ಶುದ್ಧ ಪರಿಸರ ನಿರ್ಮಾಣದ ಅಗತ್ಯವಿದೆ : ಸಾವಿತ್ರಿ ಕಡಿ

Get real time updates directly on you device, subscribe now.

ಕೊಪ್ಪಳ ಜು. ೦೯:ಭೂಮಿದೊಡ್ಡದಾಗುವುದಿಲ್ಲ ಗಾಳಿ, ನೀರು, ಬೆಳಕು ಅಷ್ಟೇ ಇರುತ್ತದೆ. ಆದರೆಜನಸಂಖ್ಯೆ ಹೆಚ್ಚಾಗುತ್ತದೆ.ಅದನ್ನು ನಿಯಂತ್ರಣ ಮಾಡಬೇಕಾಗುತ್ತದೆ ಮತ್ತುಜನಸಂಖ್ಯೆಗೆಅನುಗುಣವಾಗಿ ಶುದ್ಧ ಪರಿಸರ ನಿರ್ಮಿಸಿಕೊಳ್ಳುವುದು ಅಗತ್ಯವಾಗಿದೆ.ಇದನ್ನುಅರಿವು ಮಾಡಿಸುವ ಪ್ರಯತ್ನ ವಿದ್ಯಾರ್ಥಿಗಳಿಂದ ಆರಂಭವಾಗಬೇಕು.ತಾವೆಲ್ಲರು ಭವಿಷ್ಯದ ನಾಗರಿಕರು, ಇಂತಹಜಾಗೃತಿ ಮೂಡಿಸುವಕಾರ್ಯದಲ್ಲಿತಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲೆಯಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಹೇಳಿದರು.ನಗರದ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿಕೊಪ್ಪಳ ಜಿಲ್ಲಾಡಳಿತ, ಪ್ರಾದೇಶಿಕ ಕಛೇರಿ, ಕರ್ನಾಟಕ ಮಾಲಿನ್ಯನಿಯಂತ್ರಣ ಮಂಡಳಿ, ಕೊಪ್ಪಳ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಹಾಗೂ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಅವರುಆರ್ಥಿಕ ಅಭಿವೃದ್ಧಿಗಳ ಜನಸಂಖ್ಯೆಗಳ ಅನುಸಾರವಾಗಿ ಉದ್ಯೋಗಗಳು ಸೃಷ್ಠಿಯಾಗಬೇಕಾದರೆ ಕೈಗಾರಿಕೆಗಳು ಬೇಕು.ಅದಕ್ಕನುಸಾರವಾಗಿ ಪರಿಸರ ಮಾಲಿನ್ಯ ನಿಯಂತ್ರಿಸಲುಉತ್ತಮ ಪರಿಸರಕೂಡಾ ನಿರ್ಮಿಸುವಜವಾಬ್ದಾರಿ ನಮ್ಮ ಮೇಲಿದೆ. ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಮರಗಳನ್ನಾಗಿ ರೂಪಸಿದಾಗ ಪರಿಸರ ಸಮತೋಲತನಕಾಪಾಡಲು ಸಾಧ್ಯವಾಗುವುದು. ಈ ಮಹತ್ವದಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಲಕಾರಿಒಡೆಯರ್‌ಅವರು ಮಾತನಾಡುತ್ತಾ, ಮಾನವತನ್ನದುರಾಸೆಯಿಂದ ಪರಿಸರವನ್ನು ನಾಶಮಾಡುತ್ತಿದ್ದಾನೆ. ಅರಣ್ಯ ಪ್ರಮಾಣ ಹೆಚ್ಚಾದಾಗ ಮಳೆಯಾಗುತ್ತದೆ.ಮಳೆಯಿಂದ ಬೆಳೆಯಾಗುತ್ತದೆ.ಮಾನವಜೀವನಅಗತ್ಯಕ್ಕೆ ಬೇಕಾದ ಪ್ರಮಾಣಅರಣ್ಯವಿಲ್ಲ. ಅದನ್ನು ಬಳಸುವ ಪ್ರಯತ್ನ ನಮ್ಮದಾಗಬೇಕು.ಸಾಕಷ್ಟು ಆಮ್ಲಜನಕದೊರೆಯಲು ಮರಗಳ ಅಗತ್ಯವಿದೆಎಂದರು.
ವಿಜಯನಗರಜಿಲ್ಲೆಯ ಹಿರಿಯ ಪರಿಸರ ಅಧಿಕಾರಿಗಳಾದ ಬಿ.ಎಸ್. ಮುರಳಿಧರ ಹಾಗೂ ಕರ್ನಾಟಕರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಪ್ಪಳ ಅಧಿಕಾರಿಗಳಾದ ಡಾ. ದೊಡ್ಡಶಾನಯ್ಯ ಹಾಗೂ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಡಾ.ಚನ್ನಬಸವ ಮಾತನಾಡಿದರು.ನಂತರ ಪರಿಸರ ದಿನಾಚರಣೆಯ ನಿಮಿತ್ಯ ವಿವಿಧ ಸ್ಪರ್ಧೆಗಳನ್ನು ಶಾಲಾ, ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನಂತರಅರಣ್ಯ ಸಂರಕ್ಷಣೆಯಕುರಿತು ಪ್ರತಿಜ್ಞಾವಿಧಿಯನ್ನು ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದಡಾ.ಸುಂದರಎಸ್. ಮೇಟಿ ಪ್ರತಿಜ್ಞಾವಿಧಿ ಬೋಧಿಸಿದರು.
ಆರಂಭದಲ್ಲಿ ಮಹಾವಿದ್ಯಾಲಯದಆವರಣದಲ್ಲಿಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿಕಡಿಅವರು ಸಸ್ಯವನ್ನು ನೆಡುವಕಾರ್ಯಕ್ರಮ ನೆರವೇರಿಸಿದರು.
ಕು.ಐಶ್ವರ್ಯ, ಕು. ಪ್ರತಿಭಾ, ಕು.ಶಿಲ್ಪಾ ಪ್ರಾರ್ಥಿಸಿದರು.ಪ್ರಾಧ್ಯಾಪಕಡಾ.ನಾಗರಾಜದಂಡೋತಿ ನಿರೂಪಿಸಿದರು.ಕೊಪ್ಪಳ ಜಿಲ್ಲಾ ಪರಿಸರ ಅಧಿಕಾರಿಗಳಾದ ಅಮರ್‌ಅವರು ವಂದಿಸಿದರು.ಇಲಾಖೆಯ ಸಿಬ್ಬಂದಿಗಳು ಹಾಗೂ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳಾದ ಪ್ರವೀಣ ಹಾದಿಮನಿ, ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್, ಡಾ.ಶಶಿಕಾಂತ ಉಮ್ಮಾಪುರೆ, ಶರಣಪ್ಪಚೌವ್ಹಾಣ, ಡಾ.ಕರಿಬಸವೇಶ್ವರ ಬಿ., ಶ್ರೀದೇವಿ, ಡಾ. ಜಾಲಿಹಾಳ ಶರಣಪ್ಪ, ಡಾ. ಅರುಣಕುಮಾರಎ.ಜಿ., ಡಾ. ವೆಂಕಟೇಶ ನಾಯ್ಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!