ಜನನಾಯಕ ಕೆ.ಎಂ.ಸೈಯದ್ 44 ನೇ ಹುಟ್ಟುಹಬ್ಬ ಆಚರಣೆ

Get real time updates directly on you device, subscribe now.

ಕೆ.ಎಂ.ಸೈಯದ್ ಅವರ 44 ನೇ ಹುಟ್ಟುಹಬ್ಬ ಆಚರಣೆ
ಕೊಪ್ಪಳ : ರಾಜ್ಯದ ಕೆಪಿಸಿಸಿ ಸಂಯೋಜಕ ಹಾಗೂ ಕೆಎಂಎಸ್ ಸಮುಾಹ ಸಂಸ್ಥೆಯ ಅಧ್ಯಕ್ಷ ಕೆ.ಎಂ.ಸೈಯದ್ ಅವರು 44ನೇ ಜನ್ಮದಿನವನ್ನು ಕೊಪ್ಪಳ ನಗರದ ಸುರಭಿ ವೃದ್ರಾಶ್ರಮದಲ್ಲಿ ಆಚರಿಸಿದರು.
ಕೊಪ್ಪಳ,ವಿಜಯನಗರ ಬಳ್ಳಾರಿ, ಗದಗ, ಬಾಗಲಕೋಟಿ ಜಿಲ್ಲೆಗಳು ಸೇರಿದಂತೆ ಕೊಪ್ಪಳ ನಗರದ ವಿವಿಧಡೆ ಕೆ.ಎಂ ಸೈಯದ್ ಅವರ ಅಭಿಮಾನಿಗಳು ಕೇಕ್ ಕತ್ತರಿಸಿ ಬಡವರಿಗೆ ಹಾಲು, ಹಣ್ಣು,ಬಿಸ್ಕೆಟ್,  ಬಟ್ಟೆ ವಿತರಿಸಿ ಜನ್ಮದಿನವನ್ನು ಆಚರಿಸಿ ದೇವರು ಅವರಿಗೆ ಆಯಸ್ಸು, ಆರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸಿದರು.
ನಂತರ ಸಿದ್ದರಾಮೇಶ್ವರ ಸಹಕಾರಿ ಬ್ಯಾಂಕ್ ,ಪಲ್ಟಾನ್ ಗಲ್ಲಿಯಲ್ಲಿ ,ಕೆಎಂಎಸ್ ಸಮೂಹ ಸಂಸ್ಥೆ ಕಚೇರಿಯಲ್ಲಿ ಜನ್ಮದಿನಾಚರಣೆಯನ್ನು ಆಚರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯಮನೂರಪ್ಪ ನಾಯಕ, ಯುವ ಮುಖಂಡ ಸಲೀಂ ಅಳವಂಡಿ ,ನಗರಸಭೆ ಮಾಜಿ ಸದಸ್ಯರಾದ  ಖಾಜಾವಲಿ  ಬನ್ನಿಕೊಪ್ಪ , ರಾಮಣ್ಣ ಹದ್ದಿನ್ , ರಾಮು ಪೂಜಾರ್ , ದಾವಲ್ ಮಲ್ಲಿಕ್, ದಾನಪ್ಪ ಹಲಿಗೇರಿ, ಇಮಾಮ್ ಹುಸೇನ್ , ಹಸುದ್ದೀನ್ ,ಪಾಪು ಸಾಹೇಬ್ ಕುದ್ರಿ ಮೋತಿ, ವೆಂಕಟೇಶ್ ಪೂಜಾರ್ ,ಹನುಮೇಶ್ ಹುಲಿಗಿ,ಪ್ರಭಾಕರ್ ಹುಣಸಿಹಾಳ್ ಸೇರಿದಂತೆ ಅಪಾರ ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!