ಸದನದ ಸಮಯವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಳು ಮಾಡುತ್ತಿರುವುದು ಖಂಡನಾರ್ಹ
ಜನರ ಗಮನವನ್ನು ದುರಾಡಳಿತದಿಂದ ಬೇರೆಡೆಗೆ ಸೆಳೆಯಲು ಸದನದ ಸಮಯವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಳು ಮಾಡುತ್ತಿರುವುದು ಖಂಡನಾರ್ಹ. ಮೂಡಾ ಹಗರಣ ವಾಲ್ಮೀಕಿ ನಿಗಮದ ಹಗರಣ ಹಾಗೂ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿಯ ಬಗ್ಗೆ ಸರಕಾರದ ಯು ಟರ್ನ್. ಇಂತಹ ವಿಷಯಗಳ ಬಗ್ಗೆ ಸಮಯ ಹಾಳು ಮಾಡುವ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ತೊಡಗಿಕೊಂಡಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದನ ಆರಂಭವಾದಾಗಿನಿಂದ ಅಭಿವೃದ್ಧಿ ವಿಷಯಗಳೇ ಕುರಿತು ಚರ್ಚೆ ಆಗಿಲ್ಲ. ಜನರ ಸಮಸ್ಯೆಗಳಿಗೆ ಸರಕಾರ ಕುರುಡಾಗಿದೆ. ಸರಕಾರದ ದುರಾಡಳಿತವನ್ನು ಮುಚ್ಚಿ ಹಾಕುವಲ್ಲಿ ಸಚಿವರು ನಿರತರಾಗಿದ್ದಾರೆ. ಅನುದಾನದ ಕೊರತೆಯಿಂದ ಶಾಸಕರು ಬಾಯಿ ಬಿಡುತ್ತಿಲ್ಲ. ಇನ್ನೂ ಕೊಪ್ಪಳ ಕ್ಷೇತ್ರದ ಸ್ಥಿತಿ ಯಾರಿಗೂ ಬೇಡ. ಅಭಿವೃದ್ಧಿಯಲ್ಲಿ ಹಿಂದೆ ಸಾಗುತ್ತಲೇ ಇದೆ. ಕೊಪ್ಪಳವನ್ನು ಸಿಂಗಾಪುರ್ ಮಾಡುತ್ತೇನೆ ಎಂದು ಭರವಸೆ ನೀಡಿ ಶಾಸಕರಾದ ಕೊಪ್ಪಳದ ಜನ ಪ್ರತಿನಿಧಿ ಮಾಯವಾಗಿಬಿಟ್ಟಿದ್ದಾರೆ. ಅವರ ಧ್ವನಿಯನ್ನು ಸದನದಲ್ಲಿ ಕೇಳಿಯೇ ಇಲ್ಲ. ಅವರನ್ನು ಸದನದಲ್ಲಿ ನೋಡಿಯೂ ಇಲ್ಲ. ಜಿಲ್ಲೆಯ ಆಡಳಿತ ಪಕ್ಷದ ಶಾಸಕ ಹಾಗೂ ಸಚಿವರ ವಿರೋಧಾಬಾಸ ಹೇಳಿಕೆಯಿಂದಲೇ ಕೊಪ್ಪಳ ಗಮನ ಸೆಳೆದಿದೆಯೇ ಹೊರತು ಅಭಿವೃದ್ಧಿ ಕಾರಣದಿಂದಲ್ಲ. ಮಾನ್ಯ ಶಾಸಕರು ಕೊಪ್ಪಳದ ಕುರಿತು ಸದನದಲ್ಲಿ ಆರೋಗ್ಯ ಪೂರ್ಣ ಚರ್ಚೆಯಲ್ಲಿ ಪಾಲ್ಗೊಳ್ಳಲಿ. ಹೆಚ್ಚಿನ ಅನುದಾನ ತರಲಿ. ಯಲಬುರ್ಗಾ ಕ್ಷೇತ್ರಕ್ಕೆ ಸರಕಾರದ ಬಳಿ ಹಣವಿದೆ. ಕೊಪ್ಪಳ ಕ್ಷೇತ್ರಕ್ಕೆ ಹಣವಿಲ್ಲ. ಈ ತಾರತಮ್ಯದ ವಿರುದ್ಧ ಸಿಡಿದೆಳಲಿ. ಶಾಸಕರ ನಿರ್ಲಕ್ಷತೆ ಹಾಗೂ ಸದನದ ಸಮಯ ಇದೇ ರೀತಿ ವ್ಯರ್ಥವಾದರೆ ಜೆಡಿ (ಎಸ್) ಪಕ್ಷ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಬೇಕಾಗುತ್ತದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments are closed.