ರಾಜ್ಯದ ಜನತೆಯ ಮೂಗಿಗೆ ತುಪ್ಪ ಹಚ್ಚುವ ಬಜೆಟ್ ಇದಾಗಿದೆ – ಸಿ.ವಿ ಚಂದ್ರಶೇಖರ

Get real time updates directly on you device, subscribe now.

Koppal :

2023-24ನೇ ಸಾಲಿನ ರಾಜ್ಯ ಬಜೆಟ್ ನ್ನು 14ನೇ ಬಾರಿಗೆ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ “ರಾಜ್ಯದ ಜನತೆಯ ಮೂಗಿಗೆ ತುಪ್ಪ ಹಚ್ಚುವ ಬಜೆಟ್” ಇದಾಗಿದೆ    ಎಂದು ಜೆಡಿಎಸ್ ಮುಖಂಡರಾದ ಸಿ.ವಿ ಚಂದ್ರಶೇಖರ  ಹೇಳಿದ್ದಾರೆ.

ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸುತ್ತ ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾಮಾಜಿಕ ಸೇವೆ, ಮೂಲಸೌಕರ್ಯ ಒದಗಿಸುವುದು, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ, ರೈತರ ಏಳಿಗೆ, ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ ಮತ್ತು ಸಮಾನ ಅವಕಾಶಗಳ ಸೃಜನೆ ಮಾಡುವುದು ನಮ್ಮ ಆದ್ಯತೆಯಾಗಿರುತ್ತದೆ ಎಂದು ಹೇಳಿದರು. ಈ ಹಿಂದೆ ಸದನದಲ್ಲಿ ತಮ್ಮ ಕಿವಿಯ ಮೇಲೆ ಹೂ ಇಟ್ಟುಕೊಂಡು ಬಂದವರು ಇಂದು ಸಾರಸಗಟಾಗಿ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದ್ದಾರೆ.
ಚುನಾವಣೆಗೂ ಮುನ್ನ ಜನತೆಗೆ ನೀಡಿದ ಗ್ಯಾರಂಟಿಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ಅನುದಾನ ಮೀಸಲಿಡಲಿ ಮತ್ತು ಸಮರ್ಪಕ ಜಾರಿ ಮಾಡಲಿ ಅದನ್ನು ಬಿಟ್ಟು ಬಜೆಟ್ ಉದ್ದಕ್ಕೂ ಹಿಂದಿನ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುತ್ತಾ ರಾಜ್ಯದ ಜನರ ಮೂಗಿಗೆ ತುಪ್ಪ ಹಚ್ಚುವ ಬಜೆಟ್ ಅನ್ನು ಮಂಡಿಸಿದ್ದಾರೆ ಎಂದು ಜೆಡಿಎಸ್ ಮುಖಂಡರಾದ ಸಿ.ವಿ ಚಂದ್ರಶೇಖರ ಎಂದು ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!