ಪಂಪಣ್ಣ ಹಂಪಣ್ಣ ಕೆಂಚಗುಂಡಿ ನಿಧನ -ಸಂತಾಪ
ಭಾಗ್ಯನಗರದ ಪಂಪಣ್ಣ ಹಂಪಣ್ಣ ಕೆಂಚಗುಂಡಿ ಇವರು ದಿನಾಂಕ 18/06/2024 ಸಾಯಂಕಾಲ 5:15 ನಿಮಿಷಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ ಅಂತ್ಯ ಕ್ರಿಯೆಯನ್ನು ಭಾಗ್ಯನಗರದ ರುದ್ರಭೂಮಿಯಲ್ಲಿ ನಾಳೆ ಬೆಳ್ಳಿಗೆ 11:30 ಕ್ಕೆ ನೆರವೇರಿಸಲಾಗುವದು, ಇವರಿಗೆ 2 ಗಂಡು ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ, ಕುರುವಿನ ಶೆಟ್ಟಿ ಸಮಾಜದ ಮುಖಂಡರು, ಶ್ರೀ ಗ್ರಾಮ ದೇವತೆ ಹಾಗೂ ಶ್ರೀ ಮಾರುತೇಶ್ವರ ಸೇವಾ ಟ್ರಸ್ಟ್ ಕಮಿಟಿಯ ಗೌರವಾಧ್ಯಕ್ಷರು , ಉದ್ಯಮಿಯಾಗಿ, ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು
ಪಂಪಣ್ಣ ಹಂಪಣ್ಣ ಕೆಂಚಗುಂಡಿ ನಿಧನಕ್ಕೆ ಭಾಗ್ಯನಗರದ ಮುಸ್ಲಿಂ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ ಬಿಸರಳ್ಳಿ, ಪರಶುರಾಮ ಪವಾರ ಸೇರಿದಂತೆ ಆಪ್ತ ಸ್ನೇಹ ಬಳಗ, ವಿವಿಧ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಸರ್ವ ಸ್ನೇಹಿತರು ಆ ಸೃಷ್ಟಿಕರ್ತನಲ್ಲಿ ಪ್ರಾರ್ಥಿಸುತ್ತೇವೆ.
Comments are closed.