ವಿದ್ಯಾರ್ಥಿಗಳು ತಮ್ಮ ಜ್ಞಾನ ಅಭ್ಯುದಯಕ್ಕೆ ಇಂದು ಆಫ್ ಲೈನ್ ಜೊತೆ ಆನ್ ಲೈನ್ ತಂತ್ರಜ್ಞಾನ ಬಳಸಿಕೊಳ್ಳಬೇಕು-ಡಾ.ಜಾಜಿ ದೇವೇಂದ್ರಪ್ಪ
ಕೊಪ್ಪಳ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಗಂಗಾವತಿ ಇ ಎಂಕಾಂ ವಿಭಾಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಸಂಯೋಜಿತ ಮತ್ತು ಆನ್ ಲೈನ್ ಕಲಿಕೆಯ ಬೇಡಿಗಳು ಎಂಬ ವಿಷಯದ ಮೇಲೆ ಒಂದು ದಿನದ ಉಪನ್ಯಾಸವನ್ನು ಉದ್ಘಾಟಿಸಿದ ಎಸ್ ಕೆ ಎನ್ ಜಿ ಕಾಲೇಜಿನ ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ
ಇದು ಈ ಕೇಂದ್ರದ ಮೊದಲ ವಿಚಾರಸಂಕಿರಣ.ವಿದ್ಯಾರ್ಥಿಗಳು ತಮ್ಮ ಜ್ಞಾನ ಅಭ್ಯುದಯಕ್ಕೆ ಇಂದು ಆಫ್ ಲೈನ್ ಜೊತೆ ಆನ್ ಲೈನ್ ತಂತ್ರಜ್ಞಾನ ಬಳಸಿಕೊಳ್ಳಬೇಕು.ಇಂದು ಜಗತ್ತು ಆಧುನಿಕ ತಂತ್ರಜ್ಞಾನದ ಮುಖೇನವೇ ಜ್ಞಾನದ ಶಿಖರವನ್ನು ತಲುಪುತಿದ್ದಾರೆ.ವಿಶ್ವವಿದ್ಯಾಲಯ ದಲ್ಲಿ ಇದೆಲ್ಲ ವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಲಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಉಪನ್ಯಾಸ ನೀಡಿದ ಶ್ರೀ ಅಕ್ಕಿ ಮಾರುತಿ ಪ್ರಾಧ್ಯಾಪಕ ಎಸ್ ಕೆ ಎನ್ ಜಿ ಕಾಲೇಜು ಅವರು ಮಾತನಾಡಿ ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಇರುವಂಥ ಕಲಿಕೆಯ ಅವಕಾಶಗಳು ಅದ್ಭುತ ವಾಗಿವೆ.ಭಾರತ ಸರ್ಕಾರದಲ್ಲಿ ಇರುವ ಇ_ಲರ್ನಿಂಗ್ ಯೋಜನೆಗಳು ಯುವಸಮುದಾಯಕ್ಕೆ ನಾಳಿನ ಭವಿಷ್ಯಕ್ಕೆ ಸಹಕಾರಿಯಾಗುತ್ತವೆ.ಅಂತೆಯೇ ಸರ್ಕಾರದ ಪ್ರಮುಖ ಅಪ್ಲಿಕೇಶನ್ ಗಳಾದ ಸ್ವಯಂ,ಮೂಕ್ಸ್,ಸ್ವಯಂಪ್ರಭಾ ಮುಂತಾದವುಗಳ ಪ್ರಾಮುಖ್ಯತೆ ಗಳ ಕುರಿತು ಹೇಳಿದರು.ಅಧ್ಯಕ್ಷತೆಯನ್ನು ಡಾ.ಜಾಜಿ ದೇವೇಂದ್ರಪ್ಪ ವಹಿಸಿದ್ದರು.ಕಾರ್ಯಕ್ರಮ ದಲ್ಲಿ ಡಾ.ಮಾನಸ,ಡಾ.ನಳಿನಿ,ಡಾ.ಚೈತ್ರಾ,ಡಾ.ಸುಲೋಚನ ಇದ್ದರು.ಡಾ.ನಳಿನಿ ಕಾರ್ಯಕ್ರಮ ನಿರೂಪಿಸಿದರು.ಡಾ.ಮಾನಸ ವಂದಿಸಿದರು.
Comments are closed.