ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕಾರ್ಯಾಗಾರ ಮರ್ಮ ಸಾಧನ ಉದ್ಘಾಟನೆ

Get real time updates directly on you device, subscribe now.

Koppal :   ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳದ ಶಲ್ಯ ತಂತ್ರ ಸ್ನಾತಕೋತ್ತರ ವಿಭಾಗದಿಂದ ಮರ್ಮ ಸಾಧನ – ೨೦೨೩ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಜುಲೈ ೦೭ ರಂದು ಡಾ. ಆನಂದ ಕಿರಿಶ್ಯಾಳ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರು, ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು, ಉದ್ಘಾಟಿಸಿ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಇಂತಹ ಕಾರ್ಯಾಗಾರಗಳ ಆಯೋಜನೆಯಿಂದ ವೈದ್ಯ ವಿದ್ಯಾರ್ಥಿಗಳಿಗೆ ವಿಶೇಷ ಚಿಕಿತ್ಸಾ ವಿಧಾನಗಳ ಪ್ರಾತ್ಯಕ್ಷಿಕ ಜ್ಞಾನ ದೊರೆತು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವುದು. ಕೇಂದ್ರ ಸರಕಾರ ಇಂತಹ ಕಾರ್ಯಕ್ರಮಗಳಿಗೆ ಅನೇಕ ಸೌಲಭ್ಯಗಳನ್ನು ಮಾಡಿಕೊಟ್ಟಿದ್ದು ಆಯುರ್ವೇದ ಮಹಾವಿದ್ಯಾಲಯಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಗದುಗಿನ ಡಿ.ಜಿ.ಎಂ ಆಯುರ್ವೇದ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಸಂತೋಷ ಬೆಳವಡಿ ಮಾತನಾಡಿ ಮರ್ಮ ಚಿಕಿತ್ಸೆಯು ಔಷಧರಹಿತ ವಿಶೇಷ ಚಿಕಿತ್ಸೆಯಾಗಿದ್ದು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ವೈದ್ಯರು ತಮ್ಮ ಹೊರರೋಗಿ ವಿಭಾಗದಲ್ಲಿಯೂ ರೋಗಿಗಳಿಗೆ ಸುಲಭವಾಗಿ ನೀಡಬಹುದಾಗಿಯೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಿ.ಎಸ್.ಸವಡಿ ಮಾತನಾಡಿ ಮರ್ಮ ಚಿಕಿತ್ಸೆಯು ಇಂದಿನ ದಿನಮಾನದಲ್ಲಿ ಅತ್ಯವಶ್ಯಕವಾಗಿದ್ದು ತಾವು ಈ ಶಿಬಿರದ ಉದ್ದೇಶವನ್ನು ಸದುಪಯೋಗ ಪಡಿಸಿಕೊಳ್ಳಲು ಕರೆನೀಡಿದರು.
ಈ ಕಾರ್ಯಾಗಾರದಲ್ಲಿ ಹೆಸರಾಂತ ಆಯುರ್ವೇದ ಚಿಕಿತ್ಸಕರಾದ ಡಾ.ಕೆ.ಟಿ.ವಿನೋದ ಕೃಷ್ಣನ್, ಕೇರಳ, ಡಾ. ಎಚ್. ಅನುಸುಯಾ ಚೈತನ್ಯ ಮುಖ್ಯ ಚಿಕಿತ್ಸಕರು, ಸೌಖ್ಯ ಚಿಕಿತ್ಸಾಲಯ ಗುಡಲೂರ ತಮಿಳನಾಡು ಇವರುಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡ ಪ್ರತಿನಿಧಿಗಳಿಗೆ ಮರ್ಮ ಚಿಕಿತ್ಸಾ ವಿಧಾನಗಳನ್ನು ರೋಗಿಗಳಿಗೆ ನೀಡಿ ಅದರ ಪರಿಣಾಮ ಮತ್ತು ಲಾಭಗಳನ್ನು ಪ್ರಾತ್ಯಕ್ಷಿಕವಾಗಿ ಪ್ರದರ್ಶನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಡಾ. ಸುರೇಶ ಹಕ್ಕಂಡಿ, ಡಾ. ಪ್ರವೀಣಕುಮಾರ, ಶಲ್ಯತಂತ್ರ ವಿಭಾಗದ ಉಪನ್ಯಾಸಕರಾದ ಡಾ. ಗೀತಾಂಜಲಿ ಉಪಸ್ಥಿತರಿದ್ದರು. ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮರ್ಮ ಚಿಕಿತ್ಸೆ ಕುರಿತು ಚಿತ್ರಪಟ ಪ್ರದರ್ಶನ ಹಾಗೂ ಪ್ರಬಂಧ ಮಂಡಿಸಿದರು. ಕಾರ್ಯಾಗಾರದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿ ಸುಮಾರು ೪೦೦ ಜನ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: