ವಿಜ್ಞಾನವನ್ನು ಕಲಿಯಲು ವಿದ್ಯಾಥಿಗಳು ಪ್ರಶ್ನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ: ಡಾ. ಉದಯಕುಮಾರ ಖಡ್ಕೆ
ಕೊಪ್ಪಳ ಜು. ೦೬: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ವತಿಯಿಂದಜರುಗಿದಒಂದು ದಿನದಕಾರ್ಯಾಗಾರ ಉದ್ಘಾಟಕರಾಗಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದಡಾ. ಉದಯಕುಮಾರಖಡ್ಕೆಅವರು ಆಗಮಿಸಿದ್ದರು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದಅವರುಚಂದ್ರಯಾನ ಯಶಸ್ವಿ ಉಡಾವಣೆಯ ನಂತರ ವಿಜ್ಞಾನಿಗಳ ಅಗತ್ಯತೆಯ ಮತ್ತು ಪ್ರಾಮುಖ್ಯತೆಯು ಹೆಚ್ಚಾಗಿದೆಎಂದರು.ಅಲ್ಲದೇ ವಿದ್ಯಾರ್ಥಿಗಳು ಭೌತಶಾಸ್ತ್ರ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದುವಂತೆ ಪ್ರಾಧ್ಯಾಪಕರು ಪ್ರೇರೆಪಿಸಬೇಕು ಎಂದು ತಿಳಿಸಿದರು.ಮುಂದುವರೆದು, ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಆಡಳಿತಾಧಿಕಾರಿಗಳಾದ ಡಾ.ಮಹಾಂತೇಶ ಸಾಲಿಮಠಅವರು ಮಾತನಾಡುತ್ತಾ ವಿಜ್ಞಾನ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ವೈಜ್ಞಾನಿಕ ತಳಹದಿಯ ಜೊತೆಗೆಆಸಕ್ತಿಯನ್ನು ರೂಢಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸದರಿಕಾರ್ಯಾಗಾರದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ.ಚನ್ನಬಸವ ಅಧ್ಯಕ್ಷತೆಯನ್ನು ವಹಿಸಿದ್ದರು.ಜೊತೆಗೆಕಾರ್ಯಾಗಾರದಲ್ಲಿಉಪಪ್ರಾಚಾರ್ಯರಾದಡಾ. ಕರಿಬಸವೇಶ್ವರ ಬಿ, ಐ.ಕ್ಯೂ.ಎ.ಸಿ ಸಂಯೋಜಕರಾದಡಾ.ಅರುಣಕುಮಾರಎ.ಜಿ. ಭಾಗವಹಿದ್ದರು.ಕಾರ್ಯಕ್ರಮದಆಯೋಜಕರಾದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದಡಾ. ಮಂಜುನಾಥ ಎಂ, ಪ್ರಾಧ್ಯಾಪಕರಾದ ಡಾ.ಶಶಿಕಾಂತ ಉಮ್ಮಾಪುರೆ, ಡಾ.ಮಂಜುನಾಥ ಗಾಳಿ, ಡಾ.ಜಾಲಿಹಾಳ ಶರಣಪ್ಪ, ಡಾ. ಸುಂದರ ಮೇಟಿ, ಡಾ.ಅಜಿತ ನಾರಾಯಣ ಉಪಸ್ಥಿತರಿದ್ದರು.
ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶರಣಪ್ಪಚೌವ್ಹಾಣ ಸ್ವಾಗತಿಸಿದರು.ಬಿ.ಎಸ್ಸಿ ೬ನೇ ಸೆಮ್ ವಿದ್ಯಾರ್ಥಿನಿ ಸಂಗೀತ ಪ್ರಾರ್ಥನೆ ಮಾಡಿದರು.ನಿರೂಪಣೆಯನ್ನು ಕು.ವೆನಿಲಾ ಮತ್ತು ವೈಷ್ಣವಿ ನಿರ್ವಹಿಸಿದರು. ವಿಭಾಗದಉಪನ್ಯಾಸಕರಾದಅಕ್ಷಯಕುಮಾರಎಲ್. ವಂದಿಸಿದರು.
Comments are closed.