ಭಾರತೀಯ ಗುಣಮಟ್ಟ: ಸಂವೇದನಾಶೀಲ ತರಬೇತಿ ಕಾರ್ಯಕ್ರಮ
ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಭಾರತೀಯ ಮಾನಕ ಬ್ಯೂರೋ(ಬಿಐಎಸ್) ಅವರಿಂದ ಭಾರತೀಯ ಗುಣಮಟ್ಟದ ಕುರಿತು ಅರಿವು ಮೂಡಿಸುವ ಸಂವೇದನಾಶೀಲ ತರಬೇತಿ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 07ರಂದು ನಡೆಯಿತು.
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ತರಬೇತಿಯಲ್ಲಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಗುಣಮಟ್ಟ, ಭಾರತೀಯ ಮಾನದಂಡಗಳಂತೆ ಗುಣಮಟ್ಟದ ಸರ್ಕಾರದ ಯೋಜನೆಗಳು, ಸರ್ಕಾರದ ಕಾಮಗಾರಿಗಳು, ಗ್ರಾಹಕ ವಸ್ತುಗಳ ಗುಣಮಟ್ಟ, ಆರೋಗ್ಯ ಸೇವೆಯ ಗ್ರಾಹಕ ವಸ್ತುಗಳು, ಉತ್ಪನ್ನಗಳು, ಸುರಕ್ಷತಾ ವಸ್ತುಗಳ ಗುಣಮಟ್ಟ, ಉಪಕರಣಗಳ ಪ್ರಮಾಣಿತ ಗುಣಮಟ್ಟ, ಸುಧಾರಣೆ ಹಾಗೂ ವಿವಿಧ ಸಂಬAಧಪಟ್ಟ ವಿಷಯಗಳ ಕುರಿತು ಬಿಐಎಸ್‌ನ ಅಧಿಕಾರಿಗಳು ಐ.ಎಸ್.ಐ, ಹಾಲ್ ಮಾರ್ಕ್, ಎಫ್.ಎಸ್.ಎಸ್.ಐ ಹಾಗೂ ವಿವಿಧ ದಿನನಿತ್ಯ ಬಳಕೆಯ ವಸ್ತುಗಳಾದ ಗ್ಯಾಸ್ ಸಿಲಿಂಡರ ಮತ್ತು ಅದರ ಬಿಡಿ ಭಾಗಗಳು, ಮೊಬೈಲ್ ಮತ್ತು ಎಲೆಕ್ಟಾçನಿಕ್ ವಸ್ತುಗಳ ಹಾಗೂ ಚಿನ್ನ ಇವುಗಳನ್ನು ಖರೀದಿಸುವಾಗ ಉತ್ಪನ್ನಗಳ ಮೇಲಿನ ಈ ಎಲ್ಲಾ ಐ.ಎಸ್.ಐ, ಹಾಲ್ ಮಾರ್ಕ್, ಎಫ್.ಎಸ್.ಎಸ್.ಐ ಖಾತರಿ ಪಡಿಸಿಕೊಂಡು ವಸ್ತುಗಳನ್ನು ಖರೀದಿಸುವುದು ಬಹುಮುಖ್ಯವಾಗಿದೆ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅರಿವು ಮೂಡಿಸಿ ಮತ್ತು ಮಾರ್ಗದರ್ಶನ ನೀಡಿದರು.
ಭಾರತೀಯ ಮಾನಕ ಬ್ಯೂರೋ(ಬಿಐಎಸ್) ಅವರಿಂದ ಭಾರತೀಯ ಉತ್ಪನ್ನಗಳ ಗುಣಮಟ್ಟವನ್ನು ತಿಳಿಯಲು ಮತ್ತು ದೂರುಗಳನ್ನು ನೀಡಲು ಬಿಐಎಸ್ ಕೇರ (BIS CARE) ಆ್ಯಪ್ ನ್ನು ಪ್ಲೇ ಸ್ಟೋರ್ ನ ಮೂಲಕ ಪಡೆದುಕೊಂಡು ಅದರಲ್ಲಿ ಉತ್ಪನ್ನಗಳ ಕುರಿತು ಸಂಪೂರ್ಣ ಮಾಹಿತಿ ಮತ್ತು ಉತ್ಪನ್ನಗಳ ಉತ್ಪಾದಕರ ವಿಳಾಸ ಹಾಗೂ ಉತ್ಪನ್ನಗಳ ವಿವರ ಹಾಗೂ ದೂರುಗಳನ್ನು ನೀಡಲು ಬಿಐಎಸ್ ಕೇರ ಆ್ಯಪ್ ವು ತುಂಬಾ ಉಪಯುಕ್ತವಾಗಿದೆ. ಎಲ್ಲರೂ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಈ ತರಬೇತಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತ್‌ನ ಉಪಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ತೊದಲಬಾಗಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಚಿದಾನಂದ, ಭಾರತೀಯ ಮಾನಕ ಬ್ಯೂರೋ(ಬಿಐಎಸ್)ನ ಮರ್ಸಿರಾಣಿ, ಮಹ್ಮದ್ ಅಹ್ಮದ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಮತ್ತಿತರು ಉಪಸ್ಥಿತರಿದ್ದರು.

Comments are closed.