ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮನೆಕಳ್ಳತನ ಪ್ರಕರಣ ಆರೋಪಿತರ ಬಂಧನ

Get real time updates directly on you device, subscribe now.

 

ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಮುನಿರಾಬಾದ, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮನೆಕಳ್ಳತನ ಪ್ರಕರಣದ ಆರೋಪಿತರ ಬಂಧನ ಮತ್ತು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮೋಟಾರ ಸೈಕಲ್ ಕಳ್ಳತನ ಪ್ರಕರಣದ ಆರೋಪಿತರ ರನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಎಸ್ಪಿ ರಾಮ್  ಅರ ಸಿದ್ಧಿ ಯವರು ಹೇಳಿದರು. . ಎಸ್ ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮ್ ಅರಸಿದ್ದಿಯವರು ಕೊಪ್ಪಳ ಯಲಬುರ್ಗಾ ಹಾಗೂ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಂತಹ ಕಳ್ಳತನ ಪ್ರಕರಣವನ್ನು ಭೇದಿಸಲಾಗಿದ್ದು ಕಳ್ಳರನ್ನು ಬಂಧಿಸಲಾಗಿದೆ ಹಾಗೂ ಹದಿಮೂರು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. 

ಹುಲಿಗಿ ಕಳ್ಳತನ ಪ್ರಕರಣ

ಮುನಿರಾಬಾದ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಗಿ ಗ್ರಾಮದಲ್ಲಿ ದಿನಾಂಕ-03-07-2024 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ:04-07-2024 ರಂದು ಬೆಳಿಗ್ಗೆ 7:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗವನ್ನು ತೆಗೆದು ಮನೆಯ ಒಳಗೆ ಹೋಗಿ ಗಾಡೇಜ್ ಲಾಕ್ ತೆಗೆದು ಅದರಲ್ಲಿದ್ದ ಅಂ.ಕಿ 5,95,000 ರೂ. ಮೌಲ್ಯದ 85 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ  ಶರಣಪ್ಪ ಚನ್ನಾಳ, ಸಾ:ಮಂಗಳೂರ, ಹಾ:ವ:ಹುಲಗಿ ರವರ ಫಿರ್ಯಾದಿ ಮೇಲಿಂದ ದಿನಾಂಕ-04.07.2024 -121/2024 500-331(4), 305 2.2.2 -2023 ಪ್ರಕಾರ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಪತ್ತೆ ಕುರಿತು ರಚಿಸಿದ ವಿಶೇಷ ಪತ್ತೆ ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಕ್ಷೇಪ್ರ ಕಾರ್ಯಾಚರಣೆ ಕೈಗೊಂಡು ವೈಜ್ಞಾನಿಕ ರೀತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಸಂಶಯಾಸ್ಪದ ವ್ಯಕ್ತಿಗಳಾದ 1] ರಿಜ್ವಾನ್ ಪಾಷಾ @ ರಿಜ್ಜು ತಂದೆ ನಜೀರ್ ಅಹ್ಮದ ವಯ:36ವರ್ಷ ಉ:ಕಾರಪೆಂಟರ್, ಸಾ:ಇಪ್ಪತ್ತೇರಿ ಮಾಗಣಿ, ತಾ:ಹೊಸಪೇಟೆ 2] ಮೌಲಾಹುಸೇನ ತಂದೆ ಸೀನಪ್ಪ ಕೊಂಡಿ@ರಾಜಾಸಾಬ, ವಯ:27ವರ್ಷ. ಉ:ಹಮಾಲಿ ಕೆಲಸ, ಸಾ:ಹೊಸಪೇಟೆ. ಜಿ: ವಿಜಯನಗರ ಇವರನ್ನು ದಿನಾಂಕ:08-07-2024 ರಂದು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಇವರು ಪ್ರಕರಣದಲ್ಲಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದು, ಅವರಿಂದ ಕಳ್ಳತನ ಮಾಡಿದ 81.66 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂ.ಕಿ ರೂ-5,94,360-00 ನೇದ್ದವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಆಪಾದಿತರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

ಪ್ರಕರಣದಲ್ಲಿ ಕಳ್ಳತನ ಮಾಡಿದ ಆರೋಪಿತರನ್ನು ಮತ್ತು ಸ್ವತ್ತನ್ನು ಪತ್ತೆ ಮಾಡಿ, ಪ್ರಕರಣವನ್ನು ಭೇದಿಸಲು  ಹೇಮಂತ್ ಕುಮಾರ್ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ,  ಮುತ್ತಣ ಸರವಗೋಳ ಡಿ.ಎಸ್.ಪಿ ಕೊಪ್ಪಳ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ  ಸುರೇಶ ಡಿ. ವೃತ್ತ ನಿರೀಕ್ಷಕರು ಕೊಪ್ಪಳ ಗ್ರಾಮೀಣ ವೃತ್ತರವರ ನೇತೃತ್ವದಲ್ಲಿ ಚಂದ್ರಪ್ಪ ಪಿ.ಐ, ಸುನೀಲ್ ಹೆಚ್ ಪಿ.ಎಸ್.ಐ (ಕಾಹಿಸು) ಮುನಿರಾಬಾದ ಠಾಣೆ, ಮತ್ತು ಸಿಬ್ಬಂದಿಯವರಾದ ಕೃಷ್ಣ ಎ.ಎಸ್.ಐ, ಮಹೇಶ ಸಜ್ಜನ್ ಹೆಚ್.ಸಿ, ರಂಗನಾಥ ಹೆಚ್.ಸಿ, ಶಿವಪುತ್ರಪ್ಪ ಹೆಚ್.ಸಿ, ಚಂದಾಲಿಂಗ ಪಿ.ಸಿ, ಈರೇಶ ಪಿಸಿ, ಮಂಜುನಾಥ ಪಿಸಿ, ಶರಣಪ್ಪ ಪಿ.ಸಿ, ಉಮೇಶ ಪಿಸಿ, ಲೋಕೇಶ ಪಿಸಿ, ವಿಶೇಷ ಘಟಕದ ಹನುಮೇಶ, ಸಂತೋಷ ಮತ್ತು ಚಾಲಕರಾದ ಚಂದ್ರಶೇಖರ, ವೆಂಕಟೇಶ ರವರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚನೆ ಮಾಡಲಾಗಿತ್ತು.

ಮನೆ ಕಳ್ಳತನ ಮಾಡಿದ ಪ್ರಕರಣವನ್ನು ದಾಖಲಾದ ನಾಲ್ಕೆ ದಿನಕ್ಕೆ ಪತ್ತೆ ಮಾಡಿ ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ  ರಾಮ್ ಎಲ್. ಅರಸಿದ್ದಿ, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ ಜಿಲ್ಲೆ, ರವರು ಶ್ಲಾಘಿಸಿರುತ್ತಾರೆ.

 

ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಯಲಬುರ್ಗಾ ಪಟ್ಟಣದಲ್ಲಿ ದಿನಾಂಕ:7-7-2023 ರಂದು ಬೆಳಿಗ್ಗೆ 10-00 ಗಂಟೆಯಿಂದ ಮದ್ಯಾಹ್ನ 12-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲದ ಬೀಗ ಮುರಿದು ಒಟ್ಟು 2,69,000-00 ರೂ ಬೆಲೆ ಬಾಳುವ 1 ತೊಲೆ ಬಂಗಾರ, 15 ತೊಲೆ ಬೆಳ್ಳಿ ಮತ್ತು ಹಾಗೂ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದರ ಬಗ್ಗೆ ಶ್ರೀ ರವಿತೇಜ ಅಧಿಕಾರಿ ಸಾ:ಯಲಬುರ್ಗಾ ರವರು ನೀಡಿದ ದೂರಿನ ಮೇರೆಗೆ ದಿನಾಂಕ-07-07-2023 ರಂದು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ-83/2023 ಕಲಂ- 454, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಪತ್ತೆ ಕುರಿತು ರಚಿಸಿದ ವಿಶೇಷ ಪತ್ತೆ ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಮಾಹಿತಿಯನ್ನು ಸಂಗ್ರಹಿಸಿ ಪಕ್ರುಸಾಬ@ಫಕೀರಸಾಬ@ಲಕ್ಷ್ಮಣ ತಂದೆ ಇಮಾಮಸಾಬ ಜಾತಗಾರ ವಯಾ:50 ವರ್ಷ ಸಾ: ಮಹಿಬೂಬ ನಗರ, ಬದಾಮಿ ತಾ:ಬದಾಮಿ ಜಿ:ಬಾಗಲಕೋಟೆ ಹಾವ: ಮೂಡಲಗಿ ತಾ:ಮೂಡಲಗಿ ಜಿ:ಬೆಳಗಾವಿ ಈತನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆಪಾದಿತನು ಪ್ರಕರಣದಲ್ಲಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದು ಅಲ್ಲದೇ ಈ ಹಿಂದೆ, ಟಿಜಿ 2021ನೇ ಸಾಲಿನಲ್ಲಿ ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ-128/2021 ಕಲಂ-454, 457, 380 ಐ.ಪಿ.ಸಿ ನೇದ್ದರ ಪ್ರಕರಣದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿತನಿಂದ ಪ್ರಕರಣದಲ್ಲಿ ಕಳ್ಳತನವಾದ ಒಟ್ಟು 82.5 ಗ್ರಾಂ ಬಂಗಾರದ ಆಭರಣ ಹಾಗೂ 150ಗ್ರಾಂ ಬೆಳ್ಳಿಯ ಆಭರಣ ಹೀಗೆ ಒಟ್ಟು ಅಂ.ಕಿ.ರೂ 5,27,000-00 ಬೆಲೆಬಾಳುವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಆಪಾದಿತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

ಪ್ರಕರಣದಲ್ಲಿನ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಕುರಿತು  ಹೇಮಂತ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಪ್ಪಳ ಮತ್ತು . ಮುತ್ತಣ್ಣ ಸರವಗೋಳ, ಪೊಲೀಸ್ ಉಪಾಧೀಕ್ಷಕರು, ಕೊಪ್ಪಳ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಶ್ರೀ ಮೌನೇಶ್ವರ ಮಾಲಿಪಾಟೀಲ್ ಸಿಪಿಐ ಯಲಬುರ್ಗಾ ವೃತ್ತ, ರವರ ನೇತೃತ್ವದಲ್ಲಿ,  ವಿಜಯ ಪ್ರತಾಪ್, ಪಿ.ಎಸ್.ಐ ಯಲಬುರ್ಗಾ ಠಾಣೆ,  ಪ್ರಶಾಂತ, ಪಿ.ಎಸ್.ಐ ಬೇವೂರ ಪೊಲೀಸ್ ಠಾಣೆ,  ಗುರುರಾಜ, ಪಿ.ಎಸ್.ಐ ಕುಕನೂರ ಪೊಲೀಸ್ ಠಾಣೆ, ಹಾಗೂ ಸಿಬ್ಬಂದಿಗಳಾದ, ವೆಂಕಟೇಶ್, ಎ.ಎಸ್.ಐ, ಕುಕನೂರ ಠಾಣೆ, ದೇವೆಂದ್ರಪ್ಪ ಸಿಹೆಚ್‌ಸಿ-53, ಮಹಿಬೂಬ ಸಿಹೆಚ್‌ಸಿ-81, ಮಹಾಂತೇಶ ಸಿಹೆಚ್‌ಸಿ-247, ಹನುಮಂತಪ್ಪ ಸಿಹೆಚ್‌ಸಿ-97, ಮಹಾಂತಗೌಡ ಸಿಪಿಸಿ-392, ಬಕ್ಷಿದಸಾಬ ಸಿಪಿಸಿ-172, ರಿಯಾಜ ಸಿಪಿಸಿ-390, ಶರಣಪ್ಪ ಸಿಪಿಸಿ-492, ಅಶ್ರಪ್ ಎಹೆಚ್‌ಸಿ-34, ಪ್ರಸಾದ ಎಪಿಸಿ-166, ಕೊಟೇಶ ಸಿಹೆಚ್‌ ಸಿ-36 ರವರನ್ನೊಳಗೊಂಡ ಒಂದು ವಿಶೇಷ ಪತ್ತೆ ತಂಡವನ್ನು ರಚನೆ ಮಾಡಲಾಗಿತ್ತು.

ಘೋರ ಸ್ವತ್ತಿನ ಪ್ರಕರಣದಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಆರೋಪಿತರನ್ನ ಪತ್ತೆ ಮಾಡಿ ಯಲಬುರ್ಗಾ ಪೊಲೀಸ್ ಠಾಣೆಯ ಎರಡು ಮನೆಕಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ  ಡಾ. ರಾಮ್ ಎಲ್. ಅರಸಿದ್ದಿ, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಪ್ಪಳ ಜಿಲ್ಲೆ ರವರು ಶ್ಲಾಘಿಸಿದ್ದಾರೆ.

 

 

 

ಕೊಪ್ಪಳ ನಗರ

 

ಕೊಪ್ಪಳ ಜಿಲ್ಲೆ, ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪಳ ನಗರದಲ್ಲಿ ದಿನಾಂಕ:20-06-2024 ರಂದು ಬೆಳಿಗ್ಗೆ 10-00 ಗಂಟೆಯಿಂದ 10-30 ಗಂಟೆಯ ನಡುವಿನ ಅವಧಿಯಲ್ಲಿ ಕೊಪ್ಪಳ ನಗರದ KSRTC ಬಸ್ ನಿಲ್ದಾಣದ ಮುಂದೆ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಹಿರೋ ಸ್ಟೆಂಡರ್ ಪ್ಲಸ್ ಮೋಟಾರ ಸೈಕಲ್ ನಂ: KA-37/U-9271 ಅಂ.ಕಿ.ರೂ: 50,000-00 ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ  ಶ್ರೀಕಾಂತ ಹಂಚಿನಾಳ ಸಾ: ಜಂಗಮರ ಕಲ್ಲುಡಿ ತಾ: ಗಂಗಾವತಿ ಇವರು ನೀಡಿದ ದೂರಿನ ಮೇಲಿಂದ ದಿನಾಂಕ- 07.07.2024 ರಂದು ಕೊಪ್ಪಳ ನಗರ ಠಾಣೆ ಗುನ್ನೆ ನಂಬರ್: 86/2024 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಪತ್ತೆ ಕುರಿತು ರಚಿಸಿದ ವಿಶೇಷ ಪತ್ತೆ ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಚಾಣಾಕ್ಷತನದಿಂದ ಮಾಹಿತಿಯನ್ನು ಸಂಗ್ರಹಿಸಿ ಸಂಶಯಾಸ್ಪದ ವ್ಯಕ್ತಿ ಶ್ರೀಕಾಂತ@ಗಿಡ್ಡ ತಂದೆ ವಿರೇಶ ಬೆಟಗೇರಿ, ವಯಾ: 21 ವರ್ಷ ಉದ್ಯೋಗ:ಬೆಲ್ದಾರ್ ಕೆಲಸ ಸಾ:ಉಪ್ಪಿನ ಬೆಟಗೇರಿ, ತಾ:ಜಿ:ಕೊಪ್ಪಳ, ಎಂಬ ವ್ಯಕ್ತಿಯನ್ನು ದಿನಾಂಕ:08-07-2024 ರಂದು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈತನು ಈ ಪ್ರಕರಣ ಅಲ್ಲದೇ ಇನ್ನೂ ಎರಡು ಮೋಟಾರ್ ಸೈಕಲ್ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದು, ಈತನಿಂದ 1] ಮೋಟಾರ ಸೈಕಲ್ ನಂ: KA-35/S- 8102 ಅಂ.ಕಿ.ರೂ: 80,000=00 2] ಪಲ್ಸರ್ ಮೋಟರ್ ಸೈಕಲ್ KA 26 X 2235 ಅಂ.ಕಿ ರೂ 80,000 3] ಸ್ಟೆಂಡರ್ ಪ್ಲಸ್ ಮೋಟಾರ ថ : KA-37/U-9271 0.0.0: 50,000-00 ໕ ພ ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಆಪಾದಿತನ ಜರುಗಿಸಲಾಗಿರುತ್ತದೆ 2,10,000-00 4 5 03 ಮೇಲೆ ಮುಂದಿನ ಕಾನೂನು ಕ್ರಮ

ಪ್ರಕರಣದಲ್ಲಿ ಕಳ್ಳತನ ಮಾಡಿದ ಆರೋಪಿತರನ್ನು ಮತ್ತು ಸ್ವತ್ತನ್ನು ಪತ್ತೆ ಮಾಡಿ, ಪ್ರಕರಣವನ್ನು ಭೇದಿಸಲು  ಹೇಮಂತ್ ಕುಮಾರ್ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ, ಶ ಮುತ್ತಣ ಸರವಗೋಳ ಡಿ.ಎಸ್.ಪಿ ಕೊಪ್ಪಳ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ ಶ್ರೀ ಜಯಪ್ರಕಾಶ ಪಿ.ಐ ಕೊಪ್ಪಳ ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚಿಸಿ ಖಾಜಾಸಾಬ, ಹೆಚಿ,ಸಿ, ಸುಭಾಸ, ಹೆಚ.ಸಿ ರಾಜಶೇಖರ, ಹೆಚ.ಸಿ ಮಹೇಶ, ಪಿಸಿ ಮಂಗಳೇಶ ರವರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚನೆ ಮಾಡಲಾಗಿತ್ತು.

ಮೋಟಾರ್ ಸೈಕಲ್ ಕಳ್ಳತನ ಮಾಡಿದ ಪ್ರಕರಣವನ್ನು ಪ್ರಕರಣ ದಾಖಲಾದ ನಾಲ್ಕು ದಿನದಲ್ಲಿ ಪತ್ತೆ ಮಾಡಿ ផ្លូវ ដថ – 23/2024, 67/2024 2 ಪ್ರಕರಣಗಳನ್ನು ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ  ರಾಮ್ ಅಧೀಕ್ಷಕರು ಕೊಪ್ಪಳ ಜಿಲ್ಲೆ, ಕೊಪ್ಪಳ ರವರು ಶ್ಲಾಘಿಸಿದ್ದಾರೆ.

 

ಈ ಸಂದರ್ಭದಲ್ಲಿ    ಹೇಮಂತ್ ಕುಮಾರ್ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ,  ಮುತ್ತಣ ಸರವಗೋಳ ಡಿ.ಎಸ್.ಪಿ ಕೊಪ್ಪಳ ಉಪ-ವಿಭಾಗ,  ನಗರ ಠಾಣೆಯ  ಜಯಪ್ರಕಾಶ ,ಪಿ.ಐ, ಗ್ರಾಮೀಣ ಠಾಣೆಯ   ಸಿಪಿಐ  ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

Get real time updates directly on you device, subscribe now.

Comments are closed.

error: Content is protected !!