ಕುರುಬರ ಸಮಾಜದವರು ಎಲ್ಲಾ ಹಿಂದುಳಿದ ಸಮುದಾಯಗಳನ್ನು ಜೊತೆಗೆ ಕೊಂಡೊಯ್ಯಬೇಕು – ಡಾ. ಬಿ.ಕೆ.ರವಿ
ಕೊಪ್ಪಳ : ಶೋಷಿತ ಹಾಗೂ ಅವಕಾಶ ವಂಚಿತ ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಸಂಘಟಿತರಾಗಬೇಕು. ಶೋಷಿತ ಹಾಗೂ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವ ಸಮಾಜದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಮಾಹಿತಿ ಹಾಗೂ ಮಾರ್ಗದರ್ಶನದ ಕೊರತೆ ಇದೆ. ಇದನ್ನು ಸರಿದೂಗಿಸಲು ಹಾಲುಮತ ಮಹಾಸಭಾದವರು ಕಾರ್ಯಪ್ರವೃತ್ತರಾಗಬೇಕು. ಹಿಂದುಳಿದ ವರ್ಗಗಳಲ್ಲಿ ಹಿರಿಯಣ್ಣನ ಸ್ಥಾನದಲ್ಲಿರುವ ಕುರುಬ ಸಮಾಜವು ಎಲ್ಲಾ ಅತಿ ಹಿಂದುಳಿದ ಸಮುದಾಯಗಳನ್ನು ಜೊತೆಗೆ ಕೊಂಡೊಯ್ದು ಅವುಗಳನ್ನು ಸಬಲೀಕರಣದತ್ತ ಕರೆದೊಯ್ಯುವ ಅವಶ್ಯಕತೆ ಇದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಕೆ.ರವಿ ಹೇಳಿದರು.
ಅವರು ರವಿವಾರ ಕೊಪ್ಪಳದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಹಾಲುಮತ ಮಹಾಸಭಾ, ಜಿಲ್ಲಾ ಕನಕ ನೌಕರರ ಸಂಘದ ಸಹಕಾರದಲ್ಲಿ ಕೊಪ್ಪಳ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊಪ್ಪಳದ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಕುರುಬ ಸಮಾಜದ ಬಹುದಿನದ ಬೇಡಿಕೆಯಾದ ಕನಕ ಭವನವನ್ನು ಆದಷ್ಟು ಬೇಗನೆ ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಈಗಾಗಲೇ ಎಲ್ಲಾ ಸಮಾಜದ ಹಿತರಕ್ಷಣೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಮುಂದೆಯೂ ಸಹ ಕೂಡ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಹಾಯ ಸಹಕಾರವನ್ನು ನೀಡಲು ಸಿದ್ದನಿದ್ದೇನೆ. ಎಂದರು.
ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡುತ್ತಾ, ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ಸಲುವಾಗಿ ಹೋರಾಟ ಮಾಡಿ ಈಗಾಗಲೆ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡಿದ್ದು, ಅದನ್ನು ರಾಜ್ಯ ಸರಕಾರದವರು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕೆಂದು ಒತ್ತಾಯಿಸಿದರು. ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಮಾತನಾಡುತ್ತಾ, ಎಲ್ಲಾ ಸಮುದಾಯದವರಿಗೆ ನಿಗಮಗಳು ಇವೆ. ಆದರೆ ಕುರುಬ ಸಮುದಾಯಕ್ಕೂ ಕೂಡ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸದಿದ್ದರೆ ಹಾಲುಮತ ಮಹಾಸಭಾದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಮಾಜಿ ಶಾಸಕರಾದ ಕೆ .ಬಸವರಾಜ ಹಿಟ್ನಾಳ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ.ರಾಜಶೇಖರ ಹಿಟ್ನಾಳ, ಕುರುಬರ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಸಿದ್ದಪ್ಪ ನೀರಲೂಟಿ, ಯಲಬುರ್ಗಾ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಳಕಪ್ಪ ಕಂಬಳಿ, ಕಾಗಿನೆಲೆ ಕನಕ ಗುರುಪೀಠದ ಹಾಲವರ್ತಿ ಶಾಖಾಮಠದ ಶಿವಸಿದ್ದೇಶ್ವರ ಮಹಾಸ್ವಾಮಿಗಳು, ಕೊಪ್ಪಳ ಕೆಂಡದಮಠದ ಉದಯಕುಮಾರ, ಯಲಬುರ್ಗಾ ತಹಶೀಲ್ದಾರರಾದ ವಿಠ್ಠಲ ಚೌಗಲೆ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ, ಕೊಪ್ಪಳ ತಾಲೂಕ ಕುರುಬರ ಸಂಘದ ಅಧ್ಯಕ್ಷರಾದ ಜಡಿಯಪ್ಪ ಬಂಗಾಳಿ, ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶೇಖರ ಹೊರಪೇಟಿ, ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಎಸ್ .ಬಿ. ಕುರಿ, ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಜಂಬಣ್ಣ ನಂದ್ಯಾಪೂರ, ವಿಕಲಚೇತನ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ, ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯಾದ ದುಂಡಪ್ಪ ತುರಾಯಿ, ತಾಲೂಕ ಪಂಚಾಯತ ಮಾಜಿ ಸದಸ್ಯರಾದ ಹನುಮಂತಪ್ಪ ಅರಸನಕೇರಿ, ಸಾಹಿತಿಗಳಾದ ಅರುಣ ನರೇಂದ್ರ, ಪತ್ರಕರ್ತರಾದ ಕುಬೇರಪ್ಪ ಮಜ್ಜಿಗಿ, ಹನುಮಂತಪ್ಪ ಹಳ್ಳಿಕೇರಿ, ಹಾಲುಮತ ಮಹಾಸಭಾ ದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ದ್ಯಾಮಣ್ಣ ಕರಿಗಾರ, ಹಾಲುಮತ ಮಹಾಸಭಾದ ಪದಾಧಿಕಾರಿಗಳಾದ ನಿಂಗಜ್ಜ ವಾಲಿಕಾರ, ಪರಶುರಾಮ ಅಣ್ಣಿಗೇರಿ, ಬಸವರಾಜ ಗುರಿಕಾರ, ಹನುಮಂತಪ್ಪ ಹನುಮಾಪುರ, ಮಲ್ಲೇಶ ಹದ್ದಿನ, ಅಂದಾನಸ್ವಾಮಿ ಭೂತಣ್ಣವರ, ದ್ಯಾಮನಗೌಡ್ರು ಭೀಮನೂರು, ಗವಿಸಿದ್ದಪ್ಪ ಗೊರವರ ಶಿವನಗೌಡ್ರ ಬೂದಗುಂಪಾ, ಮಂಜುನಾಥ ಬಂಗಾಳಿ, ಅಣ್ಣಪ್ಪ ಪೂಜಾರ, ಗವಿಸಿದ್ದಪ್ಪ ಪೂಜಾರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾಳಿದಾಸ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ನಾಗನಗೌಡ ಗೌಡ್ರು ನಿರೂಪಿಸಿದರು. ಹಾಲುಮತ ಮಹಾಸಭಾದ ತಾಲೂಕ ಅಧ್ಯಕ್ಷರಾದ ಮುದ್ದಪ್ಪ ಗೊಂದಿಹೊಸಳ್ಳಿ ಸ್ವಾಗತಿಸಿದರು. ಪ್ರಕಾಶ ಕಿನ್ನಾಳ ವಂದಿಸಿದರು.
Comments are closed.