SDPI ಪಕ್ಷದ 16 ನೇ ಸಂಸ್ಥಾಪನಾ ದಿನಾಚರಣೆ
ಕೊಪ್ಪಳ : ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ 16 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಬೈಕ್ ರ‌್ಯಾಲಿ ಶುಕ್ರವಾರ ನಗರದಲ್ಲಿ ಜರುಗಿತು.
ಬೆಳಗ್ಗೆ ಆಜಾದ್ ಸರ್ಕಲ್ ಬಳಿ ಇರುವ ಪಕ್ಷದ ಕಚೇರಿಯಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿದ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರು ಹುಜೂರ್ ಅಹ್ಮದ್ ಮಾತನಾಡಿ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಎಸ್ ಡಿ ಪಿಐ ಪಕ್ಷ ಸ್ಥಾಪನೆಯಾಗಿದ್ದು ಹಲವಾರು ಸಂಕಷ್ಟಗಳನ್ನು ದಾಟಿ ಹೋರಾಟಗಳ ಮೂಲಕ ಅಸ್ತಿತ್ವ ಪಡೆದಿದೆ. ಸದಾ ನ್ಯಾಯ ಪರವಾದ ಪಕ್ಷವಾಗಿ ದೇಶದಲ್ಲಿ ಹಸಿವು ಮುಕ್ತ ಭಯ ಮುಕ್ತ ನೆಮ್ಮದಿಯ ವಾತಾವರಣ ನಿರ್ಮಾಣಕ್ಕೆ ಪಕ್ಷ ಶ್ರಮಿಸುತ್ತಿದೆ ಎಂದರು.
ಮುಖ್ಯ ಅತಿಥಿ ಅಂಜುಮನ್ ಖಿದ್ಮತೆ ಮುಸ್ಲಮೀನ್ ಸಂಸ್ಥೆ ಕಾರ್ಯದರ್ಶಿ ಸಿರಾಜ್ ಮನಿಯಾರ ಮಾತನಾಡಿ ಎಷ್ಟೊ ಪಕ್ಷಗಳು ಹಣ ಬಲದ ಮೇಲೆ ಅಸ್ತಿತ್ವ ಪಡೆಯಲು ಯತ್ನಿಸುತ್ತವೆ. ಆದರೆ ಎಸ್ ಡಿ ಪಿಐ ಜನ ಬಲದಿಂದ ಹೋರಾಟದ ಮೂಲಕ ದೇಶದಲ್ಲಿ ಗಮನ ಸೆಳೆದಿದ್ದು ನಿಜವಾದ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿದೆ ಎಂದರು.
ವೇದಿಕೆಯಲ್ಲಿದ್ದ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಸಲಿಂ ಖಾದ್ರಿ , ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಫಾರೂಖ್ ಅತ್ತಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಜಾಮುದ್ದೀನ್ ಮಾಳೆಕೊಪ್ಪ ಮಾತನಾಡಿದರು.
ನಂತರ ಮಧ್ಯಾಹ್ನ ಕಾತರಕಿ ರಸ್ತೆಯ ಶ್ರೀ ಶೈಲ ನಗರದಿಂದ ಪಕ್ಷದ ಕಚೇರಿವರೆಗೆ ಪಕ್ಷದ ಕಾರ್ಯಕರ್ತರು ಬೆಂಬಲಿಗರಿಂದ ಬೈಕ್ ರ‌್ಯಾಲಿ ಜರುಗಿತು.
Comments are closed.