ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಅರ್ಜಿ ಆಹ್ವಾನ
ಕೊಪ್ಪಳ: ಕೊಪ್ಪಳ ತಾಲ್ಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಸಮಾಜದ ವಿದ್ಯಾರ್ಥಿಗಳು ಇದೇ ಜುಲೈ 14 ರಂದು ಸಿರಸಪ್ಪಯ್ಯ ಸ್ವಾಮಿ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಭಾಗವಹಿಸಬಹುದಾಗಿದೆ. ಎಸ್ ಎಸ್ ಎಲ್ ಸಿ ಯಲ್ಲಿ ಶೇ.80% ಕ್ಕಿಂತ ಹೆಚ್ಚು ಅಂಕ ಪಡೆದ ಹಾಗೂ ಪಿಯುಸಿಯಲ್ಲಿ ಶೇ.85% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು 2023-24 ರಲ್ಲಿ ಪಾಸಾಗಿರಬೇಕು, ಅರ್ಜಿಯೊಂದಿಗೆ ಅಂಕಪಟ್ಟಿ, ಆಧಾರ ಕಾರ್ಡ್, 2 ಫೋಟೋಗಳೊಂದಿಗೆ ಜುಲೈ 07 ರೊಳಗಾಗಿ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಮಾಜದ ಅಧ್ಯಕ್ಷರಾದ ದೇವಪ್ಪ ಹೆಚ್.ಬಡಿಗೇರ ಮೊ.8197403561 ಹಾಗೂ ವಿಶ್ವಕರ್ಮ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎ.ಪ್ರಕಾಶ ಮೊ.9945088643 ಇವರನ್ನು ಸಂಪರ್ಕಿಸಬಹುದು.
ಅರ್ಜಿಯನ್ನು ಈ ವಿಳಾಸಕ್ಕೆ ಸಲ್ಲಿಸಬಹುದಾಗಿದ್ದು, ಸುರೇಶ ವಿ.ಬಡಿಗೇರ, ಶ್ರೀ ಲಕ್ಷ್ಮೀ ರೇಡಿಯೋ ಸೆಂಟರ್, ಅಶೋಕ ಸರ್ಕಲ್, ಕೊಪ್ಪಳ ಮೊ.9480756652, ಪ್ರಶಾಂತ ಡಿ.ಬಡಿಗೇರ, ಖಾದಿ ಭಂಡಾರ, 20ನೇ ಮಳಿಗೆ, ತಾಲ್ಲೂಕು ಕ್ರೀಡಾಂಗಣ, ಕೊಪ್ಪಳ ಮೊ.9901491381 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Comments are closed.