ಗಾಂಧಿ ತತ್ವಗಳು ಆಧುನಿಕ ಜಗತ್ತಿನ ಅನುಕರಣೀಯ ಮೌಲ್ಯಗಳಾಗಿವೆ – ಪ್ರೊ.ತಿಮ್ಮಾರೆಡ್ಡಿ ಮೇಟಿ

Get real time updates directly on you device, subscribe now.

‘ಸತ್ಯ, ಅಹಿಂಸೆ, ಸತ್ಯಾಗ್ರಹಗಳಂತಹ ಗಾಂಧಿ ತತ್ವಗಳು ಆಧುನಿಕ ಜಗತ್ತಿನ ಅನುಕರಣೀಯ ಮೌಲ್ಯಗಳಾಗಿವೆ. ಅಹಿಂಸಾ ರೂಪದ ಹೋರಾಟ‌ ಮಾದರಿಯು ಗಾಂಧೀಜಿ ಜಗತ್ತಿಗೆ ನೀಡಿದ ಮಹತ್ವದ ಕೊಡುಗೆಯಾಗಿದೆ. ಇತ್ತಿಚೆಗೆ ಸ್ವಿಡನ್ ದೇಶದ ವಿದ್ಯಾರ್ಥಿಗಳ ತಂಡ ಗಾಂಧಿ ತತ್ತ್ವಗಳ ಅಧ್ಯಯನಕ್ಕೆ ಭಾರತಕ್ಕೆ ಬರುತ್ತಿರುವುದು ಗಾಂಧಿ ಮೌಲ್ಯಗಳ ಶ್ರೇಷ್ಠತೆಯನ್ನು ಸಾರುತ್ತದೆ’ ಎಂದು ಬೆಂಗಳೂರಿನ‌ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ
ಸರಕಾರಿ ಪ್ರಥಮದರ್ಜೆ ಕಾಲೇಜು ಇರಕಲ್ಲಗಡದ ವತಿಯಿಂದ ‘ಯುವಕರನ್ನು ಸಬಲೀಕರಣಗೊಳಿಸುವಲ್ಲಿ ಗಾಂಧೀಜಿಯವರ ಚಿಂತನೆಗಳು’ ಎಂಬ ವಿಷಯದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಪ್ರೊ. ತಿಮ್ಮಾರೆಡ್ಡಿ ಮೇಟಿಯವರು ಮಾತನಾಡಿದರು.
ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ‘ಸ್ವಾವಲಂಬನೆಯ ಕುರಿತು ಗಾಂಧೀಜಿಯವರ ತತ್ತ್ವಗಳು’ ಎಂಬ ವಿಷಯದ ಕುರಿತು ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ಸಂಘಟಕರಾದ ಡಾ.ಅಬಿದ ಬೇಗಮ್ ಮಾತನಾಡುತ್ತಾ, ‘ದಕ್ಷಿಣ ಆಪ್ರಿಕಾದಲ್ಲಿ ಗಾಂಧೀಜಿ ಮೇಲೆ ಆದ ದಬ್ಬಾಳಿಕೆ, ಅವಮಾನದಿಂದಾಗಿ ಮೋಹನ ಮಹಾತ್ಮನಾಗಿ ರೂಪತಾಳಿದರು. ಯುವಕರು ಸ್ವಾಭಿಮಾನಿಗಳಾದಾಗ ಅವರಲ್ಲಿ ಧೈರ್ಯ, ಸಾಹಸ ಛಲ ಮೂಡುತ್ತದೆ. ಮೋಹನದಾಸನಿಗೆ ಮೊದಲ ಪ್ರೇರಣಾದಾಯಕ ವ್ಯಕ್ತಿಯೇ ಅವರ ತಾಯಿ.
ಮನುಷ್ಯನಿಗೆ ಪ್ರತಿಯೊಂದು ಅನುಭವದ ಮೂಲಕ ಬರುತ್ತದೆ. ಆದ್ದರಿಂದ ಗುರು ಗೋಖಲೆಯವರ ಅಭಿಪ್ರಾಯದಂತೆ ದೇಶ ಸುತ್ತಿದ್ದರಿಂದ ಆಗಿನ ದೇಶದ ಬಡತನ, ಅಜ್ಞಾನ, ಅನಕ್ಷರತೆ, ದೇಶದ ನಿಕೃಷ್ಟ ಸ್ಥಿತಿ ಅರಿವಿಗೆ ಬಂತು‌.
ಗಾಂಧೀಜಿಯವರ ಮೇಲೆ ಟಾಲ್ ಸ್ಟಾಯ್ ಅವರ ಪ್ರಭಾವದಿಂದ ಟಾಲ್ ಸ್ಟಾಯ್ ಆಶ್ರಮ ಸ್ಥಾಪಿಸಿ ಕೃಷಿಯನ್ನು ಆರಂಭಿಸಿದರು. ಮೋಹನನಿಂದ ಮಹಾತ್ಮನಾದ ಗಾಂಧೀಜಿಯ ಸ್ವಬದಲಾವಣೆ, ಸ್ವಾವಲಂಬನೆ ರೂಢಿಸಿಕೊಂಡಾಗ ಬದುಕು ಸುಂದರವೆನಿಸುತ್ತದೆ. ಗಾಂಧಿಜಿ ಕೃಷಿಕನಾಗಿ, ಕ್ಷೌರಿಕನಾಗಿ, ಜೈಲಲ್ಲಿ ಚಮ್ಮಾರನಾಗಿ, ತಾವು ಧರಿಸುವ ಬಟ್ಟೆಯನ್ನು ತಾವೇ ನೇಯ್ದುಕೊಳ್ಳಲು ಚರಕದ ಸಹಾಯದಿಂದ ,ದಿನನಿತ್ಯ ಒಂದು ಗಂಟೆ ಚರಕದಿಂದ ನೂಲಿನ ಬಟ್ಟೆ ನೇಯುತ್ತಿದ್ದರು. ಅವರು ಕೊನೆಯುಸಿರೆಳೆದಾಗಲೂ ಅವರ ಶವದ ಮೇಲೆ ಅವರು ನೇಯ್ದ ಬಟ್ಟೆಯೇ ಇತ್ತು. ಗಾಂಧೀಜಿಯವರು ಸಬರಮತಿ ಆಶ್ರಮವನ್ನು ಸ್ಥಾಪಿಸುವಾಗ ಆಶ್ರಮವನ್ನು 100 ರೂಪಾಯಿಯೊಳಗೆ ಕಟ್ಟಬೇಕು, ಸ್ಥಳೀಯ ಕಾರ್ಮಿಕರನ್ನು ಬಳಸಿಕೊಳ್ಳಬೇಕು. ಸ್ಥಳೀಯ ಕಚ್ಚಾವಸ್ತು ಬಳಸಬೇಕು ಎಂದು ನಿರ್ಬಂಧಿಸಿದರು. ಈ ಮೂಲಕ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳಲೇಬೇಕು ಎಂಬುದರ ಬಗ್ಗೆ ಗಾಂಧಿ ಹೇಳಿದ ಮೊದಲ ಸ್ವಾವಲಂಬನೆಯ ಪಾಠವಾಗಿದೆ’ ಎಂದರು. ಯುವಕರು ಯಾವುದೇ ಕೆಲಸವಾಗಿರಲಿ ಶ್ರದ್ಧೆಯಿಂದ ಮಾಡಬೇಕು ಎಂದರು. ವೈಯಕ್ತಿಕ ಸ್ವಾವಲಂಬನೆ ಹಾಗೂ ಸಾಮೂಹಿಕ ಸ್ವಾವಲಂಬನೆಯನ್ನು ರೂಢಿಸಿಕೊಳ್ಳಬೇಕೆಂಬುದು ಗಾಂಧಿ ತತ್ತ್ವವಾಗಿದೆ. ನುಡಿದಂತೆ ನಡೆದದ್ದೆ ಗಾಂಧಿ ವಿಶೇಷತೆ. ಶುದ್ಧ ಹಸ್ತದಿಂದ ಮಾಡಿದ ಕಾರ್ಯ ಇನ್ನೊಬ್ಬರಿಗೂ ಪ್ರೇರಣೆಯಾದರೆ ಅದೇ ಸ್ವಾವಲಂಬನೆ. ಇದನ್ನು ಯುವಕರು ತಪ್ಪದೆ ರೂಢಿಸಿಕೊಳ್ಳಬೇಕು. ನಿಮ್ಮೊಳಗಿರುವ ಗಾಂಧಿಯನ್ನು ನೀವು ಕಾಣಿರಿ ಎಂದು ಯುವಕರಿಗೆ ಸಲಹೆ ನೀಡಿದರು.
ಎರಡನೇ ಗೋಷ್ಠಿಯಲ್ಲಿ ವಿಜಯಪುರದ ನೇತಾಜಿಗಾಂಧಿಯವರು ‘ಜಗತ್ತಿನ ಮಹನೀಯರ ಮೇಲೆ ಮಹಾತ್ಮ ಗಾಂಧೀಜಿಯವರ ಪ್ರಭಾವ’ ಎಂಬ ವಿಷಯದ ಕುರಿತು ಮಾತನಾಡುತ್ತಾ ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್, ಹಾಂಗ್ ಸಾನ್ ಸೂಕಿ, ಒಬಾಮಾರಂತಹ ಜಗತ್ತಿನ ಸಾವಿರಾರು ಮಹನೀಯರು ಗಾಂಧಿ ತತ್ವಗಳಿಂದ ಪ್ರಭಾವಿತರಾಗಿದ್ದಾರೆ. ”ಕತ್ತಲೆಯ ನಂತರ ಬೇಳಕಿದೆ
ಸಾವಿನ‌ ನಂತರ ಜೀವನವಿದೆ” ಎಂಬ ಗಾಂಧಿ ಹೇಳಿಕೆ ಮಾರ್ಟಿನ್ ಲೂಥರ್ ಕಿಂಗ್ ತೀರಿಕೊಂಡಾಗ ಆತನ ಜೇಬಿನಲ್ಲಿದ್ದ ಚೀಟಿಯಲ್ಲಿತ್ತು.
ಬರ್ಮಾದಲ್ಲಿ 1988 ರಲ್ಲಿ ಆಂಗ್ ಸಾನ್ ಸೂಕಿ ಜೈಲಿನಿಂದ ಹೊರಬಂದು ಪ್ರಜಾಸತ್ತಾತ್ಮಕ ಸಂಘ ಕಟ್ಟಿ ಹೋರಾಡಿದಳು. ಹತ್ತು ಸಾವಿರ ಜನರ ಮಧ್ಯದಲ್ಲಿ ಮಾತನಾಡುತ್ತಾ
“ನನ್ನ ಎದೆಯಲ್ಲಿ ಬಾಪು ಇದ್ದಾನೆ. ನನ್ನನ್ನು ಕೊಲ್ಲಲಾಗುವುದಿಲ್ಲ” ಎಂದರು.
ನಾನು ಅಮೇರಿಕಾದ ಅಧ್ಯಕ್ಷರಾಗಲು ಗಾಂದಿ ತತ್ವಗಳೇ ಕಾರಣ ಎಂದವರು ಒಬಾಮ.
ಹೀಗೆ ಹತ್ತಾರು ಉದಾಹರಣೆಗಳನ್ನ ನೀಡಿ ಯುವಕರನ್ನು ಎಚ್ಚರಿಸಿ, ಗಾಂಧಿ ತತ್ವಗಳನ್ನು ಬಿತ್ತಿದರು.
ಮೂರನೇ ಘೋಷ್ಠಿಯಲ್ಲಿ ರಾಜೇಶ್ ಮುತ್ತಾಳ ಅವರು ಗಾಂಧಿ ತತ್ವಗಳು ಮತ್ತು ಪ್ರಸ್ತುತತೆ’ ಕುರಿತು ಮಾತನಾಡುತ್ತಾ, ಗಾಂಧಿ ತತ್ವಗಳು ಅಪಮೌಲ್ಯವಾಗುತ್ತಿರುವ ಕುರಿತು ಖೇದ ವ್ಯಕ್ತಪಡಿದಿದರು. ಆರಂಭದಲ್ಲಿ ನಮ್ಮ ನಿಮ್ಮಂತೆ ಕೀಟಲೆ, ಹರಟೆ ಪ್ರವೃತ್ತಿರಾಗಿದ್ದ ಗಾಂಧಿ ನಂತರದಲ್ಲಿ ಮೌಲ್ಯಗಳನ್ನು ರೂಢಿಸಿಕೊಂಡು ಮಹಾತ್ಮರಾದರು. ಪ್ರಸ್ತುತ ಸನ್ನಿವೇಶದಲ್ಲಿ ಗಾಂಧಿ ಮೌಲ್ಯಗಳ ಅಳವಡಿಕೆ ತುರ್ತು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕದ ಮುಖ್ಯಸ್ಥರಾದ ಬಸವರಾಜ ಈಳಿಗನೂರ್ ಅವರು ಮಾತನಾಡುತ್ತಾ, ಗಾಂಧಿ ತತ್ವಗಳು ಕೇವಲ ಮಾತಿನಲ್ಲಿ, ಭಾಷಣಗಳಲ್ಲಿ ಬಿಂಬಿತವಾಗದೇ ನೈಜ ಬದುಕಿನ ಅವಿಭಾಜ್ಯ ಅಂಗ ಆದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಚಾಲಕರಾದ ಪ್ರೊ. ಪ್ರಕಾಶಗೌಡ ಎಸ್ ಯು ಅವರು ಮಾತನಾಡುತ್ತಾ, ಕಾಲೇಜಿನ ಐಕ್ಯೂಎಸಿ ಘಟಕವು ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ವಿಕಾಸವನ್ನು ಉಂಟುಮಾಡಲು ಸದಭಿರುಚಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ ಇದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಉಮೇಶ ಗಾಂಧಿ ಈ ನಾಡು ಕಂಡ ಮಹಾನ್ ರಾಜಕೀಯ ಚಿಂತಕ, ಸಾಮಾಜಿಕ ಚಿಂತಕ ಮತ್ತು ಮಾನವೀಯತೆಯ ಹರಿಕಾರನಾಗಿದ್ದಾನೆ. ಅವರ ಚಿಂತನೆಗಳು ನಮ್ಮೆಲ್ಲರಿಗೂ ಸ್ಪೂರ್ತಿ ಆಗಬೇಕು ಎಂದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಆಶಾ ಸಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕದ ಮುಖ್ಯಸ್ಥರಾದ ಪ್ರೊ.ಅನಿತಾ ಎಂ, ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಶಂಕ್ರಯ್ಯ ಅಬ್ಬಿಗೇರಿಮಠ, ಪ್ರೊ. ದಿವ್ಯ, ಉಪನ್ಯಾಸಕರಾದ ವೆಂಕಟೇಶ, ಮಂಜಣ್ಣ, ಮಹೇಶಕುಮಾರ, ಪ್ರಥಮದರ್ಜೆ ಸಹಾಯಕರಾದ ಶ್ರೀಧರ, ಎಚ್.ಕೆ ನರೆಗಲ್, ಚನ್ನಪ್ಪ ಸಂಗಮೇಶ್ವರ, ಮೆಹಬೂಬ್ ಪಾಷಾ, ಸೋಮಲಿಂಗಪ್ಪ, ಬಸವರಾಜ ಕಲ್ಮನಿ, ಶಿವರಾಜ, ಹನುಮಗೌಡ, ರಘು ಟಿ,ಎಸ್ ನಾಗಪ್ಪ ಎಚ್, ಜಗದೀಶ್, ಹುಸೇನಸಾಬ ಕು.ನಿಸರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಚಾರ ಸಂಕೀರ್ಣದಲ್ಲಿ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು. ಪ್ರೊ.ಅನಿತಾ ಎಂ. ಪಾಟೀಲ ಸ್ವಾಗತಿಸಿದರು. ಕು. ಸವಿತಾ ತಳಬಾಳ, ಕು.ಜಾಹ್ನವಿ ಕಾರ್ಯಕ್ರಮ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!