯೂ ವಚನ  ಚಳುವಳಿಯನ್ನು ಸಮರ್ಥವಾಗಿ ಸಮಗ್ರವಾಗಿ ಸಾಗಿಸಿ ವಚನಪಿತಾಮಹರಾದವರು ಡಾ.ಫ.ಗು.ಹಳಕಟ್ಟಿಯವರು.ಈ ಇಬ್ಬರು ಶರಣರ ಜೀವನ ಮಾದರಿಗಳು ನಮಗೆ ಆದರ್ಶ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕ ದ ಅಧ್ಯಕ್ಷರಾದ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆ ಸಹಯೋಗದಲ್ಲಿ ಸಾವಿತ್ರಿ ಮುಜುಮದಾರ ಅವರ ಮನೆಯಲ್ಲಿ
ಹಮ್ಮಿಕೊಂಡ ಶರಣ ಹಡಪದ ಅಪ್ಪಣ್ಣ ಮತ್ತು ಡಾ.ಫ.ಗು.ಹಳಕಟ್ಟಿ  ಯವರ ಜಯಂತೋತ್ಸವ ದ ಸಂದರ್ಭದಲ್ಲಿ ಸಾವಿತ್ರಿ ಮುಜುಮದಾರ ಉಪನ್ಯಾಸ ನೀಡಿದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಜಿ.ಎಸ್.ಗೋನಾಳ ಅವರು ವಹಿಸಿದ್ಧರು.ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ವಕೀಲರಾದ ವ್ಹಿ.ಎಂ.ಭೂಸನೂರಮಠ ಮಾಡಿದರು.ಮುಖ್ಯ ಅತಿಥಿಗಳಾಗಿ ಹಡಪದ ಸಮಾಜ ದ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಹಂದ್ರಾಳ, ಬಸವರಾಜ ಹಲಗೇರಿ, ಮುಖಂಡರು ಆಗಮಿಸಿದ್ದರು. ಕದಳಿ ವೇದಿಕೆ ಯ ಜಿಲ್ಲಾ ಅಧ್ಯಕ್ಷರಾದ ನಿರ್ಮಲಾ ಬಳ್ಳೊಳ್ಳಿ, ತಾಲೂಕು ಅಧ್ಯಕ್ಷೆ ಅರುಣಾ ನರೇಂದ್ರ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಡಪದ ಸಮಾಜದ ಸಾಧಕರಾದ ,ವಕೀಲರೂ ಆದ ಬಾಳಪ್ಪ ವೀರಾಪುರ, ಬಸವರಾಜ ಓಮ್ಮಿನಾಳ ಹಾಗೂ ಗಾಯಕಿ ಅನ್ನಪೂರ್ಣ ಮನ್ನಾಪುರ ಅವರನ್ನು ಸನ್ಮಾನಿಸಲಾಯಿತು. ತಾಲೂಕಾ ಗೌರವ ಅಧ್ಯಕ್ಷರಾದ ಶಶಿಕಾಂತ ನಿಂಗೋಜಿ,ವಕೀಲರಾದ ವಿಠಲ,ವಿಜಯಾ ಬಳ್ಳೊಳ್ಳಿ,ಗಿರಿಜಾ ಕಾಟರಳ್ಳಿ,ಶಾರದಾ ರಜಪೂತ,ನಿಂಗಮ್ಮ ಪಟ್ಟಣಶೆಟ್ಟಿ,ಮಮತಾ ಕುದರಿಮೋತಿ, ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅನ್ನಪೂರ್ಣ ಮನ್ನಾಪುರ,ಶಿಲ್ಪಾ ಸಸಿಮಠ, ಮಂಜುನಾಥ ಚಿತ್ರಗಾರ, ಶಾಂತಪ್ಪ ಬೆಲ್ಲದ….ವಚನ ಗಾಯನ ನಡೆಸಿಕೊಟ್ಟರು.ಚಿನ್ನಪ್ಪ ತಳವಾರ ಸ್ವಾಗತಿಸಿದರು, ಉಮೇಶ ಸುರ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು, ನಾಗರಾಜ ಡೊಳ್ಳಿನ ನಿರೂಪಿಸಿದರು,ಸುಮಂಗಲಾ ಹಂಚಿನಾಳ ವಂದಿಸಿದರು.ಸೋಮನಗೌಡ ವಗರನಾಳ,ರೇಖಾ ಮೆಳ್ಳಿಕೇರಿ, ಹಾಗೂ ಶರಣ ಬಂಧುಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: