ಅನೈತಿಕ ಸಂಬಂಧ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ
ಕುಷ್ಟಗಿ 31; ಅನೈತಿಕ ಸಂಬಂಧ ಹೊಂದಿದ ಜೋಡಿಗಳು ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತಡರಾತ್ರಿ ತಾಲೂಕಿನ ಮಾಲಗತ್ತಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಮಾಲಗತ್ತಿ ಗ್ರಾಮದ ಚಾಲಕ ಪೀರಸಾಬ (35) ಹಾಗೂ ಅದೇ ಗ್ರಾಮದ ಶಾರವ್ವ ಗಂಡ ಶರಣಪ್ಪ ಉಪ್ಪಾರ (30) ಎಂದು ಗುರುತಿಸಲಾಗಿದೆ.
ಘಟನೆ ವಿವರ; ಪೀರಸಾಬ ಹಾಗೂ ಶಾರವ್ವ ಇವರ ನಡುವೆ ಹಲವು ದಿನಗಳಿಂದ ಅನೈತಿಕ ಸಂಬಂಧ ಇದ್ದು, ಈ ವಿಷಯ ಪೀರಸಾಬನ ಹೆಂಡತಿಗೆ ಗೊತ್ತಾಗಿ, ಪೀರಸಾಬನ ಹೆಂಡತಿ ಶಾರವ್ವನ ಜೊತೆ ಜಗಳ ನಡೆದಿದೆ, ನಿನ್ನೆ ಮಂಗಳವಾರ ಗ್ರಾಮದ ಹಿರಿಯ ಮುಖಂಡರು ಇಬ್ಬರಿಗೂ ಬುದ್ಧಿವಾದ ಹೇಳಿ ಜಗಳವನ್ನು ಬಿಡಿಸಿದ್ದಾರೆ.
ಇದರಿಂದ ಪೀರಸಾಬ ಹಾಗೂ ಶಾರವ್ವ ಇಬ್ಬರು ಮನನೊಂದು ತಡರಾತ್ರಿ ಮಾಲಗತ್ತಿ ಸೀಮಾದ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ.
ಈ ಘಟನೆ ಕುರಿತು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮುಂದಿನ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಪಿಎಸ್ಐ ತಿಳಿಸಿದ್ದಾರೆ.
Comments are closed.