ಯೋಗ ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯಕ್ಕೂ ಮದ್ದು : ಶ್ರೀನಿವಾಸ ಕಲ್ಯಾಣ  

Get real time updates directly on you device, subscribe now.

ಗಂಗಾವತಿ : ಎಸ್.ಕೆ.ಆರ್ ಗ್ರೂಪ್  ಶ್ರೀ ಕೆಂಧೋಳೆ ರಾಮಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಸ್ ಕೆ ಆರ್ ಪಿಯು ಕಾಲೇಜಿನಲ್ಲಿ  ವಿಶ್ವ ಯೋಗ ದಿನಾಚರಣೆ ಮತ್ತು ವಿಶ್ವ ಸಂಗೀತ ದಿನಾಚರಣೆಯನ್ನು ಆಚರಿಸಲಾಯಿತು.ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ ಕಲ್ಯಾಣಿ  ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯ ಶಿವಾನಂದ ಮೇಟಿ  ಯೋಗ ಕಾರ್ಯಕ್ರಮದ ಉದ್ದೇಶ ಕುರಿತು ಪ್ರಾಸ್ತಾವಿಕ ಮಾತನಾಡಿ ಯೋಗವು ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯಕ್ಕೂ ಮದ್ದು. ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ ಹಾಗೂ ಸರಳ ಆಸನಗಳನ್ನು ಮಾಡುವುದರ ಮೂಲಕವೂ ದೇಹ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಬಹುದು. ಕೋಪ, ಏಕಾಗ್ರತೆಯ ಕೊರತೆ, ಒತ್ತಡ ಈ ರೀತಿಯ ಮಾನಸಿಕ ಸಮಸ್ಯೆಗಳಿಗೆ ದಿನನಿತ್ಯ ಯೋಗ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ವಿದ್ಯಾರ್ಥಿ ಜೀವನದಂದಲೇ ನಿತ್ಯ ಯೋಗಾಸನಗಳನ್ನು ಅಭ್ಯಾಸ ಮಾಡಿದರೆ, ದೇಹ ಹಾಗೂ ಮನಸ್ಸು ನಮ್ಮ ಹಿಡಿತದಲ್ಲಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ನಿತ್ಯ ಯೋಗ ಹಾಗೂ ಪ್ರಾಣಾಯಾಮ ಅಭ್ಯಾಸ ಮಾಡಬೇಕು ಎಂದರು.
ನಂತರ ಒಂದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ  ದೈಹಿಕ ಶಿಕ್ಷಕ ಶಂಕರ್, ಶಿಕ್ಷಕಿಯರಾದ ಸಂಗೀತಾ ,ಪ್ರೇಮಾ  ಯೋಗಭ್ಯಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.ಶಿಕ್ಷಕಿ ಸಾಯೆರಾ ಬಾನು ನಿರೂಪಿಸಿದರು.
ಈ ಸಂದರ್ಭದಲ್ಲಿ  ಸಂಸ್ಥೆಯ ಸದಸ್ಯ ಯಶವಂತಕುಮಾರ, ಟ್ರಸ್ಟಿನ ಕಾರ್ಯದರ್ಶಿ ರಾಮಮೋಹನ್,  ಮುಖ್ಯೋಪಾಧ್ಯಾಯರಾದ ವೆಂಕಟೇಶ ದೇಸಾಯಿ, ಮದ್ದಾನೆಪ್ಪ, ಶಿಕ್ಷಕಿಯರಾದ ಯಶೋದಾ, ಕವಿತಾ, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಶಿಕ್ಷಕವೃಂದ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!