ಶ್ರೀಮತಿ ಶಿವಮ್ಮ ಮುದ್ದಣ್ಣ ರಿಗೆ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕಾರ
ಗಂಗಾವತಿ: ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಕೇಂದ್ರ ಸಂಘ (ರಿ) ಬೆಂಗಳೂರು ಇವರು ನೀಡಲ್ಪಡುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಶಿವಮ್ಮ ಗಂ. ಮುದ್ದಣ್ಣ ಇವರಿಗೆ ನೀಡಲಾಗಿದೆ.
ಬೆಂಗಳೂರಿನ ಅರಮನೆಯ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಭವನದಲ್ಲಿ ಜುಲೈ-೨೩ ರಂದು ನೀಡಲಾಗಿದೆ. ಈ ಪ್ರಶಸ್ತಿಗೆ ಸದರಿಯವರನ್ನು ಆಯ್ಕೆ ಮಾಡಲು ಗಂಗಾವತಿಯ ರಾಷ್ಟ್ರಪ್ರಶಸ್ತಿ ಪುರಸ್ಕೃತರು ಹಾಗೂ ಸಂಘದ ಗುಲ್ಬರ್ಗಾ ವಿಭಾಗದ ಉಪಾಧ್ಯಕ್ಷರಾದ ಖಾದರಸಾಬ್ ಹುಲ್ಲೂರುರವರು ಶಿಫಾರಸ್ಸು ಮಾಡಿದ್ದರು.
ಈ ಪ್ರಶಸ್ತಿ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವರು, ರಾಜ್ಯದ ಸ್ಕೌಟ್ ಮತ್ತು ಗೈಡ್ಸ್ ಪ್ರಧಾನ ಅಯುಕ್ತರಾದ ಪಿ.ಜಿ.ಆರ್. ಸಿಂಧ್ಯಾರವರು ವಹಿಸಿದ್ದರು, ಮಾಜಿ ಸಚಿವರು ಹಾಗೂ ರಾಜ್ಯದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಎಚ್.ಎಂ. ರೇವಣ್ಣರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್ ?ಡಕ್ಷರಿ ಮತ್ತು ಕೇಂದ್ರ ಸಂಘದ ಅಧ್ಯಕ್ಷರಾದ ಕೆ. ಕೃ?ಪ್ಪ, ಕಾರ್ಯದರ್ಶಿಗಳಾದ ವಿ.ಪಿ ಕುಮಾರ್ ಸ್ವಾಮಿ ಇವರ ಸಮ್ಮುಖದಲ್ಲಿ ಕೊಪ್ಪಳ ಜಿಲ್ಲೆಯಿಂದ ಶಿವಮ್ಮ ಗಂಡ ಮುದ್ದಣ್ಣ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಪಡೆದ ಶಿವಮ್ಮರವರಿಗೆ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಎಸ್. ಬಿರಾದಾರ್, ಡಯಟ್ ಮುನಿರಾಬಾದಿನ ಉಪನಿರ್ದೇಶಕರಾದ ದೊಡ್ಡಬಸಪ್ಪ ನೀರಲಕೇರಿ, ತಾಲೂಕು ಶಿಕ್ಷಣ ಅಧಿಕಾರಿಗಳಾದ ವೆಂಕಟೇಶ ರಾಮಚಂದ್ರಪ್ಪನವರು, ಬಿ.ಆರ್.ಸಿ ಅಧಿಕಾರಿಗಳಾದ ಮಂಜುನಾಥರವರು, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ತಿನ ಜಿಲ್ಲಾಧ್ಯಕ್ಷ ಶರಣೇಗೌಡರ ಪೊಲೀಸ್ ಪಾಟೀಲ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪರವರು, ಸಂಘದ ಮಾಜಿ ಅಧ್ಯಕ್ಷರಾದ ಚಾಂದಪಾ?ರವರು, ಎಲ್ಲಾ ಶಿಕ್ಷಣ ಸಂಯೋಜಕರು, ಎಲ್ಲಾ ಬಿ.ಆರ್.ಪಿ ಗಳು, ಚಿಕ್ಕಜಂತಕಲ್ ಕ್ಲಸ್ಟರ್‌ನ ಅಧಿಕಾರಿಗಳಾದ ಸಿ.ಆರ್.ಪಿ ಸಚ್ಚಿದಾನಂದ, ಗ್ರಾಮ ಪಂಚಾಯಿತಿ ಮಾಜಿ (ಢಣಾಪುರ) ಅಧ್ಯಕ್ಷರಾದ ಶಫೀ ಹಾಗೂ ಸದಸ್ಯರು ಹೆಬ್ಬಾಳ ಸ.ಹಿ.ಪ್ರಾ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವೀರಪ್ಪ ಬಡಿಗೇರ್ ಹಾಗೂ ಸರ್ವ ಸದಸ್ಯರು, ಶಿಕ್ಷಣ ಪ್ರೇಮಿ ಶಾಂತಕುಮಾರ್ ಹಿರೇಮಠ, ಶಾಲೆಯ ಎಲ್ಲಾ ಶಿಕ್ಷಕ ವೃಂದದವರು, ಮುದ್ದು ಮಕ್ಕಳು, ಊರಿನ ಹಿರಿಯರು, ಹಳೆಯ ವಿದ್ಯಾರ್ಥಿಗಳು, ಅಭಿನಂದನೆಗಳು ಸಲ್ಲಿಸಿರುತ್ತಾರೆ.
Comments are closed.