Sign in
Sign in
Recover your password.
A password will be e-mailed to you.
ಗಂಗಾವತಿ-” ಶೋಷಿತ, ದುರ್ಬಲರ,ತುಳಿತಕ್ಕೊಳಗಾದವರ ನೋವುಗಳನ್ನು ಅಭಿವ್ಯಕ್ತಿಸೋದೇ ನನ್ನ ಕಾವ್ಯದ ಗುರಿ. ಕಾವ್ಯ ಮಾನವೀಯತೆಯ ಕನ್ನಡಿಯಾಗಬೇಕು.ಕವಿ ನಿರಂತರ ಬದಲಾವಣೆಯನ್ನು ದಕ್ಕಿಸಿಕೊಳ್ಳಬೇಕು.ಹಾಗಾದಾಗ ಕಾವ್ಯ ವಿಭಿನ್ನ ಸಂವೇದನೆಗಳಿಂದ ಹೊರಹೊಮ್ಮಲು ಸಾಧ್ಯ.ಕನ್ನಡದ ಹಿರಿಯ ಕವಿಗಳಾದ ಸಿದ್ಧಲಿಂಗಯ್ಯ, ಶಿವಪ್ರಕಾಶ್,ಆರೀಫ್ ರಾಜಾ ರವರ ಕವಿತೆಗಳ ಪ್ರಭಾವ ನನ್ನ ಮೇಲಾಗಿದೆ.ಅಸಮಾನತೆ, ತಾರತಮ್ಯ ಸಮಾಜದಿಂದ ತೊಲಗಬೇಕು.ನೊಂದವರ ದನಿಯಾಗಬೇಕು ಕಾವ್ಯ.ನಿರಂತರ ಓದು ಮುಖ್ಯ.ಓದು ನಮ್ಮ ಆಲೋಚನೆ, ಅಭಿವ್ಯಕ್ತಿಗೆ ಹೊಸ ಹೊಳಪನ್ನು ನೀಡುತ್ತದೆ.ನಮ್ಮ ಕವಿತೆಗಳ ಕುರಿತ ವಿಮರ್ಶೆಯನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕು. ” ಎಂದು ಹೊಸಪೇಟೆಯ
ಯುವ ಕವಿ ವಿಶಾಲ್ ಮ್ಯಾಸರ್ ಹೇಳಿದರು.ಅವರು ಇಂದು ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ನಡೆದ ಕವಿ ಕಾವ್ಯ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ರು. ವಿಶಾಲ್ ಮ್ಯಾಸರ್ ರವರ ‘ಬಟ್ಟೆಗಂಟಿದ ಬೆಂಕಿ’ಕೃತಿಯನ್ನು ವಿದ್ಯಾರ್ಥಿ ಪ್ರಶಾಂತ ಪರಿಚಯಿಸಿದರು.
ಅಧ್ಯಕ್ಷತೆಯನ್ನು ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಮುಮ್ತಾಜ್ ಬೇಗಂ ವಹಿಸಿ ಮಾತನಾಡಿದರು.ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು ವಿಶಾಲ್ ಮ್ಯಾಸರ್ರವರ ಕವಿತೆಗಳನ್ನು ವಾಚಿಸಿದರು.
ಪ್ರಾರ್ಥನೆ ಶ್ರೀನಿವಾಸ, ಸ್ವಾಗತ ಬಾಳಪ್ಪ , ಪ್ರಾಸ್ತಾವಿಕವಾಗಿ ‘ಕವಿ ಕಾವ್ಯ ಸಂವಾದ’ದ ಸಂಚಾಲಕ ಗುಂಡೂರು ಪವನ್ ಕುಮಾರ್ , ವಂದನಾರ್ಪಣೆ ಜ್ಯೋತಿ, ನಿರೂಪಣೆ ಸುಮಾ ಹೊರಪೇಟೆ ನೆರವೇರಿಸಿದರು.ಉಪನ್ಯಾಸಕರಾದ ಡಾ.ಬಸವರಾಜ ಗೌಡನಬಾವಿ,ಡಾ.ಪಾಗುಂಡಪ್ಪ ಉಪಸ್ಥಿತರಿದ್ದರು.
ವಿಭಾಗದ ವತಿಯಿಂದ ಕವಿ ವಿಶಾಲ್ ಮ್ಯಾಸರ್ ರವರನ್ನು ಸನ್ಮಾನಿಸಲಾಯಿತು.
Get real time updates directly on you device, subscribe now.
Comments are closed.