ಡಾ. ಕಮಲಾ ಹಂಪನಾ ನಿಧನಕ್ಕೆ ಡಾ. ಹನುಮಂತಪ್ಪ ಅಂಡಗಿ ಸಂತಾಪ
ಕೊಪ್ಪಳ: ಕನ್ನಡ ನಾಡಿನ ಹಿರಿಯ ಸಾಹಿತಿಯಾಗಿದ್ದ ಡಾ. ಕಮಲಾ ಹಂಪನಾ ಅವರು ನಿಧನರಾಗಿದ್ದಕ್ಕೆ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂತಾಪ ಸೂಚಿಸಿದ್ದಾರೆ. ಕಮಲಾ ಹಂಪನಾ ಅವರು ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ನಿರಂತರವಾಗಿ ೬೦ ವರ್ಷಗಳ ಕಾಲ ಸಾಹಿತ್ಯ ಕೃಷಿ ಮಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರುವಾಸಿಯಾಗಿದ್ದರು. ಜೈನ ಸಾಹಿತ್ಯ ಕೃಷಿಯಲ್ಲಿ ವಿಶೇಷವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅವರು ಮಹಿಳಾ ಸಬಲೀಕರಣ ಮತ್ತು ಸೃಜನಶೀಲತೆಯ ಪ್ರತೀಕದಂತಿದ್ದರು. ೬೦ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನಶೀಲ ಕೃತಿಗಳು ಸೇರಿವೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ, ಮೂಡಬಿದಿರೆಯಲ್ಲಿ ನಡೆದ ೭೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಲಾಯಿತು. ಒಟ್ಟಾರೆಯಾಗಿ ಡಾ. ಕಮಲಾ ಹಂಪನಾ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
Comments are closed.