ಪತ್ರಕರ್ತ ದಿ.ಶರಣಪ್ಪ ಕುಂಬಾರ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸಿ.ಎಂ ಗೆ ಮನವಿ
ಕುಷ್ಟಗಿ.ಜು.8; ತಾಲೂಕು ಪತ್ರಕರ್ತ ಕುಂಬಾರ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಕುಷ್ಟಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಅವರಿಗೆ ಸಲ್ಲಿಸಿದರು.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಶರಣಪ್ಪ ಕುಂಬಾರ ಅವರು ಅನಾರೋಗ್ಯದಿಂದ ಜು.7 ಬುಧವಾರ ರಾತ್ರಿ 10 ಗಂಟೆಗೆ ಸಾವನ್ನಪ್ಪಿದರೆ. ಮೃತರು ಜಿಲ್ಲಾ ಮತ್ತು ರಾಜ್ಯ ಮಟ್ಟದ
ಪತ್ರಿಕೆಗಳು ಹಾಗೂ ನ್ಯೂಸ್ ವಾಹಿನಿಗಳಲ್ಲಿ ವರದಿಗಾರರಾಗಿ ಸುಮಾರು 20ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.
ದಿವಂಗತ ಶರಣಪ್ಪ ಕುಂಬಾರ ಅವರ ಕುಟುಂಬ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದು, ಕುಟುಂಬದ ನೆರವಿಗೆ ರಾಜ್ಯ ಸರಕಾರ ತುರ್ತಾಗಿ ಶರಣಪ್ಪ ಕುಂಬಾರ ಅವರ ಕುಟುಂಬಕ್ಕೆ 5 ಲಕ್ಷ ರೂ.ಗಳ ನೆರವು ನೀಡಬೇಕು. ಅದೇ ರೀತಿ ಕುಟುಂಬದ ಮುಖ್ಯಸ್ಥರಾಗಿದ್ದ ಶರಣಪ್ಪ ಕುಂಬಾರ ಕುಟುಂಬದ ಭದ್ರತೆಗೋಸ್ಕರ ಅವರ ಧರ್ಮಪತ್ನಿಗೆ ಸರಕಾರಿ ಉದ್ಯೋಗ ಕೊಡಬೇಕು. ಅವರ ಏಕೈಕ ಪುತ್ರನ ಭವಿಷ್ಯದ ವಿದ್ಯಾಭ್ಯಾಸದ ಖರ್ಚು ಅನ್ನು ಸರಕಾರವೇ ಭರಿಸಬೇಕು. ಒಟ್ಟಾರೆ, ದಿವಂಗತ ಪತ್ರಕರ್ತ ಶರಣಪ್ಪ ಕುಂಬಾರ ಅವರ ಕುಟುಂಬದ ಸುಭದ್ರ ಭವಿಷ್ಯದ ಹಿನ್ನೆಲೆ ಮನವಿಯಲ್ಲಿ ತಿಳಿಸಿರುವ ಬೇಡಿಕೆಗಳನ್ನು ರಾಜ್ಯ ಸರಕಾರ ಕೂಡಲೇ ಸ್ಪಂದಿಸಿ ಈಡೇರಿಸಲು ತಾವು ಕ್ರಮಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅನೀಲಕುಮಾರ ಅಲಮೇಲ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಂಗಮೇಶ ಸಿಂಗಾಡಿ, ಗೌರವಾಧ್ಯಕ್ಷ ಮುಖೇಶ ನಿಲೋಗಲ್, ಪವಾಡೆಪ್ಪ ಚೌಡ್ಕಿ, ಶರಣಪ್ಪ ಲೈನದ್, ಸಂಗಮೇಶ ಮುಶಿಗೇರಿ, ದೇವರಾಜ ಮ್ಯಾದನೇರಿ, ಸಂಗಮೇಶ ಲೂತಿಮಠ ಉಪಸ್ಥಿತರಿದ್ದರು.
Comments are closed.