ಸಹಕಾರ ಸಂಘಗಳು ನೌಕರರ ಜೀವಾಳ- ಎ.ಆರ್.ಶಿವಾನಂದ

Get real time updates directly on you device, subscribe now.


ಕೊಪ್ಪಳ,ಜು-೨೯;- ಸಹಕಾರಿ ಸಂಘಗಳು ನೌಕರರ ಜೀವಾಳಗಳಿದ್ದಂತೆ, ಸರಳ ಸಾಲ ಸೌಲಭ್ಯ, ಕಡಿಮೆ ಬಡ್ಡಿ ದರದಲ್ಲಿ ಒದಗಿಸುತ್ತವೆ ಎಂದು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎ.ಆರ್.ಶಿವಾನಂದ ನುಡಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರ ಸಂಘದ ೧೪ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಸಂಘಗಳಲ್ಲಿ ಸಾಲಕ್ಕೆ ಎಷ್ಟು ಮಹತ್ವವಿದೆಯೋ, ಅದನ್ನು ಸರಿಯಾದ ರೀತಿಯಲ್ಲಿ ಪಾವತಿಸುವುದು ಸಹ ಅಷ್ಟೇ ಮಹತ್ವವಿರುತ್ತದೆ. ಇದರಿಂದ ಇತರ ಸದಸ್ಯರಿಗೂ ಸಾಲದ ಅನುಕೂಲವಾಗುವುದರ ಜೊತೆಗೆ ಸಂಘ ಉಳಿಯುತ್ತದೆ ಮತ್ತು ಬೆಳೆಯುತ್ತೆದೆ ಎಂದರು.

ಪ್ರಾಚಾರ್ಯರಾದ ರಾಜಶೇಖರ ಪಾಟೀಲ ಮಾತನಾಡಿ ಸಹಕಾರಿ ಸಂಘಗಳು ಹುಟ್ಟಿದ್ದೇ ಮಧ್ಯಮ ವರ್ಗದವರಿಗೆ ಅನುಕೂಲಕ್ಕಾಗಿ. ಇದರ ಸದುಪಯೋಗ ಪಡೆದುಕೊಂಡು ಸಕಾಲದಲ್ಲಿ ಸಾಲ ಪಡೆದು ತೀರಿಸಿ ಎಂದರು. ಪ್ರಾಚಾರ್ಯರಾದ ಎಚ್.ಎಸ್.ದೇವರಮನಿ, ವಾಸುದೇವ ಅಡವಿಬಾವಿ, ನಿವೃತ್ತ ಉಪನ್ಯಾಸಕರಾದ ಎ.ವಿ.ಉಪದ್ಯಾಯ, ಉಪನ್ಯಾಸಕರಾದ ಪತ್ರೆಪ್ಪ ಛತ್ತರಕಿ ಮಾತನಾಡಿದರು. ಉಪನ್ಯಾಸಕರಾದ ಎಸ್.ವ್ಹಿ.ಮೇಳಿಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ವಿದ್ಯಾಧರ ಮೇಘರಾಜರವರು ವಾರ್ಷಿಕ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ೨೦೨೩-೨೪ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಾದ ಕು||ಮೇಘನಾ ಕೊಟ್ನೆಕಲ್, ಕು||ತೇಜಶ್ವಿನಿ ವ್ಹಿ. ಪತ್ತಾರರವರನ್ನು ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು.

 

Get real time updates directly on you device, subscribe now.

Comments are closed.

error: Content is protected !!