ಉದ್ಯಮಿ ಶ್ರೀನಿವಾಸ್ ಗುಪ್ತಾರಿಗೆ ಸನ್ಮಾನ
ಭಾಗ್ಯನಗರ: ಟಾಪ್ ಎಕ್ಸ್ಪೋರ್ಟ್ ಅವಾರ್ಡ್ ಪ್ರಶಸ್ತಿ ಪಡೆದ ಉದ್ಯಮಿ ಹಾಗೂ ಸಮಾಜ ಸೇವಕರಾದ ಶ್ರೀನಿವಾಸ್ ಗುಪ್ತಾರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ತಮ್ಮ ಉದ್ಯಮದ ಮೂಲಕ ಕೊಪ್ಪಳ ತಾಲೂಕಿನಾಧ್ಯಂತ ಸಾವಿರಾರು ಜನರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗ ಕಲ್ಪಿಸಿರುವಂತಹ ಉದ್ಯಮಿ ಶ್ರೀನಿವಾಸ್ ಗುಪ್ತ ಸತತ 23ನೇ ಸಲ ಟಾಪ್ ಎಕ್ಸ್ ಪೋರ್ಟ್ ಅವಾರ್ಡ್ ಪಡೆದಿದ್ದಾರೆ. ಪ್ಲೆಕ್ಸ್ ಕೌನ್ಸಿಲ್ ಆಫ್ ಇಂಡಿಯಾ ನೀಡುವ ಈ ಪ್ರಶಸ್ತಿ ಶ್ರೀನಿವಾಸ ಹೇರ್ ಇಂಡಸ್ಟ್ರಿಯ ಶ್ರೀನಿವಾಸ ಗುಪ್ತಾರಿಗೆ ದೊರೆತಿದೆ. ತಮ್ಮ ಸಮಾಜಮುಖಿ ಸೇವೆಗಳಿಂದ ಖ್ಯಾತಿಯಾಗಿರುವ ಶ್ರೀನಿವಾಸ ಗುಪ್ತಾರವರ ಸೇವೆ ಇದೆ ರೀತಿ ಮುಂದುವರೆಯಲಿ ಎಂದು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಿರಾಜ್ ಬಿಸರಳ್ಳಿ, ರಾಜು ಬಿ.ಆರ್, ಖಲಿಲ್ ಹುಡ್ಡೆವು , ಅಖಿಲ್ ಹುಡೇ ವು ಉಪಸ್ಥಿತರಿದ್ದರು.
Comments are closed.