ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ
ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನದ
ಗಂಗಾವತಿ ನಗರದಲ್ಲಿ ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಡಿ.ನಾಗಲಕ್ಷ್ಮಿ ಮಾತನಾಡುತ್ತ ಈ ಸಮ್ಮೇಳನಕ್ಕೆ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ನಗರ ಎಲ್ಲಾ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದೀರಿ ನಿಮ್ಮರಿಗೂ ಅಭಿನಂದನೆಗಳು. ಆಶಾ ಕಾರ್ಯಕರ್ತೆಯರ ಬಹುಮುಖ್ಯ ಬೇಡಿಕೆಗಳಾದ ಆಶಾ ಕಾರ್ಯಕರ್ತೆಯರ ಕಾರ್ಮಿಕರೆಂದು ಪರಿಗಣಿಸಲು ಹಾಗೂ ಆಶಾ ಕಾರ್ಯಕರ್ತೆಯರ ಕೆಲಸ ಕಾಯಂಗೊಳಿಸುವ ಇನ್ನಿತರ ಬೇಡಿಕೆಗಳಿಗಳ ಬಗ್ಗೆ ನೀವೆಲ್ಲ ಚರ್ಚಿಸಬೇಕು. ನಗರ ಆಶಾ ಕಾರ್ಯಕರ್ತೆಯರು ಗ್ರಾಮೀಣ ಹಾಗೂ ನಗರದ ಜನರು ಮತ್ತು ಆರೋಗ್ಯ ಇಲಾಖೆಯ ನಡುವೆ ಕೊಂಡಿಯಾಗಿ ಕಳೆದ 15 ವರ್ಷಗಳಿಂದ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಆಶಾ ಕಾರ್ಯಕರ್ತೆಯರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲಕ್ಕಾಗಿ ಕಳೆದ ಹದಿನೈದು ವರ್ಷಗಳಿಂದಲೂ ಸಹ ಸತತವಾಗಿ ಹೋರಾಡುತ್ತಿದ್ದಾರೆ. ಬಡ ಕುಟುಂಬಗಳಿಂದ ಬರುವ ಆಶಾ ಕಾರ್ಯಕರ್ತೆಯರಿಗೆ ಯಾವುದೇ ಸರ್ಕಾರಗಳು ಕಾರ್ಮಿಕರ ಸ್ಥಾನಮಾನವನ್ನಾಗಲಿ, ಕನಿಷ್ಟ ವೇತನವನ್ನಾಗಲಿ ಕಲ್ಪಿಸದಿರುವುದು ದುರದೃಷ್ಟಕರ, ಪ್ರಸಕ್ತವಾಗಿ ತಮ್ಮ ಹೋರಾಟದ ಬೇಡಿಕೆಗಳನ್ನು ಯಶಸ್ವಿಯಾಗಿ ಗಳಿಸಿಕೊಳ್ಳಲು ಅಗತ್ಯವಿರುವ ಸಂಘಟನಾತ್ಮಕ ಗಟ್ಟಿಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ, ಗ್ರಾಮೀಣ ಘಟಕದ ಅಧ್ಯಕ್ಷ ಜ್ಯೋತಿಲಕ್ಷ್ಮಿ, ಸುನೀತಾ ಉಪಸ್ಥಿತರಿದ್ದರು. ನಗರ ಆಶಾ ಕಾರ್ಯಕರ್ತೆಯರ ಸಮ್ಮೇಳನ ಗಂಗಾವತಿ
ಹೊಸ ಸಮಿತಿ ಅಧ್ಯಕ್ಷರು -ವಿಜಯ ಲಕ್ಷ್ಮಿ ಆಚಾರ್ ಉಪಾಧ್ಯಕ್ಷರುಗಳು:-ಲಾಲ್ ಬಿ,ಅನ್ನಪೂರ್ಣ,ರಜಿಯಾಬೇಗಂ,ಚಂಪಾ, ಆಫ್ರಿನಾ, ದ್ರಾಕ್ಷಿಯಣಿ,ರಾಜೇಶ್ವರಿ,ಅಮರಮ್ಮ, ಕಾರ್ಯದರ್ಶಿ -ಶಿವಮ್ಮ ಯಲಬುರ್ಗಾ ಕಾರ್ಯದರ್ಶಿ ಮಂಡಳಿ ಸದಸ್ಯರು
ಶರಣಮ್ಮ,ಮೀನಾಕ್ಷಿ ರೇಖಾ,ರಾಧಾ, ಖುರ್ಷಿದ ಬಾನು, ಸಂಗೀತ, ಲಲಿತಾ, ಸುಮಾ, ಅಫ್ರೀನಾ, ಈರಮ್ಮಗಂಗಾವತಿ, ಸರೋಜ ಬಾಯಿ, ಜಯಶ್ರೀ ಗಂಗಾವತಿ, ಲಕ್ಷ್ಮಿ 25 ವಾರ್ಡ್, ಸವಿತಾ,ಸಮೀರಾ ಬಾನು,ಹನುಮಕ್ಕ, ಪ್ರೇಮ
Comments are closed.