ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕೊಠಡಿ ಉದ್ಘಾಟನೆ
ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕೊಠಡಿ ಉದ್ಘಾಟನೆ
ಗಂಗಾವತಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕೊಠಡಿಯನ್ನು ಇಂದು ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಎಸ್ ಬಿ ಖಾದ್ರಿ ಅವರು ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗಂಗಾವತಿ ತಾಲೂಕ ಸಮಿತಿಯ ಸದಸ್ಯರಾದ ಹಮೀದ್ ಮುಲ್ಲಾ, ರಾಜಪ್ಪ, ಸನ್ನಿಕ್, ನಾಗಮ್ಮ ಗಡ್ಡಿ, ಓಂಕಾರೆಪ್ಪ, ಪರಶುರಾಮ, ಅಹಮದ್ ಪಟೇಲ್, ಮಂಜುನಾಥ್ ಕಲಾಲ್, ಇನ್ನಿತರರು ಇದ್ದರು.
“ಘನ ಕಾಂಗ್ರೇಸ್ ಸರಕಾರ ಜಾರಿಗೆ ತಂದಿರುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಮ್ಮ ನಾಯಕರಾದ ಇಕ್ಬಾಲ್ ಅನ್ಸಾರಿಯವರು ನನ್ನ ಹೆಸರನ್ನು ಆಯ್ಕೆ ಮಾಡಿದ್ದು ಎಲ್ಲ ಹಿರಿಯರ, ಮುಖಂಡರ ಮತ್ತು ಸಮಿತಿಯ ಸದಸ್ಯರ ಜೊತೆ ಯೋಜನೆಯನ್ನು ಮನೆಮನೆಗೆ ತಲುಪಿಸಲಾಗುವುದು. ಸಮಸ್ಯೆ ಕಂಡುಬಂದಲ್ಲಿ ತಾಲೂಕ ಪಂಚಾಯತಿಯಲ್ಲಿರುವ ಕಚೇರಿಗೆ ಸಂಪರ್ಕಿಸಬಹುದು
ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ವೆಂಕಟೇಶ್ ಬಾಬು ಹೇಳಿದ್ದಾರೆ
Comments are closed.