ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನ
ಕೊಪ್ಪಳದ ವಿಠಲ ಮಾದರಿ ನಗರದ ಬಾಲಕಿಯರ ವಸತಿನಿಲಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ಪಂದನ ಸಂಸ್ಥೆ ಬೆಳಗಾವಿ ಇವರ ಸಹಯೋಗದೊಂದಿಗೆ ” ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನು ಹಮ್ಮಿಕೊಳ್ಳಲಾಗಿತ್ತು
ಈ ಒಂದು ಕಾರ್ಯಕ್ರಮದ ಉದ್ಘಾಟನೆಯನ್ನು ಯುನಿಸೆಫ್ ನ ಸಂಯೋಜಕರಾದ ಹರೀಶ್ ಜೋಗಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕವನ್ನು ಸ್ಪಂದನ ಸಂಸ್ಥೆಯ ಸಂಯೋಜಕರಾದ ಶಂಕರ್ ಸುರಳ್ ಇವರು ಮಾತನಾಡುತ್ತಾ ಸ್ಪಂದನ ಸಂಸ್ಥೆಯು ಸುಮಾರು 25 ವರ್ಷದಿಂದ ಮಹಿಳೆಯರು ಮಕ್ಕಳು ದಲಿತರು ದಮನಿತರು ಶೊಷಣೆಗೆ ಒಳಗಾದವರ ಕುರಿತು ಸಾಮಾಜಿಕವಾಗಿ ತಳ್ಳಲ್ಪಟ್ಟ ,ಅಧಿಕಾರ ಹಿನರ ಮತ್ತು ಸಮಸ್ಯಯನ್ನು ,ಎದುರಿಸುತ್ತಿರುವವರ ಕುರಿತು ಕೆಲಸ ಮಾಡುತ್ತಾ ಬಂದಿದೆ ಮುಖ್ಯವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಸರಕಾರದ ಜೊತೆಗೆ ಮತ್ತು ಸ್ಥಳಿಯ ಸಮಿತಿಗಳ ಮತ್ತು ಪಾಲುದಾರರ ಜೊತೆಗೆ ಸಂಘಟನೆ ಮಾಡಿ ಅಲ್ಲದೆ ಅವರ ಹಕ್ಕುಗಳನ್ನು ಸಮುದಾಯದವರೆ ಪಡೆಯುವಂತೆ ಜಾಗೃತಿಯನ್ನು ಮಾಡುತ್ತಾ ಬಂದಿದೆ ಈಗ ಕೊಪ್ಪಳ ದಲ್ಲಿ ಮಕ್ಕಳ ಬಾಲ್ಯ ವಿವಾಹ ಮಕ್ಕಳ ಸಾಗಾಣಿಕೆ ಮತ್ತು ಬಾಲಕಾರ್ಮಿಕರ ಕುರಿತು ಕೆಲಸ ಮಾಡಲು ಇಲಾಖೆಯ ಜೊತೆ ಜೊತೆಗೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಮುಂದಿನ ದಿನಗಳಲ್ಲಿ ಇಲಾಖೆಯ ಸಹಕಾರ ಕೂಡ ಬೇಕಿದೆ ಎಂದು ತಿಳಿಸಿದರು.ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಯಾದ ಮಾಂತಯ್ಯ ಸ್ವಾಮಿ ಪೂಜಾರ ಇವರು ಮಕ್ಕಳ ಸಾಗಾಣಿಕೆ ಕುರಿತು ಇಲಾಖೆ ಹೇಗೆ ಕೆಲಸ ಮಾಡುತ್ತಿದೆ ಯಾಕೆ ಮಾಡುತ್ತಿದೆ ಎಂಬುದರ ಕುರಿತು ಮಾತನಾಡಿದರು.ನಂತರ ಯುನಿಸೆಫ್ ನ ಸಂಯೋಜಕರಾದ ಹರೀಶ್ ಜೋಗಿ ಅವರು ಮಕ್ಕಳ ಕಳ್ಳ ಸಾಗಾಣಿಕೆಯ ಜಾಲದ ಕುರಿತು ಮತ್ತು ಹಿಂದೆ ಆದ ಕೆಲವು ಉದಾಹರಣೆ ಕೋಡುತ್ತಾ ಹೆಣ್ಣುಮಕ್ಕಳನ್ನು ಮಾರಾಟವಾಗಿ ಹೇಗೆ ಬಳಸಿಕೊಳ್ಳುತ್ತಾರೆ ಮತ್ತು ಸಾಗಾಣಿಕೆಯ ಸ್ವರೂಪ ಹೆಗಿರುತ್ತದೆ ಯಾವ ಯಾವ ರೀತಿ ಕಳ್ಳಸಾಗಾಣಿಕೆ ನಡೆಯುತ್ತದೆ ಎಂಬುದರ ಕುರಿತು ಮಾತನಾಡಿದರು.ಮಕ್ಕಳಿಗೆ ಸಾಮಾಜಿಕ ಜಾಲತಾಣ ಹೇಗೆ ಮಕ್ಕಳಿಗೆ ಪರಿಣಾಮ ಬೀರಿದೆ ಇಂತಹ ಒಂದು ಚಟುವಟಿಕೆಗಳನ್ನು ನಡೆಸಲು ಹೇಗೆ ಇದು ಅನ್ವಯವಾಗುತ್ತದೆ ಅದಕ್ಕಾಗಿ ಮಕ್ಕಳು ಹೇಗೆ ತಾವು ಮುಂಜಾಗೃತವಾಗಿ ತಮ್ಮನ್ನ ತಾವು ರಕ್ಷಣೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳ ರಕ್ಷಣಾ ಘಟಕದ ಪರೀವಿಕ್ಷಣಾಧಿಕಾರಿಯಾದ ಶ್ರೀ ಮತಿ ಶಿವಲೀಲಾ ವನ್ನೂರು ಅವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕುರಿತು ಮಕ್ಕಳಿಗೆ ಇರುವ ಕಾಯ್ದೆಯ ಕುರಿತು ತಿಳಿಸಿದರು ನಂತರ ಮಕ್ಕಳ ಸಹಾಯವಾಣಿಯ ಸಂಯೋಜಕರಾದ ಶರಣಪ್ಪ ಸಿಂಗನಾಳ ಇವರು ಮಾತನಾಡಿ ಮಕ್ಕಳ ಸಾಗಾಣಿಕೆ ತಡೆಗಟ್ಟುವಲ್ಲಿ .ಮಕ್ಕಳ ಸಹಾಯವಾಣಿ ಹೇಗೆ ಕೆಲಸ ಮಾಡುತ್ತದೆ.ಮತ್ತು ಈಗ ಸದ್ಯ ಇರುವ ಸಹಾಯವಾಣಿಯ 1098 ಮತ್ತು112 ಕುರಿತು ಹೇಳುತ್ತಾ ಮಕ್ಕಳು ಈ ಸಹಾಯವಾಣಿಗೆ ಕರೆಮಾಡಿ ತಿಳಿಸಿ ಜೊತೆಗೆ ಮಕ್ಕಳಿಗೆ ಸಮಸ್ಯಯಾದಾಗ 24 ಗಂಟೆಗಳ ಕಾಲ ಮಕ್ಕಳ ಸಹಾಯವಾಣಿ ನಿರಂತರವಾಗಿ ಬೆಂಬಲವಾಗಿ ರಕ್ಷಿಸಲು ತುರ್ತು ಸಂದರ್ಭದಲ್ಲಿ ದಾವಿಸಿ ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ವ್ಯವಸ್ಥೆ ನಿರ್ವಹಿಸಲಾಗುತ್ತದೆ ಎಂದು ಹೇಳಿದರು. ಈ ಒಂದು ಎಲ್ಲಾ ಚೆರ್ಚೆಯ ಸಂದರ್ಭದಲ್ಲಿ ಮಕ್ಕಳಿಗೆ ಪ್ರತಿಕ್ರಿಯೆ ಮೂಲಕ ಅವರ ಮಾತನ್ನು ಗಣನೆಗೆ ತೆಗೆದುಕೊಂಡು ಮನ ಮುಟ್ಟುವಂತೆ ಪ್ರತಿಯೊಬ್ಬರು ಮಕ್ಕಳ ಸಾಗಾಣಿಕೆ ಮತ್ತು ಮಕ್ಕಳ ರಕ್ಷಣೆ ಮಾಡುವ ಒಂದು ವ್ಯವಸ್ಥೆಯ ವಿಷಯವನ್ನು ಮಂಡಿಸಿದ್ದು ಚೆನಾಗಿತ್ತು ಮಕ್ಕಳಿಗೆ ಕಾರ್ಯಕ್ರಮ ಹೊಸತಾದ ವಿಷಯ ಇತ್ತು ಎಂದು ಹಂಚಿಕೊಂಡರು.
ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ನಂತರ ವಸತಿ ನಿಲಯದ ಮೇಲ್ವಿಚಾರಕರಾದ ಗೀತಾ ಸಂಗಟಿಯವರು ಕಾರ್ಯಕ್ರಮದ ಕುರಿತು ಅಭಿಪ್ರಾಯ ವ್ಯಕ್ತ ಪಡಿಸುತ್ತಾ ವಚನವನ್ನು ಹೇಳುವುದರ ಮೂಲಕ ಕಾರ್ಯಕ್ರಮದ ಅಭಿಪ್ರಾಯ ಹೇಳುತ್ತಾ ನಮ್ಮ ಮಕ್ಕಳಿಗೆ ನಮ್ಮ ಹುಡುಗಿಯರಿಗೆ ಅದ್ಬುತವಾದಂತಹ ಮಾಹಿತಿ ನೀಡಲಾಯಿತು ಎಂದು ಧನ್ಯವಾದ ಹೇಳಿದರು.ನಂತರ ಕಾರ್ಯಕ್ರಮ ಸಂಜೆ 7:30ಗಂಟೆಗೆ ಮುಕ್ತಾಯವಾಯಿತು
Comments are closed.