ಕುಟುಂಬ ಸಮೇತ ನೋಡುವ ಮನ ಮಿಡಿಯುವ ಚಿತ್ರ ಕುಗುಸಾ: ಗುಂಡಿ ರಮೇಶ್
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಇತರರು ನಟಿಸಿರುವ ಚಿತ್ರ
ಗಂಗಾವತಿ: ಖ್ಯಾತ ಕಾದಂಬರಿಕಾರರಲ್ಲಿ ಒಬ್ಬರಾದ ಕುಂ. ವೀರಭದ್ರಪ್ಪ ಅವರ ಕೃತಿಯಿಂದ ಆಯ್ಕೆ ಮಾಡಿಕೊಂಡಿರುವ ಕುಗುಸಾ ಚಲನಚಿತ್ರ ಗಂಗಾವತಿ ಅಮರ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಕುಟುಂಬ ಸಮೇತ ನೋಡುವ ಮನ ಮಿಡಿಯುವ ಅತ್ಯಂತ ಅರ್ಥಗರ್ಭಿತ ಕಥಾವಸ್ತುವುಳ್ಳ ಚಿತ್ರ ಇದಾಗಿದ್ದು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಿ ಕನ್ನಡ ಚಿತ್ರ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ವಿಜಯನಗರ ಜಿಲ್ಲಾ ಕಲಾವಿದರ ಒಕ್ಕೂಟದ ಅಧ್ಯಕ್ಷ ಹಾಗು ಚಲನಚಿತ್ರ ನಟ ಗುಂಡಿ ರಮೇಶ್ ಮನವಿ ಮಾಡಿದರು.
ಅವರು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಂಗಳವಾರ ಮಾತನಾಡಿದರು, ಉತ್ತರ ಕರ್ನಾಟಕದ ಕಲಾವಿದರು, ತಂತ್ರಜ್ಞರು, ಕೆಲಸ ಮಾಡಿದ್ದು, ಹೊಸಪೇಟೆ ಭಾಗದ ಹೆಚ್ಚಿನ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಬಳ್ಳಾರಿಯ ಲಕ್ಷ್ಮೀಕಾಂತ ರೆಡ್ಡಿಯವರು ಹಲವು ಚಿತ್ರಮಂದಿರಗಳನ್ನು ಉಚಿತ ನೀಡಿದ್ದು, ನಿರ್ಮಾಪಕರು ಒಂದುವರೆ ಕೋಟಿ ರು ವೆಚ್ಚಮಾಡಿದ್ದು ಹಾಕಿದ ಬಂಡವಾಳ ಹಿಂತಿರುಗುವುದು ಕಷ್ಟವಾಗಿದೆ ಹೀಗಾಗಿ ಉತ್ತರ ಕರ್ನಾಟಕದ ಮಹಿಳೆಯ ದಿಟ್ಟತನಕ್ಕೆ ತಮ್ಮ ಬೆಂಬಲ ನೀಡಬೇಕೆಂದು ಅವರು ಕೋರಿದರು.
ವಿ.ಶೋಭಾ ಆದಿ ನಾಯರಾಯಣ ಹೊಸಪೇಟೆ, ಮಹಿಳಾ ನಿರ್ಮಾಪಕಿಯಾಗಿದ್ದು, ಗುಂಡಿ ಭಾರತಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ, ರಘು ರಾಮ್‌ಚರಣ್ ಹೂವಿನಹಡಗಲಿ, ಚಿತ್ರವನ್ನು ನಿರ್ದೇಶಿಸಿದ್ದಾರೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ, ಮರಿಯಮ್ಮನಹಳ್ಳಿ ಹನುಮಕ್ಕನವರು, ನಾಯಕ ನಟರಾಗಿ ನಟರಾಜ್ ಭಟ, ಮಹಾಲಕ್ಷ್ಮಿ ನಾಯಕಿಯಾಗಿದ್ದಾರೆ, ಮಂಜುನಾಥ್ ಗೌಡ, ಅನೀತಾ ರಮ್ಯಾ ಗುಂಡಿ ಭಾರತಿ, ಗುಂಡಿ ರಮೇಶ್ ಪಾತ್ರವರ್ಗದಲ್ಲಿದ್ದು, ಸಂಗೀತ ಹಾಗು ಸಾಹಿತ್ಯ ಪ್ರದೀಪ್ ಚಂದ್ರ ಆಗಿದ್ದು, ವಾಸಕಿ ವೈಭವ್, ಶಿಲ್ಪಾ ಮೂಡಬೀ, ಪ್ರದೀಪ್ ಚಂದ್ರ ಹಾಡು ಹಾಡಿದ್ದು, ನಾಲ್ಕು ಹಾಡುಗಳು ಮನ ಮುಟ್ಟುವಂತಿವೆ ಎಂದರು.
ನಿರ್ಮಾಪಕಿ ವಿ.ಶೋಭಾ ಆದಿ ನಾರಾಯಣ ಮಾತನಾಡಿ, ಟಿಬಿ ಡ್ಯಾಂ ಕನ್ನಡ ಕಲಾ ಸಂಘದ ಕಲಾವಿದರು ಅಭಿನಯಿಸಿದ್ದು, ಹೊಸಪೇಟೆ ೮೨ ಢಣಾಪುರ, ಕಮಲಾಪುರ, ಹೊಸಪೇಟೆ ಸುತ್ತಮುತ್ತ ಚಿತ್ರೀಕರಣ, ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಬ್ಬಿಂಗ್ ಎಡಿಟಿಂಗ್ ನಡೆದಿದ್ದು, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮುಂಬಾಯಿ ಸ್ಟುಡಿಯೋದಲ್ಲಿ ಮಾಡಲಾಗಿದ್ದು, ಒಟ್ಟು ೨೧ ಚಿತ್ರಮಂದಿರಗಳಲ್ಲಿ ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಹೊಸಪೇಟೆ, ಬಳ್ಳಾರಿ, ಗಂಗಾವತಿ, ಹಗರಿಬೊಮ್ಮನಳ್ಳಿ, ಹೂವಿನ ಹಡಗಲಿ, ರೋಣಾ, ತಾಳಿಕೋಟೆ, ತಾಳಿಕೋಟೆ, ರಾಣಿಬೆನ್ನೂರು, ಅಥಣಿ, ಗೋಕಾಕು ಹಾಗು ಹುಬ್ಬಳ್ಳಿಯ ಮಹಾಲುಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕಾರಿ ನಿರ್ಮಾಪಕರಾದ ಭಾರತೀ ಗುಂಡಿ ರಮೇಶ್, ಸವಿತಾ ಸಂಚೀನ, ಸಹ ನಿರ್ದೇಶಕ ಶಿವುಮೂರ್ತಿ, ಚಲನಚಿತ್ರ ನಟ ವಿಷ್ಟುತೀರ್ಥ ಜೋಷಿ, ಗಂಗಾವತಿ ತಾಲೂಕು ಅಧ್ಯಕ್ಷ ಗಾಳೆಪ್ಪ ಬೋವಿ, ಮುಖಂಡರಾದ ಗುನ್ನಾಳ್ ತಿಮ್ಮಣ್ಣ, ಹಳ್ಳಪ್ಪ ಬೋವಿ ಹಾಗು ಪರಶುರಾಮ್ ಬೋವಿ ಇತರರಿದ್ದರು.
Comments are closed.