ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ

Get real time updates directly on you device, subscribe now.

ಕೊಪ್ಪಳ:  ಮಾನವನು ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಯಥೇಚ್ಛವಾಗಿ ನಾಶ ಪಡಿಸುತ್ತಾ ತನ್ನ ಅವನತಿಯನ್ನು ತಾನೇ ಆಹ್ವಾನಿಸಿಕೊಳ್ಳುತ್ತಿದ್ದಾನೆ. ಪ್ರಕೃತಿಯ ಕೊಡುಗೆಯನ್ನು ಉಳಿಸುವ ಕಡೆಗೆ ಗಮನ ಕೊಡದೆ ಕೇವಲ ತನ್ನ ಸ್ವಾರ್ಥ ಸಾಧನೆಗೆ ಪ್ರಕೃತಿಯ ವಿನಾಶವನ್ನು ಮಾಡಲು ಮುಖ್ಯ ಕಾರಣೀಕರ್ತನಾಗುತ್ತಿದ್ದಾನೆ ಈ ನಿಟ್ಟಿನಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆಯ ಕಾರ್ಯಕ್ರಮವು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಲು ಒಂದು ಪ್ರಾರಂಬಿಕ ಹೆಜ್ಜೆ ಎಂದು ಉಪನ್ಯಾಸಕ ಮಂಜುನಾಥ ಪೂಜಾರ ಹೇಳಿದರು.

ನಾಲೆಡ್ಜ್ ಪ್ಲಾಂಟ್ ಅಕಾಡೆಮಿ ಹಾಗೂ ಶ್ರೀಮತಿ ಬಸಮ್ಮ ಕಾತರಕಿ ಪದವಿ ಪೂರ್ವ ಕಾಲೇಜು ಕೊಪ್ಪಳ ಇವರ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆಯನ್ನ ಬುಧವಾರದಂದು ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು ಪ್ರತಿ ವರ್ಷ ಜುಲೈ ೨೮ ನ್ನು ವಿಶ್ವ ಪರಿಸರ ಸಂರಕ್ಷಣಾ ದಿನ ಎಂದು ಆಚರಿಸಲಾಗುತ್ತದೆ. ಈ ದಿನಾಚರಣೆಯ ಮೂಲ ಉದ್ದೇಶ ಮನುಷ್ಯ ಪರಿಸರವನ್ನು ಯವ ರೀತಿ ಬಳಸಿಕೊಳ್ಳುತ್ತಿದ್ದಾನೆ ಎನ್ನುವ ಆತ್ಮಾವಲೋಕನ ಮಾಡುವುದು ಮತ್ತು ಅದನ್ನು ಸಂರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವುದರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ ಎಂದು ಉಪನ್ಯಾಸಕ ಮಂಜುನಾಥ ಹೇಳಿದರು. ಈ ವರ್ಷ ಜನರು ಮತ್ತು ಸಸ್ಯಗಳನ್ನು ಸಂಪರ್ಕಿಸುವುದು ಹಾಗೂ ವನ್ಯಜೀವಿ ಸಂರಕಣೆಯಲ್ಲಿ ಡಿಜಿಟಲ್ ಆವಿಷ್ಕಾರ ಅನ್ವೇಷಣೆ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಬಸವರಜ ಹಿರೇಮನಿಯವರು ಮನೆಯಂಗಳದಲ್ಲೆ ಬೆಳೆಯಬಹುದಾದ ಗಿಡಮೂಲಿಕೆ ಸಸ್ಯಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು ಹಾಗೂ ಅವುಗಳ ರಕಣೆ ನಮ್ಮೆಲ್ಲರ ಜವಾಬ್ದಾರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಜೀಶಾಸ್ತ್ರ ಉಪನ್ಯಾಸಕಿ ಸ್ವಾತಿ ಅವರು ವಿದ್ಯಾರ್ಥಿಗಳಿಗೆ ಕೆಲವು ಅತ್ಯುಪಯುಕ್ತ ಸಸಿಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ವಿದ್ಯಾರ್ಥಿಗಳಾದ ಸೃಷ್ಟಿ ,ರಂಜಿನಿ, ಸಾಯಿ ವೆನೆಲ್ಲಾ ಪ್ರತಿಕ್ಷಾ ರೌನಕ್ ರೋಷನ್ ಹಾಗೂ ಇನ್ನಿತರರು ಕೆಲವು ಅತ್ಯಪಯುಕ್ತ ಗಿಡಗಳ ಬಗ್ಗೆ ಮಾಹಿತಿ ನೀಡಿದರು. ಮತ್ತು ವಿವಿಧ ಔಷದಿಯುಕ್ತ ಸಸಿಗಳನ್ನು ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ನೆಡೆಸಲಾಯಿತು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕೃಷ್ಣ ಪ್ರಸಾದ್, ಕೊಟ್ರೇಶ ಸಾಲೀಮಠ.ಉಚ್ಚೀರಪ್ಪ, ಸಂಧ್ಯಾ, ಉಮಾದೇವಿ, ಗೀತಾವೈದ್ಯ ತರನ್ನುಮ್ ಹಾಗೂ ಶಾಹೀನ್ ಅವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!