೩೭೧(ಜೆ) ಸಮರ್ಪಕ ಅನುಷ್ಠಾನಕ್ಕಾಗಿ ಪ್ರತಿಭಟನೆ

Get real time updates directly on you device, subscribe now.


ಕೊಪ್ಪಳ, 21- ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371 ಜೆ ನೀಡಿ ೧೦ ವರ್ಷವಾದರೂ ೩೭೧(ಜೆ) ಕಾಯ್ದೆಯ ಉದ್ದೇಶವು ಸಮರ್ಪಕವಾಗಿ ಈಡೇರಿಲ್ಲ. ಶಿಕ್ಷಣ, ಉದ್ಯೋಗ, ಮೀಸಲಾತಿಗೆ ಸಂಬಂಧಿಸಿದಂತೆ ಸಮರ್ಪಕ ಅನುಷ್ಠಾನ ಮಾಡಬೇಕು ಆಗ್ರಹಿಸಿ ಇಂದು ದಿ,22 ರಂದು ಸೋಮವಾರ ಕಲ್ಯಾಣ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಯುವ ಘಟಕದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಬೆಳಿಗ್ಗೆ 10:30ಕ್ಕೆ ಕೊಪ್ಪಳದ ತಾಲೂಕ ಕ್ರೀಡಾಂಗಣದಿಂದ ಪ್ರಾರಂಭಗೊಡು ಅಶೋಕ ವೃತ್ತದ ಮೂಲಕ , ಬಸವೇಶ್ವರ ವೃತ್ತದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.
ಪ್ರತಿಭಟನೆಯಲ್ಲಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಮತ್ತು ಜನಪರ ಸಂಘ ಸಂಸ್ಥೆಯ ಮುಖಂಡರು , ಹೋರಾಟಗಾರರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಹೋರಾಟ ಜಿಲ್ಲಾದ್ಯಕ್ಷ ರಮೇಶ ತುಪ್ಪದ, ತಾಲೂಕ ಅದ್ಯಕ್ಷ ಹುಲಗಪ್ಪ ಕಟ್ಟಿಮನಿ, ನಗರಾಧ್ಯಕ್ಷ ಹಬೀಬ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!