ಕುತಂತ್ರ ಹೊಟ್ಟೆಕಿಚ್ಚಿನ ಬಿಜೆಪಿ -ಜೆಡಿಎಸ್ ಸುಳ್ಳು ಆರೋಪದ ಪಾದಯಾತ್ರೆ – ಹನುಮಂತಪ್ಪ ಕೌದಿ
ಕೊಪ್ಪಳ ಅಗಸ್ಟ್ 04 : ಪ್ರಜಾಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ಕರ್ನಾಟಕದ ಮತ ಪ್ರಭುಗಳು 136 ಸೀಟುಗಳನ್ನು ಗೆಲ್ಲಿಸಿ ಸರ್ವ ಜನಾಂಗದ ಹಿಂದುಳಿದ ವರ್ಗದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದರಿಂದ ಕುತಂತ್ರ ಹೊಟ್ಟೆಕಿಚ್ಚಿನಿಂದ ಕೂಡಿದ ಬಿಜೆಪಿ -ಜೆಡಿಎಸ್ ಸುಳ್ಳು ಆರೋಪದ ಪಾದಯಾತ್ರೆ ಮಾಡುತ್ತಿದೆ ಎಂದು ಕೊಪ್ಪಳ ನಗರದಲ್ಲಿ ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಯವರು ಹೇಳಿದರು.
ಅಖಂಡ ಕರ್ನಾಟಕದ ದೀನ ದಲಿತ ಬಡವರಿಗೆ ಅನೇಕ ಗ್ಯಾರಂಟಿ ಭಾಗ್ಯಗಳನ್ನು ಕೊಟ್ಟು ದೇಶದಲ್ಲಿಯೇ ನಂಬರ್ ಒನ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ, ವರ್ಚಸ್ಸನ್ನು ಸಹಿಸಿಕೊಳ್ಳದ ವಿರೋಧ ಪಕ್ಷದವರ ಆರೋಪ ಯಾವುದೇ ಕಾರಣವಿಲ್ಲದ ಮೂಡ ಪ್ರಕರಣ ಎಂಬ ಸಂಬಂಧವಿರದ ಸುಳ್ಳು ಆರೋಪವನ್ನು ಮಾಡುತ್ತಿರುವುದನ್ನು ನಾವು ಸಹಿಸಿಕೊಳ್ಳುವುದಿಲ್ಲ . ಸಂವಿಧಾನಿಕ ಹುದ್ದೆಯಾದ ರಾಜ್ಯಪಾಲರನ್ನು ಬಳಸಿಕೊಂಡು ಕೇಂದ್ರ ಸರ್ಕಾರದ ಒತ್ತಡದಿಂದ ರಾಜ್ಯಪಾಲರು ಒಬ್ಬ ಖಾಸಗಿ ವ್ಯಕ್ತಿಯ ಆರೋಪದನ್ವಯ ಯಾವುದೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಥವಾ ತನಿಖಾ ಸಂಸ್ಥೆಯ ವರದಿಯನ್ನು ತೆಗೆದುಕೊಳ್ಳದೆ, ಓದದೆ ತರಾತುರಿ ಸೋಕಾಸ್ ನೋಟಿಸ್ ನೀಡಿರುವುದು ರಾಜ್ಯಪಾಲ ಸ್ಥಾನಕ್ಕೆ ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ . ವಿರೋಧ ಪಕ್ಷದವರಿಗೆ ಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡುವುದಕ್ಕೆ ಯಾವುದೇ ವಿಷಯವಿಲ್ಲ ಹಾಗಾಗಿ ಮೂಡ ಪ್ರಕರಣಕ್ಕೂ ಸಿದ್ದರಾಮಯ್ಯಗೂ ಯಾವುದಕ್ಕೂ ಸಂಬಂಧವೇ ಇಲ್ಲ .ವಿರೋಧ ಪಕ್ಷದವರು ಮಾಡುತ್ತಿರುವ ಆರೋಪ- ಪಾದಯಾತ್ರೆಯು ಹೊಟ್ಟೆ ಕಿಚ್ಚು,ಕುತಂತ್ರ ಅಸಂವಿಧಾನಿಕ ಮತ್ತು ಅಜ್ಞಾನದಿಂದ ಕೂಡಿದೆ. .ಮುಂದುವರೆದು ಕೆಣಕಿದರೆ ದುರುದ್ದೇಶದ ನಡುವಳಿಕೆಗಳು ಸಿದ್ದರಾಮಯ್ಯನವರ ಮೇಲೆ ನಡೆದರೆ ಸುಮ್ಮನಿರಲ್ಲ ಇಡೀ ರಾಜ್ಯವೇ ಬೆಂಕಿ ಜ್ವಾಲೆಯಾಗಿ ಉರಿಯುತ್ತದೆ, ಇಡೀ ರಾಜ್ಯದ ಜನತೆಯೇ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
Comments are closed.