ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಕೆ.ಪಿ.ಎಂ.ಇ ನೋಂದಣಿ ವಿವರ ಪ್ರದರ್ಶನ ಕಡ್ಡಾಯ

Get real time updates directly on you device, subscribe now.

ಖಾಸಗಿ ಆರೋಗ್ಯ ಸಂಸ್ಥೆಯವರು ಕೆ.ಪಿ.ಎಂ.ಇ ನೋಂದಣಿ ಸಂಖ್ಯೆ, ಕ್ಲಿನಿಕ್ ಹೆಸರು, ಮಾಲೀಕರ ಹೆಸರು ಮತ್ತು ವೈದ್ಯಕೀಯ ಪದ್ಧತಿಯನ್ನು ಒಳಗೊಂಡ ಬಣ್ಣದ ಫಲಕವನ್ನು ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು ಅವರು ತಿಳಿಸಿದ್ದಾರೆ.
ಕರ್ನಾಟಕ ಖಾಸಗಿ ಆರೋಗ್ಯ ಸಂಸ್ಥೆಗಳ ಕಾಯ್ದೆಯಡಿ (ಕೆ.ಪಿ.ಎಂ.ಇ.ಎ) ಸೂಚಿಸಿರುವಂತೆ, ಕೊಪ್ಪಳ ಜಿಲ್ಲೆಯಲ್ಲಿನ ಕೆ.ಪಿ.ಎಂ.ಇ.ಎ ಅಡಿ ನೋಂದಾಯಿತ ಖಾಸಗಿ ಆರೋಗ್ಯ ಸಂಸ್ಥೆಯವರು, ಖಾಸಗಿ ಆರೋಗ್ಯ ಸಂಸ್ಥೆಯ ಮುಖ್ಯ ದ್ವಾರದಲ್ಲಿ ನಿಗದಿತ ನಮೂನೆಯಲ್ಲಿ ಫಲಕವನ್ನು ಅಳವಡಿಸಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಇಲಾಖೆಯ ಆಯುಕ್ತರು ಸೂಚಿಸಿರುತ್ತಾರೆ.
ಅದರಂತೆ ಅಲೋಪತಿ ಆರೋಗ್ಯ ಸಂಸ್ಥೆಯಾದಲ್ಲಿ ಆಕಾಶ ನೀಲಿ ಬಣ್ಣ ಹಾಗೂ ಆಯುರ್ವೇದ ಸಂಸ್ಥೆಯಾದಲ್ಲಿ ತಿಳಿ ಹಸಿರು ಬಣ್ಣದ ಫಲಕದಲ್ಲಿ ಕೆ.ಪಿ.ಎಂ.ಇ ನೋಂದಣಿ ಸಂಖ್ಯೆ, ಕ್ಲಿನಿಕ್ ಹೆಸರು, ವೈದ್ಯರ ಹೆಸರನ್ನು ಬರೆದು ಆರೋಗ್ಯ ಸಂಸ್ಥೆಯ ಮುಖ್ಯ ದ್ವಾರದಲ್ಲಿ ದಿನಾಂಕ: 06-06-2024 ರಿಂದ ಅನ್ವಯವಾಗುವಂತೆ ಪ್ರದರ್ಶಿಸಬೇಕು.
ಖಾಸಗಿ ಆರೋಗ್ಯ ಸಂಸ್ಥೆಯ ಮುಖ್ಯ ದ್ವಾರದ ಫಲಕದಲ್ಲಿ ಪ್ರದರ್ಶಿಸಬೇಕಾದ ಬೋರ್ಡ್ನ ಒಟ್ಟಾರೆ ಕನಿಷ್ಠ ಅಳತೆಯು 7 ಅಡಿ ಅಗಲ ಹಾಗೂ 3 ಅಡಿ ಎತ್ತರ ಹೊಂದಿರಬೇಕು. ಕೆ.ಪಿ.ಎಂ.ಇ ನೋಂದಣಿ ಸಂಖ್ಯೆ (ಕೆ.ಪಿ.ಎಂ.ಇ.ಎ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದಂತೆ) 120 ಸೆ.ಮೀ ಅಗಲ * 20 ಸೆ.ಮೀ ಎತ್ತರ ಇರಬೇಕು. ಸಂಸ್ಥೆಯ ಹೆಸರು (ಕೆ.ಪಿ.ಎಂ.ಇ.ಎ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದಂತೆ) ಕನಿಷ್ಠ 180 ಸೆ.ಮೀ ಅಗಲ * 20 ಸೆ.ಮೀ ಎತ್ತರ ಆಗಿರಬೇಕು. ಮಾಲೀಕರ ಹೆಸರು (ಕೆ.ಪಿ.ಎಂ.ಇ.ಎ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದಂತೆ) 120 ಸೆ.ಮೀ ಅಗಲ * 15 ಸೆ.ಮೀ ಎತ್ತರವಿರಬೇಕು. ಎಲ್ಲಾ ಅಕ್ಷರಗಳು ಕಪ್ಪು ಬಣ್ಣದಲ್ಲಿರಬೇಕು. ಬೋರ್ಡ್ ಸ್ಥಿರವಾಗಿರಬೇಕು ಮತ್ತು ಸ್ಥಳಾಂತರಿಸುವAತಿಲ್ಲ. ಈ ನಿರ್ದಿಷ್ಟ ನಿಯಮಗಳನ್ವಯ ಫಲಕಗಳನ್ನು ಕಡ್ಡಾಯವಾಗಿ ಜಿಲ್ಲೆಯ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಯವರು ಪ್ರದರ್ಶಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!