ರಾಘವೇಂದ್ರ ಮಂಗಳೂರು ರವರ ಎರಡು ಕೃತಿಗಳ ಲೋಕಾರ್ಪಣೆ
ಗಂಗಾವತಿ-: ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗಂಗಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಿರಿಯ ಕತೆಗಾರ ರಾಘವೇಂದ್ರ ಮಂಗಳೂರು ರವರ ‘ಭೂಮಿ ದುಂಡಗಿದೆ’ ಹಾಗೂ ‘ನ್ಯಾನೋ ಕತೆಗಳು’ ದಿನಾಂಕ 17,ಬುಧವಾರದಂದು ಬಿಡುಗಡೆಯಾಗಲಿವೆ. ಸುಶಮೀಂದ್ರ ಗುರುಕುಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಚಿಂತಕ ಬೀಚಿ ಪ್ರಾಣೇಶ್ ರವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪುಸ್ತಕ ಪರಿಚಯ ರಾಘವೇಂದ್ರ ದಂಡೀನ್ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಯು ಸದಸ್ಯರಾಗಿ ನೇಮಕಗೊಂಡಿರುವ ಹಿರಿಯ ಪತ್ರಕರ್ತ ಕೆ.ನಿಂಗಜ್ಜ, ಹಿರಿಯ ಸಹಕಾರಿ ಧುರೀಣ ಶೇಖರಗೌಡ ಮಾಲೀಪಾಟೀಲ, ಸತ್ಯನಾರಾಯಣ ಕಲ್ಗುಡಿ, ಹಿರಿಯ ಪತ್ರಕರ್ತ ವಿಶ್ವನಾಥ ಬೆಳಗಲ್ ಮಠರವರನ್ನು ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶರಣೇಗೌಡ ಪೋಲೀಸ್ ಪಾಟೀಲ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀನಿವಾಸ ಅಂಗಡಿ, ಹಿರಿಯ ಸಾಹಿತಿಗಳಾದ ಶೇಖರಗೌಡ ಸರನಾಡಗೌಡರ, ಲಿಂಗಾರೆಡ್ಡಿ ಆಲೂರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನಿರ್ದೇಶಕ ರಾದ ನಾರಾಯಣರಾವ್ ವೈದ್ಯ, ಜನಾರ್ದನ್ ರಾವ್ ಅಲಬನೂರು , ಉಪನ್ಯಾಸಕ ಗುಂಡೂರು ಪವನ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರ್ಯದರ್ಶಿಗಳಾದ ಶಿವಾನಂದ ತಿಮ್ಮಾಪುರ,ಸುರೇಶ ಕಲಾಪ್ರಿಯ, ಮೈ ಲಾರಪ್ಪ ಬೂದಿಹಾಳ ಕೋರಿದ್ದಾರೆ.
Comments are closed.